ಫ್ಯಾಕ್ಟ್‌ಚೆಕ್: ಅಯೋದ್ಯಯಲ್ಲಿ ಮಂಗವೊಂದು ಶ್ರೀರಾಮನ ದರ್ಶನಕ್ಕೆ ಪ್ರತಿದಿನ ಬರುತ್ತದೆಯೇ?

ಮಂಗವೊಂದು ತಾನಾಗಿಯೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಈ ಘಟನೆ ಅಯೋಧ್ಯೆಯಲ್ಲಿ ನಡೆದಿದೆ ಮತ್ತು ಕೋತಿ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ನಮಸ್ಕರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಅಯೋಧ್ಯೆಯಲ್ಲಿ ಮಂಗವು ಪ್ರತಿ ದಿನ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಬಂದು ಶ್ರೀರಾಮನ ಮಂದಿರದಲ್ಲಿ ನಮಿಸಿ ಹೋಗುತ್ತಿತ್ತು.ಒಂದು ದಿನ ರಾತ್ರಿ ಆ ದೇವಸ್ಥಾನದ ಅರ್ಚಕರೊಬ್ಬರು ಆಕಸ್ಮಿಕ ಈ ಘಟನೆಯನ್ನು ನೋಡಿ ಅಚ್ವರಿಗೊಂಡಿದ್ದಾರೆ, ಮಾರನೆ ದಿನ ಮತ್ತೆ ಅದೇ ಸಮಯಕ್ಕೆ ಮಂಗವು ಬಂದಿದೆ , ಈ ಮಂಗನ ಶ್ರೀರಾಮನ ಭಕ್ತಿ ನೋಡಿ ಅಚ್ಚರಿಗೊಂಡಿದ್ದಾರೆ. ಇದನ್ನು ಮೊಬೈಲ್ ನಲ್ಲಿ ಸೇರೆ ಹಿಡಿದ್ದಾರೆ. ಈಗ ವಿಡಿಯೋ ಭಾರಿ ವೈರಲ್ ಆಗಿದ್ದು ಮನುಷ್ಯರಂತೆ ಪ್ರಾಣಿಗಳಿಗೂ ಧೈವ ಭಕ್ತಿ ಇದೆ ಎಂಬುದನ್ನು ನಾವು ಮರೆಯಬಾರದು ಎಂಬ ಹೇಳಿಕೆಯೊಂದಿಗೆ ಹಲವು ಫೇಸ್‌ಬುಕ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಪ್ರತಿನಿತ್ಯ ಅಯೋಧ್ಯೆಯ ದೇವಸ್ಥಾನಕ್ಕೆ ಮಂಗವು ಭೇಟಿ ನೀಡಿ ದೇವರಿಗೆ ನಮಿಸುತ್ತಿರುವ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಬರುವ ಆಡಿಯೋದಲ್ಲಿ ನಿರೂಪಕನು ಕೋತಿಯು ದರ್ಶನಕ್ಕಾಗಿ ಪ್ರತಿದಿನ ‘ಬಾಬಾ ಬುದ್ಧೇಶ್ವರ ಧಾಮ್’ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳುವುದನ್ನು ಕೇಳಬಹುದು. ಅದನ್ನೆ ಸುಳಿವನ್ನಾಗಿ ಬಳಸಿಕೊಂಡು ದೇವಸ್ಥಾನವನ್ನು ಗೂಗಲ್ ಸರ್ಚ್ ಮಾಡಿದಾಗ, ಅದು ಉತ್ತರ ಪ್ರದೇಶದ ಲಕ್ನೋದಲ್ಲಿದೆ ಎಂದು ಕಂಡುಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿರುವ ದೇವಸ್ಥಾನದ ದೃಶ್ಯಗಳು ಕೂಡ ಇದನ್ನೇ ದೃಢಪಡಿಸುತ್ತವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಇದಲ್ಲದೆ, ಡಿಸೆಂಬರ್ 2022 ರಂದು, ದೇವಾಲಯದ ಅರ್ಚಕರು ಮತ್ತು ಭಕ್ತರು, ನವಭಾರತ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ,  ಕಳೆದ 2 ತಿಂಗಳುಗಳಿಂದ ಕೋತಿಯು ನಿಯಮಿತವಾಗಿ ದೇವಾಲಯಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಿದ್ದಾರೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ಅದು ಮೊದಲು ಪರಶುರಾಮನ ವಿಗ್ರಹಕ್ಕೆ, ನಂತರ ಬುದ್ಧೇಶ್ವರ ಮಹಾದೇವನಿಗೆ (ಶಿವನ ದ್ಯೋತಕ) ನಮಸ್ಕರಿಸುತ್ತದೆ.

ಕೋತಿಯ ಈ ನಡವಳಿಕೆಗಳು ಸ್ವಯಂಪ್ರೇರಿತವೇ ಅಥವಾ ಬೇರೆ ಯಾರಾದರೂ ಇದಕ್ಕೆ ತರಬೇತಿ ನೀಡಿದ್ದಾರೆಯೇ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಈ ಘಟನೆಯು ಲಕ್ನೋದಲ್ಲಿ ನಡೆದಿದೆಯೇ ಹೊರತು ಅಯೋಧ್ಯೆಯಲ್ಲಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ: ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights