ಫ್ಯಾಕ್ಟ್‌ಚೆಕ್ : ಪಾಕ್‌ನಲ್ಲಿ ಮಹಿಳೆಯರ ಶವಗಳ ಮೇಲೆ ನಡೆಯುವ ಅತ್ಯಾಚಾರ ತಡೆಯಲು ಗೋರಿಗಳಿಗೆ ಬೀಗ ಹಾಕಲಾಗಿತ್ತೆ?

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ” ಮೃತಪಟ್ಟ ತಮ್ಮ ಹೆಣ್ಣುಮಕ್ಕಳ ಶವಗಳು ಅತ್ಯಾಚಾರಕ್ಕೆ ಒಳಗಾಗುವುದನ್ನು ತಡೆಯಲು ಪಾಕಿಸ್ತಾನದಲ್ಲಿ ಪೋಷಕರು ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲದೆ ಮುಖ್ಯವಾಹಿನಿಯ ಸುದ್ದಿ ತಾಣಗಳಲ್ಲಿಯೂ ಇದೇ ಸುದ್ದಿಯನ್ನು ಪ್ರಸಾರ ಮಾಡುತ್ತ ” ರೇಪ್‌ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕಿಸ್ತಾನದ ಪಾಲಕರು ಎಂದು ಸುದ್ದಿಯನ್ನು ಬಿತ್ತರಿಸಿವೆ. ಈ ಹಿಂದೆಯೂ ಪಾಕಿಸ್ತಾನದಲ್ಲಿ ಶವ ಸಂಭೋಗದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು.

 

ಪಠ್ಯ 'G 4G 3:25 AM Voi) 4G2 Search Posts About Videos More PUBLIC Public TV 4h ರೇಪ್ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್ ಪಾಲಕರು... See more i publictv.in ರೇಪ್ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್ ಪಾಲಕರು You and 28 others 17 comments 3 shares Haha Comment Share' ಹೇಳುತ್ತಿದೆ ನ ಚಿತ್ರವಾಗಿರಬಹುದು

ಹಾಗಿದ್ದರೆ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ನಡೆದಿವೆಯೇ? ಮೃತ ಹೆಣ್ಣು ಮಕ್ಕಳ ಪೋಷಕರು ಹೆಣ್ಣು ಮಕ್ಕಳ ದೇಹವನ್ನು ಅತ್ಯಾಚಾರದಿಂದ ಕಾಪಾಡಲು ಸಮಾಧಿಗೆ ಬೀಗ ಹಾಕಿದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಬೀಗ ಹಾಕಿರುವ ಗೋರಿ ಇರುವುದು ಪಾಕಿಸ್ತಾನದಲಲ್ಲ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ, ಪೋಸ್ಟ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಫೋಟೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಸಮಾಧಿಯೊಂದಕ್ಕೆ ಕಬ್ಬಿಣದ ಗ್ರಿಲ್ ಅಳವಡಿಸಿ ಬೀಗ ಹಾಕಿದ್ದ ಫೋಟೋ ಕೂಡ ಫೇಕ್ ಆಗಿದ್ದು, ಆ ಫೋಟೋ ಪಾಕಿಸ್ತಾನದಲ್ಲ. ಅದು ಭಾರತದ ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ನಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿರುವ ಗೋರಿಯದ್ದು ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಬೀಗ ಹಾಕಿರುವ ಈ ಸಮಾಧಿ ಇರುವುದು ತೆಲಂಗಾಣದ ರಾಜಧಾನಿಯಾದ ಹೈದರಾಬಾದ್ ನ ಮದನ್ ಪೇಟ್ ನಲ್ಲಿರುವ ದರದ್ ಜಂಗ್ ಕಾಲೋನಿಯಲ್ಲಿರುವ ಸಲಾರ್ ಮುಲ್ಕ್ ಎಂಬ ಮಸೀದಿಯ ಮುಂಭಾಗದಲ್ಲಿರುವ ಮುಸ್ಲಿಮರ ಸ್ಮಶಾನದಲ್ಲಿ. ಈ ಸ್ಮಶಾನವು ಈ ಮಸೀದಿಯ ಆಡಳಿತ ಮಂಡಳಿಯ ಸುಪರ್ದಿಯಲ್ಲಿದ್ದು, ಯಾರೇ ಶವಸಂಸ್ಕಾರ ಮಾಡಬೇಕಾದರೂ ಮಸೀದಿಯವರಿಂದ ಅನುಮತಿ ಪಡೆದು ಅಲ್ಲಿ ಶವಸಂಸ್ಕಾರ ಮಾಡಬೇಕಿದೆ.

ವಿಶಾಲವಾಗಿರುವ ಈ ಸ್ಮಶಾನಕ್ಕೊಂದು ಕಾಂಪೌಂಡ್ ಇದ್ದು, ಕಾಂಪೌಂಡಿನ ಪ್ರವೇಶ ದ್ವಾರದಲ್ಲಿ ಗೇಟ್ ಅಳವಡಿಸಲಾಗಿದೆ. ಸ್ಮಶಾನಕ್ಕೆ ಪ್ರವೇಶ ಮಾಡುವ ಹಾದಿಯಲ್ಲೇ ಯಾವುದೋ ಒಂದು ಕುಟುಂಬ, ಸುಮಾರು ಎರಡು-ಎರಡೂವರೆ ವರ್ಷಗಳ ಹಿಂದೆ ಮಸೀದಿಯ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ಅಲ್ಲಿ ತಮ್ಮ ಸಂಬಂಧಿಕರೊಬ್ಬರನ್ನು ದಫನ್ ಮಾಡಿತ್ತು. ಆ ವ್ಯಾಜ್ಯವು ಇಂದಿಗೂ ಆ ಕುಟುಂಬ ಹಾಗೂ ಮಸೀದಿಯ ಆಡಳಿತ ಮಂಡಳಿಯ ನಡುವೆ ನಡೆಯುತ್ತಿದೆ. ಆದರೆ, ಸ್ಮಶಾನ ಪ್ರವೇಶಿಸಿದ ಕೂಡಲೇ ದಾರಿಗೆ ಅಡ್ಡವಾಗಿ ಸಿಗುವ ಈ ಗೋರಿಯ ಮೇಲೆ ಯಾರೂ ಕಾಲಿಟ್ಟುಕೊಂಡು ಓಡಾಡದಿರಲಿ ಎಂದು ಆ ಕುಟುಂಬಸ್ಥರು, ಆ ಗೋರಿಯ ಮೇಲೆ ಕಬ್ಬಿಣದ ಸರಳುಗಳ ಗ್ರಿಲ್ ನಿರ್ಮಿಸಿ ಅದಕ್ಕೆ ಬೀಗವನ್ನೂ ಹಾಕಿದ್ದಾರೆಂದು ಹೇಳಲಾಗಿದೆ. ಹಾಗಾಗಿ ಈ ಚಿತ್ರ ಪಾಕಿಸ್ತಾನಕ್ಕೆ ಸಂಬಂಧಿಸಿದ್ದಲ್ಲ.

ಪಾಕಿಸ್ತಾನದಲ್ಲಿ ಶವಗಳ ಮೇಲೆ ಅತ್ಯಾಚಾರ ನಡೆಸಲಾಗಿತ್ತು

ಪಾಕಿಸ್ತಾನದಲ್ಲಿ ಗೋರಿಗಳಿಂದ ಮಹಿಳೆಯರ ಶವಗಳನ್ನು ಹೊರಗೆ ತೆಗೆದು ಅತ್ಯಾಚಾರ ಎಸಗುವ ಅನೇಕ ಪ್ರಕರಣಗಳು ವರದಿಯಾಗಿದ್ದವು. 2011ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಶವಕಾಮ ಪ್ರಕರಣ ಬೆಳಕಿಗೆ ಬಂದಿತ್ತು. ಕರಾಚಿಯ ಉತ್ತರ ನಜಿಮಾಬಾದ್‌ನಲ್ಲಿ ಸಮಾಧಿ ಕಾವಲುಗಾರ ಮುಹಮ್ಮದ್ ರಿಜ್ವಾನ್ ಎಂಬಾತನನ್ನು ಬಂಧಿಸಲಾಗಿತ್ತು. 48 ಮಹಿಳೆಯರ ಶವಗಳ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆತ ಒಪ್ಪಿಕೊಂಡಿದ್ದ. ಇತ್ತೀಚಿನ ದಿನಗಳಲ್ಲಿ ಇಂತಹ ಶವ ಸಂಭೋಗದ ಕೃತ್ಯಗಳು ಏರಿಕೆಯಾಗುತ್ತಿರುವುದು ಪಾಕಿಸ್ತಾನದ ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, 2011ರ ಹಿಂದೆ ಪಾಕ್‌ನಲ್ಲಿ ಶವಗಳ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂಬ ವರದಿಗಳು ನಿಜ ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಗೋರಿಗೆ ಬೀಗ ಹಾಕಿರುವ ಚಿತ್ರಕ್ಕೂ, ಪಾಕಿಸ್ತಾನಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ :ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಘಟನೆ ನಡೆದಾಗ ಇದದ್ದು ಕಾಂಗ್ರೆಸ್‌ ಸರ್ಕಾರವಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights