ಫ್ಯಾಕ್ಟ್‌ಚೆಕ್ : ಫೋಟೊಗೆ ಫೋಸ್ ನೀಡುತ್ತಿದ್ದ ಹುಡುಗಿಯನ್ನು ನುಂಗಿಹಾಕಿದ ಮೊಸಳೆ ! ವಿಡಿಯೋದ ವಾಸ್ತವವೇನು?

ಗೆಳೆತಿಯರಿಬ್ಬರು ಅರಣ್ಯ ಪ್ರದೇಶದ ನದಿ ಪಾತ್ರದಲ್ಲಿ ಫೋಟೊ ತೆಗೆಯುವ ಸಂದರ್ಭದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ನೀರಿನಿಂದ ಎಗರಿ ನದಿಯ ದಡದಲ್ಲಿ ಫೋಟೊ ತೆಗೆಸಿಕೊಳ್ಳಲು ನಿಂತಿದ್ದ ಹುಡುಗಿಯನ್ನು ಕ್ಷಣಮಾತ್ರದಲ್ಲಿ ನುಂಗಿಹಾಕುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೊವನ್ನು ವೀಕ್ಷಿಸಿದ ಹಲವು ಸಾಮಾಜಿಕ ಬಳಕೆದಾರರು ಶಾಕ್‌ಗೆ ಒಳಗಾಗಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ವಾಸ್ತವ ಏನೆಂದು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ದೃಶ್ಯ ಎಲ್ಲಿ ನಡೆದಿದೆ ಮತ್ತು ಘಟನೆಯ ಹಿನ್ನಲೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಹುಡುಗಿಯೊಬ್ಬಳು ತನ್ನ ಗೆಳತಿಯ ಫೋಟೋವನ್ನು ಸೆರೆಹಿಡಿಯಲು ಮುಂದಾದಾಗ ಮೊಸಳೆಯು ಹುಡುಗಿಯನ್ನು ನುಂಗುತ್ತದೆ ಎಂದು ತೋರಿಸುವ ‘ಆಘಾತಕಾರಿ’ ವಿಡಿಯೊ ಹಲವು ವರ್ಷಗಳಿಂದ  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋ ನೈಜ ಘಟನೆಯಲ್ಲ ಎಂದು latestly ವರದಿ ಮಾಡಿದೆ.

ಹಲವರು ಇದು ನೈಜ ಘಟನೆ ಎಂದು ಭಾವಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಆದರೆ ವೀಡಿಯೊದಲ್ಲಿ ಕಂಡುಬರುವ ಅಲಿಗೇಟರ್ ದಾಳಿಯು ನಿಜವಲ್ಲ, ಅದೊಂದು ವಾಣಿಜ್ಯ ಜಾಹೀರಾತು ಎಂದು ವರದಿಯಲ್ಲಿ ಉಲ್ಲೇಖಿಸಿದೆ. Preview PH ಎಂಬ ಯೂಟ್ಯೂಬ್‌ ಚಾನೆಲ್‌ ಸಂಪೂರ್ಣ ಜಾಹಿರಾತಿಗೆ ಸಂಬಂಧಿಸಿದ್ದಾಗಿದೆ, ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್‌ನ ಜಾಹಿರಾತನ್ನು ಈ ರೀತಿ ಬೃಹತ್ ಗಾತ್ರದ ಮೊಸಳೆಯೊಂದು ಹುಡುಗಿಯನ್ನು ನುಂಗಿಹಾಕಿದರೂ ಈ ಕಂಪನಿಯ ಉತ್ಪನ್ನಗಳಿಗೆ ಏನು ಆಗುವುದಿಲ್ಲ ಎಂಬ  ಹಿನ್ನಲೆಯಲ್ಲಿ ಜಾಹಿರಾತನ್ನು ಚಿತ್ರಿಸಲಾಗಿದೆ. ಅಂದರೆ ಬಾಗಿನ ಗುಣಮಟ್ಟ ಉತ್ಕೃಶ್ಟವಾಗಿದೆ ಎಂಬುದನ್ನು ಸೂಚ್ಯವಾಗಿ ಬಿಂಬಿಸುವ ಜಾಹಿರಾತು ಇದಾಗಿದೆ.

Picture: Crocodile Swallows Up a Girl - Choose your bag wisely

ವೈರಲ್ ಯೂಟ್ಯೂಬ್ ವೀಡಿಯೋ ವಾಸ್ತವವಾಗಿ 2013 ರಲ್ಲಿ ಮ್ಯಾಗಜೀನ್‌ನ #ImAPreviewGirl ಅಭಿಯಾನದ ಒಂದು ಭಾಗವಾಗಿದ್ದು, ‘ಹೌ ನಾಟ್ ಟು Instagram’ ಶೀರ್ಷಿಕೆಯನ್ನು ಹೊಂದಿದೆ. ಇದು ವಾಸ್ತವವಾಗಿ “ನಿಮ್ಮ ಚೀಲವನ್ನು ಬುದ್ಧಿವಂತಿಕೆಯಿಂದ ಆರಿಸಿ”  (Choose your Bag Wisely) ಎಂಬ ಅಡಿಬರಹದೊಂದಿಗೆ ಕೊನೆಗೊಳ್ಳುವ ಈ ವಿಡಿಯೊ (ತಮಾಷೆಯ) ವಾಣಿಜ್ಯ ಜಾಹಿರಾತು ಮ್ಯಾಗಜೀನ್ ವೆಬ್‌ಸೈಟ್ preview.ph ನಲ್ಲಿ ವಿವರಿಸಿದಂತೆ ಒಂದೆರಡು ಪ್ರಶಸ್ತಿಗಳನ್ನು ಗೆದ್ದಿದೆ.

ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರರು, ವೀಡಿಯೊದ ಕೊನೆಯಲ್ಲಿ ಬರುವ ಜಾಹೀರಾತು ವಿವರಗಳನ್ನು ಟ್ರಿಮ್ ಮಾಡಿದ್ದಾರೆ ಮತ್ತು ಅದನ್ನು ಮೊಸಳೆ ದಾಳಿಯ ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ನದಿಯ ಪಾತ್ರದಲ್ಲಿ ಫೊಟೋ ತೆಗೆಯುತ್ತಿರುವ ಹುಡುಗಿಯನ್ನು ಮೊಸಳೆ ತಿಂದು ಹಾಕಿದ ನೈಜ ಘಟನೆ ಎಂದು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: Latestly

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬಲಪಂಥೀಯರಿಗೆ ತಿರುಗೇಟು ನೀಡಲು ದೀಪಿಕಾ ಪಡುಕೋಣೆ ಕೇಸರಿ ಶೂ ಧರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights