FACT CHECK | ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನವಾಗಿದೆ ಎನ್ನಲಾದ ವಿಡಿಯೋದ ವಾಸ್ತವವೇನು ಗೊತ್ತೇ?

MI-17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನವಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Fact Check: ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂದ ವೀಡಿಯೋ ಹಿಂದಿನ ಅಸಲಿಯತ್ತೇನು?

ಫೇಸ್‌ಬುಕ್ ನಲ್ಲಿ ಈ ಹೇಳಿಕೆಗಳು ಇಲ್ಲಿಇಲ್ಲಿ ಕಂಡುಬಂದದೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 31, 2024ರ ಇಂಡಿಯಾ ಟುಡೇ ಮಾಡಿದ ವರದಿ ಲಭ್ಯವಾಗಿದೆ. ಭಾರತೀಯ ವಾಯುಪಡೆಯ MI-17 ಹೆಲಿಕಾಪ್ಟರ್ ರಿಪೇರಿಗಾಗಿ ಹಾಳಾಗಿದ್ದ ಹೆಲಿಕಾಪ್ಟರ್ ಒಂದನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡಿದ್ದರಿಂದ ಅದನ್ನು ಕೇದಾರನಾಥ ಮಧ್ಯದಲ್ಲೇ ಬಿಡಬೇಕಾಯಿತು. ಹೀಗೆ ಬಿಟ್ಟ ಹೆಲಿಕಾಪ್ಟರ್ ಖಾಲಿಯಾಗಿತ್ತು ಎಂದು ರುದ್ರಪ್ರಯಾಗದ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ.

Kedarnath helicopter crash: Chopper being airlifted falls off mid air as  towing rope snaps | India News - The Indian Express

ಇದೇ ವರದಿಯಲ್ಲಿ, ಶನಿವಾರ, ಹೆಲಿಕಾಪ್ಟರ್ ಅನ್ನು ದುರಸ್ತಿಗಾಗಿ ಗೌಚಾರ್ ಏರ್‌ಸ್ಟ್ರಿಪ್‌ಗೆ ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ, MI-17 ಹೆಲಿಕಾಪ್ಟರ್ ಲಿಂಚೋಲಿ ಮೇಲೆ ಹಾರುತ್ತಿದ್ದಂತೆ ಸಮತೋಲನವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಇದರಿಂದ MI-17 ಪೈಲಟ್, ತೊಂದರೆಯನ್ನು ಗ್ರಹಿಸಿ, ತೆಗೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರನ್ನು ಖಾಲಿ ಸ್ಥಳದಲ್ಲಿ ಬೀಳಿಸಲಾಗಿದೆ ಎಂದಿದೆ.

ಕೇದಾರನಾಥದಲ್ಲಿ MI-17 ಹೆಲಿಕಾಪ್ಟರ್ ಪತನಗೊಂಡಿಲ್ಲ ಬದಲಾಗಿ ಅದು ಕೊಂಡೊಯ್ಯುತ್ತಿದ್ದ ಇನ್ನೊಂದು ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಗೊತ್ತಾಗಿದೆ.

Fact Check: ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂದ ವೀಡಿಯೋ ಹಿಂದಿನ ಅಸಲಿಯತ್ತೇನು?

ಆಗಸ್ಟ್ 31, 2024ರ ಎಎನ್ ಐ ವರದಿ ಪ್ರಕಾರ, MI-17 ಮೂಲಕ ಗೌಚಾರ್ ಏರ್ ಸ್ಟ್ರಿಪ್‌ ಗೆ ರಿಪೇರಿಗಾಗಿ  ತೆಗೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಒಂದು ಕೇದಾರನಾಥ ಸನಿಹ ಶನಿವಾರ ಪತನಗೊಂಡಿದೆ. ರಿಪೇರಿ ಹೆಲಿಕಾಪ್ಟರ್ ಏರ್ ಲಿಫ್ಟ್ ಮಾಡಿದ ಬಳಿಕ ಮಿ17 ಹೆಲಿಕಾಪ್ಟರ್ ತನ್ನ ಸಮತೋಲನವನ್ನು ಕಳೆದುಕೊಳ್ಳುವತ್ತ ಸಾಗಿದ್ದು, ಅಪಾಯವನ್ನು ಅರಿತ ಪೈಲಟ್ ಕಣಿವೆಯ ಖಾಲಿ ಸ್ಥಳದಲ್ಲಿ ಅದನ್ನು ಬೀಳಿಸಿದರು ಎಂದಿದೆ.

Fact Check: ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂದ ವೀಡಿಯೋ ಹಿಂದಿನ ಅಸಲಿಯತ್ತೇನು?

ಇದೇ ರೀತಿಯ ವರದಿಗಳನ್ನು ಇಲ್ಲಿಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕೇದಾರನಾಥದಲ್ಲಿ MI-17 ಹೆಲಿಕಾಪ್ಟರ್ ಪತನಗೊಂಡಿಲ್ಲ. ಅದು ರಿಪೇರಿಗಾಗಿ ಇನ್ನೊಂದು ಹೆಲಿಕಾಪ್ಟರನ್ನು ಏರ್ ಲಿಫ್ಟ್ ಮಾಡುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡಾಗ ಆ ಹೆಲಿಕಾಪ್ಟರನ್ನು ಸೂಕ್ತವಾದ ಪ್ರದೇಶದಲ್ಲಿ  ಬೀಳಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಮಾಜ್‌ ಮಾಡಿದ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನವಾಗಿದೆ ಎನ್ನಲಾದ ವಿಡಿಯೋದ ವಾಸ್ತವವೇನು ಗೊತ್ತೇ?

  • September 7, 2024 at 4:00 pm
    Permalink

    ಹೋ, ನಾನು ಓದುವಾಗ, ನಿಮ್ಮ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ನಿಖರವಾಗಿದೆ ಎಂದು ಕಂಡುಬಂದಿದೆ.

    ಪರಿಶೀಲನೆ:

    The Indian Express ವರದಿಯ ಪ್ರಕಾರ, MI-17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನಗೊಂಡಿಲ್ಲ; ಇದು ರಿಪೇರಿಗಾಗಿ ಸಾಗಿಸಲಾಗುತ್ತಿತ್ತು ಮತ್ತು ಸಮತೋಲನ ಕಳೆದುಕೊಂಡು ಖಾಲಿ ಸ್ಥಳದಲ್ಲಿ ಬೀಳಿಸಲಾಗಿದೆಯೆಂಬುದಾಗಿ ವಿವರಿಸಲಾಗಿದೆ. The Indian Express

    ಎಎನ್ ಐ ವರದಿ ಪ್ರಕಾರ, MI-17 ಮೂಲಕ ಇತರ ಹೆಲಿಕಾಪ್ಟರ್ ಅನ್ನು ಏರ್‌ಲಿಫ್ಟ್ ಮಾಡಲಾಗುತ್ತಿತ್ತು ಮತ್ತು ಸಮತೋಲನ ಕಳೆದುಕೊಂಡ ಪರಿಣಾಮ ಸ್ಥಳದಲ್ಲಿ ಬೀಳಿಸಲಾಗಿದೆ.

    ಒಟ್ಟಾರೆ: ನಿಮ್ಮ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಸರಿಯಾಗಿದ್ದು, ಸಮೀಕ್ಷೆ ಮತ್ತು ವಿಶ್ಲೇಷಣೆಯು ನಿಖರವಾಗಿದೆ. ಧನ್ಯವಾದಗಳು! #AddictionFree

    Reply

Leave a Reply

Your email address will not be published.

Verified by MonsterInsights