ಫ್ಯಾಕ್ಟ್‌ಚೆಕ್ : ‘Go back Modi’ ಎಂದು ಎಡಿಟ್ ಮಾಡಿದ ಚಿತ್ರ ಹಂಚಿಕೆ

ಇತ್ತೀಚೆಗೆ ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ “Go Back Modi” ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಟ್ರೆಂಡಿಂಗ್‌ನಲ್ಲಿ ಇದ್ದ ಕಾರಣಕ್ಕೆ ಹೆಚ್ಚು ಸುದ್ದಿಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಗೋಬ್ಯಾಕ್ ಮೋದಿ ಎಂಬ ಘೋಷಣೆ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು.

ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಚಿತ್ರಗಳು ವೈರಲ್ ಆಗುತ್ತಿದ್ದು, ತಮಿಳುನಾಡಿಗೆ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಈ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ, ಒಂದು ರೈಲ್ವೆ ನಿಲ್ದಾಣದಲ್ಲಿ ಹಾಕಲಾದ ನಾಮಫಲಕದಲ್ಲಿ ‘ಗೋ ಬ್ಯಾಕ್ ಮೋದಿ’ ಎಂದು ಬರೆದಿದ್ದರೆ ಇನ್ನೊಂದರಲ್ಲಿ ‘ಮೋದಿ ನೋ ಎಂಟ್ರಿ’ ಎಂಬ ಬೋರ್ಡ್‌ ಹಾಕಲಾಗಿದೆ. ನಿಜವಾಗಿಯೂ ಈ ರೀತಿ ಬೋರ್ಡ್ ಅನ್ನು ತಮಿಳುನಾಡಿನಲ್ಲಿ ಹಾಕಲಾಗಿತ್ತೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ರೈಲ್ವೆ ನಿಲ್ದಾಣದ ಬೋರ್ಡ್‌ನಲ್ಲಿ ‘ ಗೋ ಬ್ಯಾಕ್ ಮೋದಿ’ ಎಂದು ಬರೆಯಲಾಗಿದೆಯೇ ಎಂದು ಪರಿಶೀಲಿಸಿದಾಗ, ಮಾರ್ಚ್ 9, 2016 ರಂದು petapixel.com ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಮೂಲ ಚಿತ್ರ ಲಭ್ಯವಾಗಿದೆ.

ಅಸ್ಸಾಂನ ದಿಬ್ರುಗಢ್‌ನಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ 4,273 ಕಿಮೀ ದೂರವನ್ನು ಕ್ರಮಿಸುವ 85 ಗಂಟೆಗಳ ರೈಲು ದೀರ್ಘ ಪ್ರಯಾಣವನ್ನು ಕೈಗೊಂಡ ಛಾಯಾಗ್ರಾಹಕ ಎಡ್ ಹ್ಯಾನ್ಲಿ ಅವರ ಅನುಭವವನ್ನು ಕಥೆಯನ್ನು ವಿವರಿಸಿದೆ. ಹ್ಯಾನ್ಲಿ ತನ್ನ ಪ್ರಯಾಣವನ್ನು ಫೋಟೋಗಳ ರೂಪದಲ್ಲಿ ದಾಖಲಿಸಿದ್ದಾರೆ ಮತ್ತು ಅದನ್ನು ಫೋಟೋ ಪ್ರಬಂಧವಾಗಿ ಪರಿವರ್ತಿಸಿ ಭಾರತದಲ್ಲಿ ವೈರಲ್ ಆಗಿದ್ದರು.

ವೈರಲ್ ಆಗಿರುವ ಮತ್ತೊಂದು ಚಿತ್ರದಲ್ಲಿ ‘ಮೋದಿ ನೋ ಎಂಟ್ರಿ’ ಎಂಬ ಹೋರ್ಡಿಂಗ್ ತಮಿಳುನಾಡಿನದಲ್ಲ ಎಂದು ಬೂಮ್ ವರದಿ ಮಾಡಿದೆ. ವಾಸ್ತವವಾಗಿ ಈ ವೈರಲ್ ಚಿತ್ರ 9 ಫೆಬ್ರವರಿ 2019ರಂದು ಆಂದ್ರಪ್ರದೇಶದ್ದು ಎಂದು ಸ್ಪಷ್ಟಪಡಿಸಿದೆ.

2019ರಲ್ಲಿ ಆಂಧ್ರಪ್ರದೇಶದ ಗುಂಟೂರು ಮತ್ತು ವಿಜಯವಾಡಕ್ಕೆ ಪ್ರಧಾನಿ ಭೇಟಿ ನೀಡುವ ಸಂದರ್ಭದಲ್ಲಿ ಜಾಹೀರಾತು ಫಲಕಗಳು ಕಾಣಿಸಿಕೊಂಡಿದ್ದವು. ತೆಲುಗು ದೇಶಂ ಪಕ್ಷವು ಬಿಜೆಪಿಯೊಂದಿಗಿನ ಸ್ನೇಹವನ್ನು ಮುರಿದುಕೊಂಡ ನಂತರ ಮೊದಲ ಬಾರಿಗೆ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿಯವರ ತಮಿಳುನಾಡು ಪ್ರವಾಸದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ, ಕೆಲವಯ ‘Go Back Modi’ ಪ್ರತಿಭಟನೆಯನ್ನು ತಮುಳುನಾಡು ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ತಮ್ಮ ಕೈಯಲ್ಲಿ ಪೋಸ್ಟರ್‌ಗಳೊಂದಿಗೆ ಗೋ ಬ್ಯಾಕ್ ಮೋದಿ ಎಂದು ಘೋಷಣೆಗಳನ್ನು ಕೂಗಿರುವ ವರದಿಗಳು ಲಭ್ಯವಾಗಿವೆ. ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳನ್ನು ಇಲ್ಲಿ ಓದಬಹುದು. ಆದರೆ ವೈರಲ್ ಆಗಿರುವ ರೈಲ್ವೇ ನಿಲ್ದಾಣ ಮತ್ತು ಹೋರ್ಡಿಂಗ್‌ನ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗ ಹೇಳುವದಾದರೆ, ಗೋ ಬ್ಯಾಕ್ ಮೋದಿ ಎಂಬ ಪ್ರತಿಭಟನೆಗಳು ತಮಿಳುನಾಡಿನಲ್ಲಿ ನಡೆದಿರುವುದು ನಿಜ, ಆದರೆ ರೈಲ್ವೆ ನಿಲ್ದಾಣದಲ್ಲಿ ನಾಮ ಫಲಕದಲ್ಲಿ ಬರೆಲಾಗಿದೆ ಎಂದು ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಾವಿನ ಹಣ್ಣು ತಿಂದು ತಕ್ಷಣವೇ ಕೂಲ್ ಡ್ರಿಂಕ್ಸ್‌ ಕುಡಿದರೆ ಸಾವು ಸಂಭವಿಸುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights