FACT CHECK | ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿಲ್ಲವೇ?

167 ಜನರ ಸಾವಿಗೆ ಕಾರಣವಾದ ವಯನಾಡಿನ ಮೇಪ್ಪಾಡಿ, ಚೂರಲ್ಮಲ ಮತ್ತು ಮುಂಡಕೈ ಒಂದೇ  ಭೂಕುಸಿತ ಘಟನೆಯಲ್ಲಿ ಇಷ್ಟೊಂದು ಜನ ಮೃತಪಟ್ಟ ಘಟನೆ ಕೇರಳದಲ್ಲಿ ಈ ಹಿಂದೆ ಸಂಭವಿಸಿರಲಿಲ್ಲ. ಇಲ್ಲಿ ಇನ್ನೂ 191 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ನಡೆದು ಕೇರಳದ ವಯನಾಡಿನ ಜನತೆ ಸಾವು ನೋವಿನಿಂದ ಬಳಲುತ್ತಿದ್ದರೆ ಇತ್ತ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ರೆಸ್ಟೋರೆಂಟ್‌ನಲ್ಲಿ ಭೂರಿ ಭೋಜನವನ್ನು ಸವಿಯುತ್ತಿದ್ದಾರೆ ನೋದಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಕಳೆದ ವಾರ, ಭಾರೀ ಭೂಕುಸಿತಗಳು ಕೇರಳ ರಾಜ್ಯವನ್ನು ಹೊಡೆದವು, ವಿಶೇಷವಾಗಿ ವಯನಾಡ್ ಜಿಲ್ಲೆಯ ಮೇಲೆ ಪರಿಣಾಮ ಬೀರಿತು, ಇದು ವಿನಾಶಕಾರಿ ಭೂಕುಸಿತಗಳ ಸರಣಿಯನ್ನು ಅನುಭವಿಸಿತು. ಸಾವಿನ ಸಂಖ್ಯೆ ಸುಮಾರು 300 ಕ್ಕೆ ತಲುಪಿದೆ ಎಂದು ವರದಿಗಳು ಸೂಚಿಸುತ್ತವೆ, ಕನಿಷ್ಠ 200 ಜನರು ಕಾಣೆಯಾಗಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಕೇರಳ ಪ್ರವಾಹದ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿ ವಿಡಿಯೋ ಶೇರ್ ಮಾಡಲಾಗುತ್ತಿದೆ.

ಇತ್ತ ಕೇರಳದ ಭೀಕರ ಪ್ರವಾಹದಲ್ಲಿ ಮುಳುಗುತ್ತಿದ್ದರೆ ಅತ್ತ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರೆಸ್ಟೋರೆಂಟ್‌ನಲ್ಲಿ ಊಟ ಸವಿಯುತ್ತಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರಾಹುಲ್ ಗಾಂಧಿ ರೆಸ್ಟೋರಂಟ್‌ನಲ್ಲಿ ಊಟ ಮಾಡುತ್ತಿರುವ ದೃಶ್ಯ ಇತ್ತೀಚಿನದಲ್ಲ ಮತ್ತು ಕೇರಳ ಭೂಕುಸಿತಕ್ಕೆ ಸಂಬಂಧಿಸಿಲ್ಲಎಂಬ ಮಾಹಿತಿ ಲಭ್ಯವಾಗಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಹಲವು ಮಾಧ್ಯಮಗಳ ವರದಿಗಳು ಲಭ್ಯವಾಗಿವೆ. (ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಜುಲೈ 2024 ರ ಮಧ್ಯಭಾಗದಲ್ಲಿ ದಿನಾಂಕವಿಲ್ಲದ ವಿಡಿಯೋವೊಂದು ಲಭ್ಯವಾಗಿದೆ ದೆಹಲಿಯ ಪಿಜ್ಜೇರಿಯಾದಲ್ಲಿ ರಾಹುಲ್ ಗಾಂಧಿ ಊಟ ಮಾಡುತ್ತಿರುವುದು ಎಂದು ವರದಿಯಾಗಿದೆ.

ಅಂಬಾನಿ ಮದುವೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರೇ ? ಎಂದು ಬಳಕೆದಾರರು ಪ್ರಶ್ನಿಸಿದಾಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ದೃಶ್ಯಾವಳಿಗಳು ಇತ್ತೀಚಿನ ಕೇರಳ ಭೂಕುಸಿತಕ್ಕೂ ಮೊದಲೇ ತೆಗಿಸಿದ ಚಿತ್ರ ಎಂದು ದೃಢಪಡಿಸುತ್ತದೆ.

ಇದಲ್ಲದೆ, ಈ ತಿಂಗಳ ಆರಂಭದಲ್ಲಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಂಗ್ರೆಸ್ ನಾಯಕರು ಸಂತ್ರಸ್ತರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ಹಳೆಯ ವೀಡಿಯೊವನ್ನು ಇತ್ತೀಚಿನ ಕೇರಳ ಭೂಕುಸಿತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು  Ensuddi.com  ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಲಿವುಡ್ ‘ತೌಬಾ ತೌಬಾ’​ ಹಾಡಿಗೆ ಸ್ಟೆಪ್ ಹಾಕಿದ್ರಾ ಮುತ್ತಯ್ಯ ಮುರಳೀಧರನ್? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿಲ್ಲವೇ?

  • August 7, 2024 at 4:32 pm
    Permalink

    “Your fact-checking blog post on the alleged visit of Rahul Gandhi to the earthquake-stricken site in Wayanad, Karnataka, is commendable! You’ve meticulously analyzed the claims and provided clear evidence to debunk misinformation. I appreciate your dedication to presenting accurate information and setting the record straight. This is an important service in today’s era of rampant misinformation. Keep up the excellent work of delivering reliable and factual content!” Men’s Stamina

    Reply

Leave a Reply

Your email address will not be published.

Verified by MonsterInsights