ಫ್ಯಾಕ್ಟ್‌ಚೆಕ್ : ಮಣಿಪುರಕ್ಕೆ ಕಳ್ಳದಾರಿಯಲ್ಲಿ ಬರುತ್ತಿರುವ ನುಸುಳುಕೋರರು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮ್ಯಾನ್ಮಾರ್‌ನಿಂದ ಕಳ್ಳದಾರಿಯ ಮೂಲಕ ನುಸುಳುತ್ತಿರುವ ನುಸುಳುಕೋರರು ಎಂಬ ಪ್ರತಿಪಾದನೆಯೊಂದಿ ವಿಡಿಯೋ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಸ್ಲಿಮರಂತೆ ಬಟ್ಟೆ ತೊಟ್ಟಿರುವ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಕಡಿದಾದ ಬೆಟ್ಟವೊಂದರ ದಾರಿಯನ್ನು ಹಾದುಹೋಗುವ ದೃಶ್ಯವಿರುವ ವಿಡಿಯೊ ವೈರಲ್ ಆಗಿದೆ.

‘ನೋಡಿ, ಮ್ಯಾನ್ಮಾರ್‌ನಿಂದ ಭಾರತದ ಮಣಿಪುರಕ್ಕೆ ಇರುವ ಕಳ್ಳದಾರಿ. ಈ ಜನರು ತಮ್ಮ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ, ಭಾರತಕ್ಕೆ ನುಸುಳುತ್ತಾರೆ. ಮಣಿಪುರ ಹಿಂಸಾಚಾರಕ್ಕೆ ಈ ಜನರೇ ಜಾವಾಬ್ದಾರರು’ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗೂಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ.

ವಿಡಿಯೋಗೆ ಸಂಬಂಧಿಸಿದಂತೆ ಮತ್ತಷ್ಟ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಯೂಟ್ಯೂಬ್ ಚಾನೆಲ್ DENA ನಲ್ಲಿ ಈ ವೈರಲ್ ವೀಡಿಯೊದ ಕ್ಲಿಪ್‌ಗಳನ್ನು ಹೊಂದಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಸುಮಾರು 43 ನಿಮಿಷಗಳ ಈ ವೀಡಿಯೊದಲ್ಲಿನ ಕೆಲವು ದೃಶ್ಯಗಳು ವೈರಲ್ ಕ್ಲಿಪ್‌ನಲ್ಲಿವೆ. 12 ಮಾರ್ಚ್ 2023 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊ ಇರಾನ್‌ನ ದೇನಾ ಪರ್ವತ ಪ್ರದೇಶವನ್ನು ಖುರ್ದ್‌ ಅಲೆಮಾರಿ ಜನಾಂಗದ ಜನರು ಹಾದುಹೋಗುತ್ತಿರುವ ದೃಶ್ಯ ಎಂಬುದು ಸ್ಪಷ್ಟವಾಗಿದೆ.

ವಿಡಿಯೋದಲ್ಲಿ ನಿರ್ದಿಷ್ಟವಾಗಿ ಈ ಬುಡಕಟ್ಟಿನ ಹೆಸರನ್ನು ಉಲ್ಲೇಖಿಸದಿದ್ದರೂ (ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಅವರು ಭಕ್ತಿಯಾರಿ ಜನರು ಎಂದು ಹೇಳಲಾಗಿದೆ), ಈ ವಿಡಿಯೋದ ದೃಶ್ಯಗಳನ್ನು  ಮ್ಯಾನ್ಮಾರ್‌ನಿಂದ ಭಾರತಕ್ಕೆ ಪ್ರವೇಶಿಸುವ ರೋಹಿಂಗ್ಯಾಗಳ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಪಾಕ್ ಧ್ವಜಗಳ ಪ್ರದರ್ಶನ ಮಾಡಲಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights