FACT CHECK | ಉಚಿತ ಜಿಯೋ ರೀಚಾರ್ಜ್ ಎಂಬ ಸಂದೇಶವನ್ನು ನಂಬಬೇಡಿ

ಜಿಯೋ ನೆಟ್ವರ್ಕ್‌ನ ಮಾಲೀಕರಾದ ಮುಖೇಶ್ ಅಂಬಾನಿಯ ಹುಟ್ಟು ಹಬ್ಬದ ಪ್ರಯುಕ್ತ ಜಿಯೋ ಬಳಕೆದಾರರಿಗೆ 28 ದಿನಗಳ ರೂ 239 ಮೊತ್ತದ ರಿಚಾರ್ಜ್‌ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ ಎಂಬ ಪ್ರತಿಪಾದನೆಯೊಂದಗೆ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

Reliance Industries Limited reports net profit of Rs 15 512 crore in Q2 FY23

ಈ ಸುದ್ದಿ ವಾಟ್ಸಾಪ್ ಗುಂಪುಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಸುವಂತೆ ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿಂತಿಸಿದ್ದಾರೆ.

ಮುಖೇಶ್ ಅಂಬಾನಿ ಹುಟ್ಟುಹಬ್ಬದ ಉಚಿತ ರೀಚಾರ್ಜ್ ಆಫರ್ ಲಿಂಕ್ ಏನು?, ಉಚಿತ ಜಿಯೋ ರೀಚಾರ್ಜ್ ಅಭಿಯಾನವನ್ನು ಅಂಬಾನಿ ಅವರೇ ನಡೆಸುತ್ತಿದ್ದಾರೆಯೇ? ಮುಖೇಶ್ ಅಂಬಾನಿ ಹುಟ್ಟುಹಬ್ಬದ ಉಚಿತ ರೀಚಾರ್ಜ್ ಲಿಂಕ್ ನಿಜವೇ ಅಥವಾ ನಕಲಿಯೇ?  ಮುಖೇಶ್ ಅಂಬಾನಿ ಹುಟ್ಟುಹಬ್ಬದ ಉಚಿತ ರೀಚಾರ್ಜ್ ಲಿಂಕ್ ಹೇಗೆ ಕಾರ್ಯನಿರ್ವಹಿಸುತ್ತದೆ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಉಚಿತ ಜಿಯೋ ರೀಚಾರ್ಜ್‌ನ ಸಂದೇಶದೊಂದಿಗೆ ಶೇರ್ ಮಾಡಲಾಗಿರುವ  myphoneoffer.com ಲಿಂಕ್ ಮೂಲಕ ಪರಿಶೀಲಿಸೋಣ. ಮೈ ಫೋನ್ ಆಫರ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಮುಖೇಶ್ ಅಂಬಾನಿ ಚಿತ್ರವಿರುವ ಪೇಜ್‌ವೊಂದು ತೆರೆದುಕೊಳ್ಳುತ್ತದೆ.

ಉಚಿತ ರೀಚಾರ್ಜ್ ಅನ್ನು ಪಡೆಯಲು ಲಿಂಕ್ ಕ್ಲಿಕ್ ಮಾಡಿ ಮತ್ತು ಪ್ರಶ್ನಾವಳಿಯನ್ನು ಪೂರ್ಣಗೊಳಿಸಬೇಕು ಎಂಬ ಆಯ್ಕೆಗಳನ್ನು ನೀಡಲಾಗುತ್ತದೆ. ಬಹುಮಾನವನ್ನು ಹೊಂದಿರುವ ಉಡುಗೊರೆ ಪೆಟ್ಟಿಗೆಯನ್ನು ತೆರೆಯಲು ಸಮಯವನ್ನು ನಿಗದಿಗೊಳಿಸಲಾಗಿರುತ್ತದೆ.

ಇದನ್ನು ಪೂರ್ಣಗೊಳಿಸಿದ ನಂತರ, ಬಳಕೆದಾರರು ಅಲ್ಲಿ ಕೆಲವು ಮಾಹಿತಿಯನ್ನು ಸಲ್ಲಿಸಬೇಕು. ಒಮ್ಮೆ ನೀವು ಸಮೀಕ್ಷೆಯನ್ನು ಮುಗಿಸಿದರೆ, ಸಂದೇಶವನ್ನು 5 Whats App ಗುಂಪುಗಳಿಗೆ ಅಥವಾ 20 ಸ್ನೇಹಿತರಿಗೆ ಹಂಚಿಕೊಳ್ಳಲು ಅದು ನಿಮ್ಮನ್ನು ಕೇಳುತ್ತದೆ.

WhatsApp ನಲ್ಲಿ ಸಂದೇಶವನ್ನು ಹಂಚಿಕೊಂಡ ನಂತರ ನೀವು 28 ದಿನಗಳವರೆಗೆ Jio ನ ಉಚಿತ ರೀಚಾರ್ಜ್ ಅನ್ನು ಪಡೆಯಬಹುದು ಎಂದು ಒಂದು ನೋಟಿಫಿಕೇಶನ್ ಬರುತ್ತದೆ.

ಇದು ಜಿಯೋ ಕಂಪನಿಯ ಆಫರ್ ಅಲ್ಲ

ಸೈಬರ್ ತಜ್ಞರ ಪ್ರಕಾರ, ಈ ಲಿಂಕ್ ವೈರಸ್ ಅನ್ನು ಒಳಗೊಂಡಿದೆ ಮತ್ತು ವಂಚಕರು ನಿಮ್ಮ ಹಣ, ವೈಯಕ್ತಿಕ ಡೇಟಾ ಅಥವಾ ಇತರ ವಿವರಗಳನ್ನು ಹುಡುಕುತ್ತಿರುವ ತಂತ್ರದ ಭಾಗವಾಗಿದೆ ಎಂದು ಹೇಳುತ್ತಾರೆ. ವಾಸ್ತವವಾಗಿ ಲಿಂಕ್‌ನ ವಿಳಾಸವನ್ನು ಪರಿಶೀಲಿಸಿದಾಗ. ಇದು ಜಿಯೋ ಅಥವಾ ರಿಲಯನ್ಸ್ ಸೈಟ್‌ನಿಂದ ನೀಡಿದ ಕೊಡುಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಸಂದೇಶದಲ್ಲಿ ಉಲ್ಲೇಖಿಸಲಾದ ಲಿಂಕ್ myphoneoffer.com ಆಗಿದೆ.

ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ  ವೈರಸ್ ಅನ್ನು ಸ್ಥಾಪಿಸಲು ಹ್ಯಾಕರ್‌ಗಳು ಇದನ್ನು ಬಳಸಬಹುದು. ನಿಮ್ಮ ಮೊಬೈಲ್ ಗೆ ಅಪರಚಿತ ಸಂಖ್ಯೆಯಿಂದ ಸಂದೇಶ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಅದರ ಮೇಳೆ ನೀವು ಕ್ಲಿಕ್ ಮಾಡಿದರೆ, ನೀವು ವಂಚನೆಗೊಳಗಾಗುವ ಸಂಭವ ಹೆಚ್ಚಾಗಿರುತ್ತದೆ. ಕೆಲವು ದಿನಗಳ ಹಿಂದೆಯೂ ಉಚಿತ ರೀಚಾರ್ಜ್‌ ಸಂದೇಶ ವೈರಲ್ ಆಗಿತ್ತು, ಜನರನ್ನು ವಂಚಿಸುವ ಉದ್ದೇದಿಂದ ಈಗ ಅಂಬಾನಿ ಮಗನ ಮದುವೆ ಹಿನ್ನಲೆಯಲ್ಲಿ ಮರು ಹಂಚಿಕೆ ಮಾಡಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಿಯೋ ಮಾಲಿಕ ಮುಖೇಶ್ ಅಂಬಾನಿ ಹುಟ್ಟು ಹಬ್ಬದ ನಿಮಿತ ಜಿಯೋ ಸಿಮ್ ಬಳಕೆದಾರರಿಗೆ 28ದಿನಗಳ ರೂ 239 ಮೊತ್ತದ ಉಚಿತ ರೀಚಾರ್ಜ್ ನೀಡುತ್ತಿದೆ ಎಂದು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿಯಾಗಿದೆ. ಇದನ್ನು ಯಾರು ನಂಬಿ ಮೋಸ ಹೋಗಬಾರದು ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಕ್ಕಳನ್ನು ಅಪಹರಿಸಿ ಅಂಗಾಂಗ ಕಳ್ಳತನ ಮಾಡುತ್ತಿರುವ ದೃಶ್ಯ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights