FACT CHECK | ರಾಜ್ಯ ಸರ್ಕಾರ ಮಾಡಿರುವ ಸಾಲದ ಕುರಿತು BJP ಹೇಳುತ್ತಿರುವ ಅಂಕಿ ಅಂಶಗಳು ಎಷ್ಟು ನಿಜ? ಎಷ್ಟು ಸುಳ್ಳು?

ಸರ್ಕಾರ ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ ಸಿದ್ದರಾಮಯ್ಯ ಮಾಡಿರುವ ಸಾಲ 1,91,000 ಕೋಟಿ. ಪ್ರತಿ ಕನ್ನಡಿಗನ ತಲೆ ಮೇಲೆ 11ತಿಂಗಳಿಗೆ 31,833 ರೂಪಾಯಿ ಸಾಲ ಹೊರಿಸಿದ ಸಿದ್ದಣ್ಣ. 5 ವರ್ಷಕ್ಕೆ ಪ್ರತಿ ಕನ್ನಡಿಗನ ಮೇಲೆ 1.5ಲಕ್ಷ ಸಾಲ ಪಕ್ಕಾ.” ಎಂಬ ಸುವರ್ಣ ನ್ಯೂಸ್ ನ ಡಿಬೆಟ್‌ ಒಂದರ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಬಿಜೆಪಿ ವಕ್ತಾರರೊಬ್ಬರು ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷದ 90 ಸಾವಿರದಷ್ಟು ಸಾಲ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೆ ಪ್ರತಿಪಾದನೆಯೊಂದಿಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯಂತೆ ರಾಜ್ಯ ಸರ್ಕಾರ 11 ತಿಂಗಳಲ್ಲಿ  1,91,000 ಕೋಟಿ ಸಾಲ ಮಾಡಿದೆಯೇ ಎಂದು ಪರಿಶೀಲಿಸಲು RBI ಪ್ರಕಟಿಸಿದ ವರದಿ ಏನು ಹೇಳುತ್ತದೆ ಎಂದು ಸರ್ಚ್ ಮಾಡಿದಾಗ ಮಾಹಿತಿ ಲಭ್ಯವಾಗಿದೆ.

ಆರ್‌ಬಿಐ ಪ್ರಕಟಿಸಿದ ಅಧಿಕೃತ ವರದಿಯ ಪ್ರಕಾರ, 2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಮಾಡಿರುವ ಸಾಲ 1 ಲಕ್ಷದ 5 ಸಾವಿರ ಕೋಟಿ. ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.

ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರತೀ ವರ್ಷಕ್ಕೆ 5೦ ಸಾವಿರ ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಿತ್ತು. ಈ ಬಾರಿಯ 2024 ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ.

 

ಸಿದ್ದರಾಮಯ್ಯನವರು 2018 ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 5 ವರ್ಷದಲ್ಲಿ ರಾಜ್ಯದ ಯೋಜನೆಗಳಿಗಾಗಿ 1,33,284 ಕೋಟಿ ರೂ ಸಾಲ ಮಾಡಿದ್ದರು. 2023ರಲ್ಲಿ ಬಸವರಾಜ ಬೊಮ್ಮಾಯಿಯವರು ಅಧಿಕಾರದಿಂದ ಕೆಳಗಿಳಿದ ಸಂದರ್ಭದಲ್ಲಿ ರಾಜ್ಯದ ಮೇಲಿದ್ದ ಒಟ್ಟು ಸಾಲ 5,35,156.7 ಕೋಟಿ ರೂಪಾಯಿ

ಅಂದರೆ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.

2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲ ಮಾಡುವುದಾಗಿ ಘೋಷಿಸಿರುವ ಮೊತ್ತ 1,05,246 ಕೋಟಿ ರೂಗಳು. ಅಲ್ಲಿಗೆ ರಾಜ್ಯದ ಒಟ್ಟು ಸಾಲ 6.4 ಲಕ್ಷ ಕೋಟಿಗಳಷ್ಟಾಗುತ್ತದೆ. ಆದ್ದರಿಂದ 11 ತಿಂಗಳಲ್ಲಿ ಸಿದ್ದರಾಮಯ್ಯ ನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತಾಗಿ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದು, ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಜೊತೆಗೆ ಸುಳ್ಳು ಆರೋಪಗಳನ್ನು ಮತ್ತು ಸುಳ್ಳು ಲೆಕ್ಕಗಳನ್ನು ಹರಿಬಿಡುತ್ತಿದ್ದಾರೆ. ಈ ಹಿಂದೆಯೂ ಇಂತಹದ್ದೆ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪೋಸ್ಟ್ ಹಂಚಿಕೊಳ್ಳಲಾಗಿತ್ತು ಅದರ ಫ್ಯಾಕ್ಟ್‌ಚೆಕ್ ವರದಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದರು ಎಂಬುದು ಸುಳ್ಳು – ಇಲ್ಲಿದೆ ಡೀಟೈಲ್ಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಚಾಲೆಂಜ್‌ ವೋಟ್ ಹಾಕಬಹುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights