FACT CHECK | ಮೊಸಳೆಗಳ ಈ ವಿಡಿಯೋ ಗುಜರಾತ್ ಪ್ರವಾಹದ್ದಲ್ಲ! ಮತ್ತೆಲ್ಲಿಯದ್ದು? ಈ ಸ್ಟೋರಿ ಓದಿ

ಕಳೆದ ವಾರ ಗುಜರಾತ್‌ನಲ್ಲಿ ನಿರಂತರ ಮಳೆ ಮತ್ತು ಪ್ರವಾಹದಂತಹ ಪರಿಸ್ಥಿತಿಯ ನಡುವೆ, ವಡೋದರದ ಪ್ರವಾಹದಲ್ಲಿ ಮೊಸಳೆಯೊಂದನ್ನು ಇತರ ಮೊಸಳೆಗಳು ಹಿಂಬಾಲಿಸುತ್ತಿರುವಾಗ ಮೊಸಳೆ ತನ್ನ ಬಾಯಿಂದ ಬೇಟೆಯನ್ನು ಕಚ್ಚಿಕೊಂಡು ನೀರಿನಲ್ಲಿ ಈಜುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಫೆಡರಲ್ ನ್ಯೂಸ್ ಮತ್ತು NDTV ಇಂಡಿಯಾ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಈ ಫೋಟೋವನ್ನು 4 ಸೆಪ್ಟೆಂಬರ್ , 2024 ರಂದು ಪೋಸ್ಟ್ ಮಾಡಿದೆ. ವೈರಲ್ ವೀಡಿಯೊದಿಂದ ಈ ಚಿತ್ರ ಅಥವಾ ಸ್ಕ್ರೀನ್‌ಶಾಟ್ ಅನ್ನು ಈ ಎಲ್ಲಾ ಸುದ್ದಿ ಲೇಖನಗಳ ಮೂಲಕ ಈ ಕೆಳಗಿನ ಶೀರ್ಷಿಕೆಯೊಂದಿಗೆ ಬಳಸಲಾಗಿದೆ: “ ಗುಜರಾತ್‌ನ ವಡೋದರದಲ್ಲಿ ನದಿಯಲ್ಲಿ ಬೇಟೆ ಹೊತ್ತ ಮೊಸಳೆಯನ್ನು ಹಿಂಬಾಲಿಸುತ್ತಿರುವ ನಾಲ್ಕು ಮೊಸಳೆಗಳು” ಹಂಚಿಕೊಂಡಿವೆ.

ಇದರೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇಶಾಂತ್ ಜನ್ ಎಂಬ ಎಕ್ಸ್‌ ಖಾತೆ ಬಳಕೆದಾರರೊಬ್ಬರು, “ಭಾರೀ ಪ್ರವಾಹದ ಸಮಯದಲ್ಲಿ ವಡೋದರಾ ನಗರಕ್ಕೆ ನುಗ್ಗುವ ಮೊಸಳೆಗಳು , ನೀರು ಕಡಿಮೆಯಾದಾಗ ಮಾತ್ರ ತಮ್ಮ ಮನೆಗಳಿಗೆ ಹಿಂತಿರುಗುತ್ತವೆ ತಮ್ಮ ನೈಸರ್ಗಿಕ ಆವಾಸಸ್ಥಾನಗಳಿಗೆ “. ಎಂಬ ಬರಹದೊಂದಿಗೆ ಹಂಚಿಕೊಂಡಿದ್ದಾರೆ.

“ಸುಸಂಸ್ಕೃತ ನಗರವಾದ ವಡೋದರಾವನ್ನು ಈಗ ಮೊಸಳೆಗಳ ನಗರ ಎಂದೂ ಕರೆಯುತ್ತಾರೆ, ಇತ್ತೀಚಿನ ಪ್ರವಾಹದಲ್ಲಿ ಮೊಸಳೆಗಳು ನದಿಯ ಪ್ರವಾಹದಿಂದ ಹೊರಬಂದವು, ಇತ್ತೀಚೆಗೆ ಮೊಸಳೆಯು ವಿಶ್ವಾಮಿತ್ರಿ ನದಿಯಲ್ಲಿ ಜಾನುವಾರುಗಳನ್ನು ಕೊಲ್ಲುವುದು ಕಂಡುಬಂದಿದೆ. ಈ ವೇಳೆ ಒಂದಲ್ಲ ನಾಲ್ಕು ಮೊಸಳೆಗಳು ಕಾಣಿಸಿಕೊಂಡಿವೆ”. ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡ ಮೊಸಳೆಗಳ ಈ ವೈರಲ್ ವಿಡಿಯೋ  ಗುಜರಾತ್‌ನ ವಡೋದರಾ ಪ್ರವಾಹದಲ್ಲಿ ಕಂಡುಬಂದಿದೆ ಎಂಬುದು ಸುಳ್ಳು. ಹಾಗಿದ್ದರೆ ಈ ಮೊಸಳೆಗಳ ದೃಶ್ಯವು ಎಲ್ಲಿಯದ್ದು ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 22, 2024 ರಂದು Facebook ನಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಇದನ್ನು ಆಸ್ಟ್ರೇಲಿಯಾದ ಪುಟ CROC ಪ್ರಕಟಿಸಿದೆ – CROC – Community Representation of Crocodiles. “ಕಿಂಬರ್ಲಿಯಲ್ಲಿ ಮೊಸಳೆ ನೃತ್ಯ ಸಂಯೋಜನೆ ಎಂಬ ಟೈಟಲ್‌ನೊಂದಿಗೆ ಪೋಸ್ಟ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ಇದನ್ನೆ ಆಧಾರವಾಗಿಟ್ಟುಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ಆಸ್ಟ್ರೇಲಿಯನ್ ಛಾಯಾಗ್ರಾಹಕ ಡೊನಿಡ್ರಿಸ್‌ಡೇಲ್ ಅವರನ್ನು ಟ್ಯಾಗ್ ಮಾಡಿದ ಅದೇ ಫೇಸ್‌ಬುಕ್ ಪುಟದಿಂದ ಇನ್‌ಸ್ಟಾಗ್ರಾಮ್ ಪೋಸ್ಟ್ ಲಭ್ಯವಾಗಿದೆ. ಅದೇ ದಿನ, ವೀಡಿಯೊ ಮತ್ತು ವಿವರಣೆಯನ್ನು Instagram ಪುಟಕ್ಕೆ ಪೋಸ್ಟ್ ಮಾಡಲಾಗಿದೆ.

 

View this post on Instagram

 

A post shared by C.R.O.C. (@croc.qld)

ಡೋನಿ ಇಂಬರ್ಲಾಂಗ್ ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಯೂಟರ್ನ್ ಮೀಡಿಯಾ ಡೊನ್ನಿ ಇಂಬರ್ಲಾಂಗ್ ಅವರಿಗೆ ಸಂದೇಶ ಕಳುಹಿಸುವ ಮೂಲಕ ಮಾಹಿತಿ ಪಡೆದಿದ್ದು, ಆಸ್ಟ್ರೇಲಿಯದ ಈಸ್ಟ್ ಕಿಂಬರ್ಲಿಯಲ್ಲಿ ಈ ವಿಡಿಯೋವನ್ನು ಅವರೇ ಸೆರೆ ಹಿಡಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ವೀಡಿಯೋ ಗುಜರಾತ್‌ನ ಬರೋಡದಲ್ಲ.

ಮೊಸಳೆಗಳು ನದಿಯ ಪಕ್ಕದಲ್ಲಿ ಈಜುತ್ತಿರುವುದನ್ನು ಚಿತ್ರಿಸುವ ವೀಡಿಯೊವು ಗುಜರಾತ್‌ನ ವಡೋದರಾ ಪ್ರವಾಹದಿಂದ ಬಂದದ್ದಲ್ಲ, ಮೇಲಿನ ಎಲ್ಲಾ ವಿಷಯಗಳು ತೋರಿಸುತ್ತವೆ; ಬದಲಿಗೆ, ಇದು ಆಸ್ಟ್ರೇಲಿಯಾದಿಂದ ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್‌ನ ವಡೋದರಾದಲ್ಲಿ ಪ್ರವಾಹದ ಮೂಲಕ ಮೊಸಳೆಗಳು ಸಂಚರಿಸುತ್ತಿರುವುದನ್ನು ಚಿತ್ರಿಸಿರುವ ವಿಡಿಯೋ ವಾಸ್ತವವಾಗಿ ಆಸ್ಟ್ರೇಲಿಯಾದ ಪೂರ್ವ ಕಿಂಬರ್ಲಿಯಿಂದ ಬಂದಿದೆ. ಡೋನಿ ಇಂಬರ್ಲಾಂಗ್ ಎಂಬುವವರು ಈ ವಿಡಿಯೋವನ್ನು ತೆಗೆದಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ಥಳಿಸಲಾಗಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights