ಫ್ಯಾಕ್ಟ್‌ಚೆಕ್ : ಇಂಡೋನೇಷ್ಯಾದ ಮಿಲಿಟರಿ ತರಬೇತಿ ವಿಡಿಯೋವನ್ನು ಜಮ್ಮು ಕಾಶ್ಮೀರದ ಸೈನಿಕನ ದೃಶ್ಯಗಳು ಎಂದು ಹಂಚಿಕೆ
21 ಡಿಸೆಂಬರ್ 2023 ರಂದು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಹೊಂಚುದಾಳಿಯಲ್ಲಿ ಕನಿಷ್ಠ ನಾಲ್ವರು ಸೈನಿಕರು ಪ್ರಾಣ ಕಳೆದುಕೊಂಡು ಮೂವರು ಗಾಯಗೊಂಡಿದ್ದರು.
ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಭಯೋತ್ಪಾದಕರನ್ನು ಸದೆಬಡಿಯಲು ಎಂತಹ ಸಂದರ್ಭವನ್ನು ನಮ್ಮ ಸೈನಿಕರು ಎದುರಿಸಲು ಸಿದ್ದ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
Visual from #Encounter Site of #Poonch where 4 Brave #IndianArmy soldiers lost his life .
72 hoors waiting for ✂️#Terroristattack pic.twitter.com/dlKnMJYpGo
— Ruheen Bi (@iamruheen) December 27, 2023
ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಯೋದರ ಸಾವಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ನಮ್ಮ ಸೈನಿಕರು ಎಂಬ ಹೇಳಿಕೆಯೊಂದಿಗೆ ಪಹರೆ ಕಾಯುತ್ತಿರುವ ಯೋದನ ಪಕ್ಕದಲ್ಲೇ ಹಾವೊಂದು ಹೆಡೆ ಎತ್ತಿ ಸೈನಿಕನನ್ನೆ ನೋಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ದೃಶ್ಯಗಳು ನಿಜವಾಗಿಯೂ ಕಾಶ್ಮೀರದ ಯೋದರು ಭಯೋತ್ಪಾದಕರ ವಿರುದ್ದ ದಾಳಿ ನಡೆಸಲು ಶೋಧ ನಡೆಸುತ್ತಿರುವ ನೈಜ ದೃಶ್ಯಗಳೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕ್ಯಾಲೋನ್ ಪ್ರಜುರಿಟ್ ಎಂಬ ಹೆಸರಿನ YouTube ಚಾನಲ್‌ನಲ್ಲಿ, ‘TNI ದಿ ಗೋಸ್ಟ್ ಆಫ್ ದಿ ಜಂಗಲ್’ ಎಂಬ ಶೀರ್ಷಿಕೆಯೊಂದಿಗೆ 14 ಸೆಪ್ಟೆಂಬರ್, 2021 ರಂದು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.

TNI ಎಂಬ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಇದೊಂದು ಇಂಡೋನೇಷ್ಯಾದ ಮಿಲಿಟರಿ ತರಬೇತಿ ಕುರಿತು ವಿವರಣೆ ನೀಡಲು ಇರುವ ಡಿಜಿಟಲ್ ಪ್ಲಾಟ್‌ಫಾರ್ಮ್ ಎಂದು ತಿಳಿದುಬಂದಿದೆ. TNI ಇಂಡೋನೇಷಿಯನ್ ನ್ಯಾಷನಲ್ ಮಿಲಿಟರಿ (ಟೆಂಟಾರಾ ನ್ಯಾಶನಲ್ ಇಂಡೋನೇಷ್ಯಾ) ದ ಸಂಕ್ಷಿಪ್ತ ರೂಪವಾಗಿದೆ. ಇಂಡೋನೇಷಿಯನ್ ಆರ್ಮಿಯ ವಿಶೇಷ ಪಡೆಗಳ ಘಟಕವಾದ ಕೊಪಾಸ್ಸಸ್ ಆಗಿದೆ.
ಯೂಟ್ಯೂಬ್ ಚಾನೆಲ್‌ನ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ವಿವರಣೆ ನೀಡಲಾಗಿದ್ದು, ಈ ಯೋಟ್ಯೂಬ್ ಚಾನೆಲ್‌ನಲ್ಲಿ ಇಂಡೋನೇಷಿಯನ್ ನ್ಯಾಷನಲ್ ಆರ್ಮಿ ಬಗ್ಗೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತದೆ, ಇದರಲ್ಲಿ ಡ್ರಿಲ್‌ಗಳು, ಸೈನ್ಯದಿಂದ ಪದವಿ ಪಡೆಯಲು ಸಲಹೆಗಳನ್ನು ನೀಡಲಾಗುತ್ತದೆ.

ಇಂಡೋನೇಷ್ಯಾದ ಮಿಲಿಟರಿಯ ವಿಶಿಷ್ಟ ಕೌಶಲ್ಯಗಳು. ಸೈನಿಕರು ಹಾವುಗಳನ್ನು ನಿಭಾಯಿಸುವ ಹಲವಾರು ಇತರ ತರಬೇತಿ ವೀಡಿಯೊಗಳನ್ನು ಚಾನಲ್ ಒಳಗೊಂಡಿದೆ ಅದನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಪಹರೆ ಕಾಯುತ್ತಿರುವ ಸೈನಿಕ ಹಾವು ಹಿಡಿಯುತ್ತಿರುವ ವೈರಲ್ ವೀಡಿಯೊ 2021ರ ಇಂಡೋನೇಷಿಯನ್ ಆರ್ಮಿ ಸ್ಪೆಷಲ್ ಫೋರ್ಸ್ ಗ್ರೂಪ್ ಕೊಪಾಸ್ಸಸ್ ಎಂಬ ತರಬೇತಿಗೆ ಸಂಬಂಧಿಸಿದ್ದಾಗಿದೆ. ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : “ಪೆರಿಯಾರ್ “ರನ್ನು ನೀಚ ಎಂದು ಸುಳ್ಳಿನ ಪೋಸ್ಟ್ ಹಂಚಿಕೊಂಡ ಬಲಪಂಥೀಯ ಮಹಿಳೆ

