ಫ್ಯಾಕ್ಟ್‌ಚೆಕ್: ಪತ್ರಕರ್ತ ಸಿದ್ದಿಕ್ ಕಪ್ಪನ್ ಹೆಸರಿನಲ್ಲಿ ಹರಿದಾಡುತ್ತಿವೆ ನಕಲಿ ಟ್ವೀಟ್

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಎರಡು ವರ್ಷಗಳ ನಂತರ ಗುರುವಾರ ಲಕ್ನೋ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 2020ರ ಅಕ್ಟೋಬರ್ ನಲ್ಲಿ ಹತ್ರಾಸ್ ನಲ್ಲಿ ನಡೆದಿದ್ದ ದಲಿತ ಮಹಿಳೆಯ ಸಾವಿನ ಸಂದರ್ಭದಲ್ಲಿ ಕಪ್ಪನ್ ಮತ್ತು ಇತರ ಮೂವರನ್ನು ಬಂಧಿಸಲಾಗಿತ್ತು. ಕಪ್ಪನ್ ಮತ್ತು ಇತರ ಮೂವರು ಹತ್ರಾಸ್ ಮಹಿಳೆಯ ಸಾವಿನ ಮೇಲೆ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಿಕ್ ಕಪ್ಪನ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿತ್ತು. ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಶ್ಯೂರಿಟಿ ಸಲ್ಲಿಕೆಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಕಪ್ಪನ್ ಲಕ್ನೋ ಜೈಲಿನಿಂದ ಹೊರ ಬಂದರು.

ಸಿದ್ದಿಕ್ ಕಪ್ಪನ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಹೆಸರಿನ ಟ್ವಿಟರ್ ಖಾತೆಯೊಂದು ಸಕ್ರಿಯವಾಗಿದ್ದು ಸುಮಾರು 5800 ಫಾಲೋವರ್ಸ್‌ ಹೊಂದಿದೆ ಎಂದು ಹೇಳಲಾಗುತ್ತಿದೆ.

ಕಪ್ಪನ್‌ನ ಬಿಡುಗಡೆಯ ಕುರಿತು ಟ್ವೀಟ್‌ಗಳಿಗೆ ಮರುಟ್ವೀಟ್ ಮಾಡಲಾಗಿದೆ. ಪ್ರಧಾನ ಮಂತ್ರಿ ಸೇರಿದಂತೆ ಭಾರತೀಯ ಜನತಾ ಪಕ್ಷದ (BJP) ನಾಯಕರ ಹಲವು ಟ್ವೀಟ್‌ಗಳೊಂದಿಗೆ ಸಂವಹನ ನಡೆಸಿದೆ. ಹಾಗಿದ್ದರೆ ಈ ಟ್ವಿಟರ್ ಖಾತೆಯು ನಿಜವಾಗಿಯೂ ಸಿದ್ದಿಕ್ ಕಪ್ಪನ್ ಅವರದ್ದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಿದ್ದಿಕ್ ಕಪ್ಪನ್ ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್‌ನಲ್ಲಿ  ಹಂಚಿಕೊಳ್ಳಲಾಗಿರುವ ಪೋಸ್ಟ್‌ಗಳನ್ನು ಸ್ವತಃ ಸಿದ್ದಿಕ್ ಕಪ್ಪನ್ ಅವರೇ ಮಾಡಿದ್ದಾರೆಯೇ ಎಂದು ಪರಿಶೀಲಿಸಿದಾಗ, ಇದು ಇದು ಸಿದ್ದಿಕ್ ಅವರ ಹೆಸರಿನಲ್ಲಿರುವ ನಕಲಿ ಖಾತೆ ಎಂದು ಸ್ಪಷ್ಟವಾಗಿದೆ. ಈ ಕಾತೆಗೂ ಪತ್ರಕರ್ತ ಸಿದ್ದಿಕ್‌ ಕಪ್ಪನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ.

ಹಾಗಿದ್ದರೆ ಈ ಖಾತೆ ಯಾರದ್ದು:

ಪ್ರತಿ ಟ್ವಿಟರ್ ಖಾತೆಗೆ ಒಂದು ಯೂನಿಕ್ ಕೋಡ್‌ಅನ್ನು ನೀಡಲಾಗುತ್ತದೆ. ವೈರಲ್ ಪೋಸ್ಟ್‌ಅನ್ನು ಪ್ರಸಾರಮಾಡಲಾದ ಟ್ವಿಟರ್ ಖಾತೆಯನ್ನು ಪರಿಶೀಲಿಸಿದಾಗ ಅಂತಹದೆ ಕೋಡ್‌ ನಂ ಲಭ್ಯವಾಗಿದೆ. ಖಾತೆಯ Twitter ID 1424004828603195395 ಆಗಿದೆ.

ಪ್ರತಿಯೊಂದು ಟ್ವಿಟರ್ ಖಾತೆಗೂ ವಿಶಿಷ್ಟ ಐಡಿ ಇರುತ್ತದೆ.
ಪ್ರತಿಯೊಂದು ಟ್ವಿಟರ್ ಖಾತೆಗೂ ವಿಶಿಷ್ಟ ಐಡಿ ಇರುತ್ತದೆ

ಲಭ್ಯವಾದ ಐಡಿಯನ್ನು ಬಳಸಿಕೊಂಡು Google ಸರ್ಚ್ ಮಾಡಿದಾಗ, 27 ಮೇ 2022 ರಂದು ಡಿಜಿಟಲ್ ಫೊರೆನ್ಸಿಕ್ಸ್, ರಿಸರ್ಚ್ ಅಂಡ್ ಅನಾಲಿಟಿಕ್ಸ್ ಸೆಂಟರ್ (DFRAC) ವೆಬ್‌ಸೈಟ್ ಪ್ರಕಟಿಸಿದ ಲೇಖನ ಲಭ್ಯವಾಗಿದೆ. ಖಾತೆಯನ್ನು ತನಿಖೆ ಮಾಡಿದ ಮಾಡಿದ ಆಧಾರದಲ್ಲಿ ವೈರಲ್ ಟ್ವೀಟ್‌ ಮತ್ತು AmarPas28124530′ ಖಾತೆಯ ಎರಡು ಐಡಿಯು ಸಂಯೋಜಿತವಾಗಿದೆ ಎಂದು ಉಲ್ಲೇಖಿಸಿದೆ.

‘@AmarPas28124530’  ಎಂಬ ಖಾತೆಯ ಐಡಿಯನ್ನು ಹುಡುಕಿದಾಗ ‘@SiddiqueKappan’ ಎಂದು ಟ್ಯಾಗ್ ಮಾಡಲಾದ ಹಲವಾರು ರಿಪ್ಲೇಗಳು ಲಭ್ಯವಾಗಿವೆ. ಈ ಖಾತೆಯನ್ನು RJD ಪಕ್ಷದ ಅಮರ್ ಪಾಸ್ವಾನ್‌ ಹೆಸರಿನಿಂದ ಕಪ್ಪನ್‌ಗೆ ಎಂಬ ಹೆಸರಿಗೆ ಬದಲಾಯಿಸಲಾಗಿದೆ ಎಂದು ಸೂಚಿಸುತ್ತದೆ.

ಎರಡೂ ಖಾತೆಗಳು ಒಂದೇ ತಿಂಗಳು ಮತ್ತು ವರ್ಷವನ್ನು ತೋರಿಸಿವೆ. ಅಂದರೆ ಈ ಎರಡೂ ಖಾತೆಗಳು ಒಂಸದೇ ಆಗಿದ್ದು ಸಿದ್ದಿಕ್ ಬಿಡುಗಡೆ ಆಗುತ್ತಿದಂತೆ ಹಳೆಯ ಖಾತೆಯನ್ನು ಅವರ ಹೆಸರಿನ್ನು ಸೇರಿಸಲಾಗಿದೆ. ಇದಲ್ಲದೆ, ಸಿದ್ದಿಕ್ ಕಪ್ಪನ್ ಅವರ ಪತ್ನಿ ರೈಹಾನಾಥ್ ಕಪ್ಪನ್ ಅವರು ಕ್ವಿಂಟ್‌ಗೆ ಈ ಖಾತೆ ನಕಲಿ ಎಂದು ಖಚಿತಪಡಿಸಿದ್ದಾರೆ.

ಈ ಎಲ್ಲಾ ಆಧಾರಗಳ ಮೂಲಕ ಸ್ಪಷ್ಟವಾಗುವುದೇನೆಂದರೆ, ಪ್ರಸ್ತುತ ಸಿದ್ದಿಕ ಕಪ್ಪನ್ ಅವರ ಹೆರಿನ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳು ಅಮರ್ ಪಾಸ್ವಾನ್ ಎಂಬ ವ್ಯಕ್ತಿಯ ಹೆರಿನ ಹಳೆಯ ಟ್ವಿಟರ್ ಖಾತೆ ಎಂಬುದು ಸ್ಪಷ್ಟವಾಗಿದೆ. ಅಮರ್ ಪಾಸ್ವಾನ್ ಎಂಬ ಟ್ವಿಟರ್ ಖಾತೆಯ ಹೆಸರನ್ನು ಸಿದ್ದಿಕ್ ಕಪ್ಪನ್ ಎಂಬ ಹೆಸರಿಗೆ ಬದಲಾಯಿಸಲಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವ್ಯಾನ್‌ಅನ್ನು ಸುತ್ತುವರೆದ ಬೃಹತ್ ಗಾತ್ರದ ಹಾವು ಎಂಬ ವೈರಲ್ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights