FACT CHECK | ಕೇರಳದಲ್ಲಿ ಪಕ್ಷಿಯೊಂದು ತ್ರಿವರ್ಣ ಧ್ವಜವನ್ನು ಹಾರಿಸಿದೆಯೇ? ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?
ದೇಶಾದ್ಯಂತ 78ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಶಾಲೆ, ಕಾಲೇಜು, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳು ಸೇರಿದಂತೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತ ಬ್ರಿಟೀಷರಿಂದ ಸ್ವಾತಂತ್ರಗೊಂಡ ಇತಿಹಾಸವನ್ನು ಮೆಲಕು ಹಾಕಲಾಗಿದೆ. ಆದರೆ ಇಲ್ಲೊಂದು ವಿಡಿಯೋ ವೈರಲ್ಆಗುತ್ತಿದ್ದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಾಣಿ ಪಕ್ಷಿಗಳು ಕೂಡ ತಮ್ಮ ದೇಶಾಭಿಮಾನವನ್ನು ತೋರಿಸುತ್ತವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
‘ಕೇರಳದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಕ್ಕಿಯೊಂದು ರಾಷ್ಟ್ರಧ್ವಜವನ್ನು ಹಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ’.
“ಕೇರಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದು. ಒಂದು ಪಕ್ಷಿ ಎಲ್ಲಿಂದಲೋ ಬಂದು ಅದನ್ನು ಹಾರಿಸಿತು’ ಎಂಬ ಹೇಳಿಕೆಯೊಂದಿಗೆ ಗಣೇಶ್ ಚೇತನ ಗೌಡ ಎಂಬ ಫೇಸ್ಬುಕ್ ಬಳಕೆದಾರರೊಬ್ಬರು ವಿಡಿಯೋ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
‘ಕೇರಳದಲ್ಲಿ ಪುಟ್ಟ ಪುಟ್ಟ ಮಕ್ಕಳು ದೊಡ್ಡವರು ಎಲ್ಲರೂ ಸೇರಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಮೇಲ್ಭಾಗದಲ್ಲಿ ಸಿಕ್ಕಿಹಾಕಿಕೊಂಡಿತು ನಂತರ ಎಲ್ಲಿಂದಲೋ ಒಂದು ಪಕ್ಷಿ ಬಂದು ಅದನ್ನು ಬಿಚ್ಚಿತು ಪಕ್ಷಿ ಕೆಲವು ಭಾರತೀಯರಿಗಿಂತ ಹೆಚ್ಚು ದೇಶಭಕ್ತಿ ತೋರುತ್ತಿದೆ’ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಹೇಳಿಕೆಯಿರುವ ಪೋಸ್ಟ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಶಿಲ್ಪಾ ಎಂಬ ಬಳಕೆದಾರೊಬ್ಬರು ಹಂಚಿಕೊಂಡ ವೀಡಿಯೊದಲ್ಲಿ, ಜನರ ಗುಂಪು ಧ್ವಜಾರೋಹಣ ಮಾಡುವುದನ್ನು ಕಾಣಬಹುದು. ಆದರೆ, ಧ್ವಜವು ಧ್ವಜ ಸ್ತಂಭದ ತುದಿಯನ್ನು ತಲುಪಿದಾಗ, ಧ್ವಜ ತೆರೆದುಕೊಳ್ಳದೆ ಇದ್ದಾಗ ಪಕ್ಷಿಯೊಂದು ತ್ರಿವರ್ಣ ಧ್ವಜದ ಕಡೆಗೆ ಹಾರುತ್ತಿರುವುದು ಕಾಣುತ್ತದೆ, ಸ್ವಲ್ಪ ಸಮಯದ ನಂತರ ತ್ರಿವರ್ಣಧ್ವಜ ತೆರೆದುಕೊಂಡು ಹಾರಾಡುತ್ತದೆ. ಈ ಘಟನೆಯನ್ನು ನೋಡುತ್ತಿದ ಮಕ್ಕಳು ಪಕ್ಷಿ ಹಾರಿಹೋಗುತ್ತಿದ್ದಂತೆ ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ.
ಆಗಸ್ಟ್ 17 ರ ಮಧ್ಯರಾತ್ರಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಈಗಾಗಲೇ ಒಂದು ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಹಲವಾರು ಬಳಕೆದಾರರು ಪಕ್ಷಿಯು ದೇಶಭಕ್ತನ ಪುನರ್ಜನ್ಮ ಎಂದು ನಂಬುತ್ತಾರೆ, ಕೆಲವರು ಇದನ್ನು ಆಪ್ಟಿಕಲ್ ಭ್ರಮೆ ಎಂದು ಕರೆಯುತ್ತಾರೆ.
ಹಾಗಿದ್ದರೆ ನಿಜವಾಗಿಯೂ ಪಕ್ಷಿಗಳಿಗೆ ದೇಶಭಕ್ತಿ ವ್ಯಕ್ತಪಡಿಸುವಷ್ಟು ಬುದ್ದಿ ಅಥವಾ ಜ್ಞಾನ ಇರುವುದು ಸತ್ಯವೇ? ಅಥವಾ ನಿಜವಾಗಿಯೂ ಇಂತಹ ಘಟನೆ ಕೇರಳದಲ್ಲಿ ನಡೆದಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿರುವ ಪ್ರತಿಪಾದನೆಯಂತೆ ಪಕ್ಷಿಗಳಲ್ಲಿ ದೇಶಾಭಿಮಾನ, ದೇಶ ಭಕ್ತಿ ಅಡಕವಾಗಿರುತ್ತದೆಯೇ ಎಂದು ಪರಿಶೀಲಿಸಲು ಮತ್ತಷ್ಟು ಸರ್ಚ್ ಮಾಡಿದಾಗ, ಅಂತದ್ದೇ ಎರಡು ವಿಡಿಯೋಗಳನ್ನು ಮುಖೇಶ್ ಎಂಬ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ.
Fake information , bird has nothing to do with flag , here is different angle .
Man we as country have stopped thinking critically , look at this tweet with 1 M impressions pic.twitter.com/TrvykAZNCq https://t.co/NmTFCXi4TQ
— Mukesh (@mikejava85) August 17, 2024
ಈಗ ತ್ರಿವರ್ಣ ಧ್ವಜವನ್ನು ಹಾರಿಸಿದ ಪಕ್ಷಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ನಂತರ ಜನರಿಂದ ವಿವಿಧ ರೀತಿಯ ಕಾಮೆಂಟ್ಗಳು ವ್ಯಕ್ತವಾಗುತ್ತಿವೆ.ಈ ಹಕ್ಕಿ ನಿಜವಾಗಿಯೂ ತೆಂಗಿನ ಮರದ ಮೇಲೆ ಕುಳಿತಿತ್ತು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತ್ರಿವರ್ಣ ಧ್ವಜದ ಬಳಿ ಬಂದಂತೆ ಗೋಚರಿಸುವ ಕೋನದಿಂದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎನ್ನುತ್ತಾರೆ.
ವಾಸ್ತವವೇನು?
ವಾಸ್ತವವಾಗಿ ಕೇರಳದೆಂದು ಹೇಳಲಾದ ಈ ವೈರಲ್ ವಿಡಿಯೋದಲ್ಲಿ ಯಾವುದೇ ಪಕ್ಷಿಯೂ ಹಾರಿ ಬಂದು ಸಿಕ್ಕಿಹಾಕಿಂಡ ತ್ರಿವರ್ಣ ಧ್ವಜವನ್ನು ಹಾರಿಸಿಲ್ಲ. ಬದಲಿಗೆ ತ್ರಿವರ್ಣ ಧ್ವಜವನ್ನು ಹಾರಿಸುವಾಗ, ಅದಕ್ಕೆ ಕಟ್ಟಿದ ಹಗ್ಗದ ಗಂಟು ಸೇದಿದ್ದರಿಂದ ಧ್ವಜ ಬಿಡಿಸಿಕೊಳ್ಳಲು ಕೆಲವು ಸೆಂಕೆಂಡುಗಳು ತಡವಾಗಿದೆ ಅದೇ ಸಮಯಕ್ಕೆ ಪಕ್ಷಿಯೊಂದು ಹಾರಿಬಂದು ತೆಂಗಿನ ಗರಿಯ ಮೇಲೆ ಕುಳಿತುಕೊಳ್ಳುತ್ತದೆ. ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವಾಗ ಪಕ್ಷಿ ಬಂದು ಧ್ವಜ ಮೇಲೆ ಹಾರಿ ಬಂದಂತೆ ಗೋಚರಿಸುವ ಕೋನದಿಂದ ಚಿತ್ರೀಕರಿಸಲಾಗಿದೆ. ಮಕ್ಕಳು ಚಪ್ಪಾಳೆ ತಟ್ಟುತ್ತಿದ್ದಂತೆ ಪಕ್ಷಿ ಮರದಿಂದ ಹಾರಿ ಹೋಗುವುದನ್ನು ಮತ್ತೊಂದು ವಿಡಿಯೋದಲ್ಲಿ ನೋಡಬಹುದು.
Fake information , bird has nothing to do with flag , here is different angle .
Man we as country have stopped thinking critically , look at this tweet with 1 M impressions pic.twitter.com/TrvykAZNCq https://t.co/NmTFCXi4TQ
— Mukesh (@mikejava85) August 17, 2024
ಒಟ್ಟಾರೆಯಾಗಿ ಹೇಳುವುದಾದರೆ, ಧ್ವಜಾರೋಹಣದ ತ್ರಿವರ್ಣ ಧ್ವಜ ಹಾರದಿದ್ದಾಗ ದೂರದಿಂದ ಹಾರುತ್ತಿರುವ ಹಕ್ಕಿ ಬಂದು ತ್ರಿವರ್ಣ ಧ್ವಜವನ್ನು ಹಾರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು. ವಾಸ್ತವವಾಗಿ ಕ್ಯಾಮರಾದ ಮತ್ತೊಂದು ಆಂಗಲ್ನಿಂದ ಸೆರೆಯಾದ ವಿಡಿಯೋದಲ್ಲಿ ಸತ್ಯ ಏನೆಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸ್ವಾತಂತ್ರ್ಯ ದಿನದಂದು ಶ್ರೀನಗರದಲ್ಲಿ ಪಾಕ್ ಧ್ವಜವನ್ನು ಹಾರಿಸಲಾಗಿದೆಯೇ?

