FACT CHECK | ಮುಸ್ಲಿಂ ವ್ಯಕ್ತಿಯೊಬ್ಬ ವಂದೇ ಭಾರತ್ ರೈಲಿನ ಗಾಜನ್ನು ಸುತ್ತಿಗೆಯಿಂದ ಹೊಡೆದ್ದಾನೆ ಎಂಬುದು ನಿಜವೇ

ವ್ಯಕ್ತಿಯೊಬ್ಬ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿಟಕಿಯನ್ನು ಸುತ್ತಿಗೆಯಿಂದ ಹೊಡೆದುಹಾಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ”ಈ ಜಿಹಾದಿಗಳಿಗೆ ಬುದ್ದಿ ಕಲಿಸದಿದ್ದರೇ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಇವರು ಈಗ ಗಾಜನ್ನು ಒಡೆದಿದ್ದಾರೆ. ಮುಂದೇ ಇಡೀ ರೈಲನ್ನುಹೊಡೆದು ಹಾಕಬಹುದು. ಇಂತಹ ಮುಸಲ್ಮಾನನನ್ನು ನೀವು ಉಗ್ರಗಾಮಿ, ಜಿಹಾದಿ ಎನ್ನದೆ, ಇನ್ನೇನು ಹೇಳುತ್ತೀರಿ.” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. 

ಅಮಿತ್‌ ಸನಾತನಿ ಎಂಬ ಎಕ್ಸ್‌ ಖಾತೆಯ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ಮುಸ್ಲಿಂ ಜಿಹಾದಿಗಳು ವಂದೇ ಭಾರತ್‌ ರೈಲಿಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ವಿಡಿಯೋದಲ್ಲಿ ರೈಲಿನ ಗಾಜು ಹೊಡೆಯುತ್ತಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಂದೇ ಭಾರತ್‌ ರೈಲಿಕ ಕಿಟಕಿ ಗಾಜನ್ನು ಸುತ್ತಿಗೆಯಿಂದ ಹೊಡೆಯುತ್ತಿರುವ ವ್ಯಕ್ತಿ ತಮಿಳುನಾಡಿನ ತಿರುನೆಲ್ವೇಲಿ ಕೋಚಿಂಗ್ ಡಿಪೋದಲ್ಲಿ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಥೀರ ಮೂರ್ತಿ ಅವರು ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಮೆಂಟ್ ಲಭ್ಯವಾಗಿದೆ.

ಪೋಸ್ಟ್ ‌ಗಳ ಪ್ರಕಾರ ವಂದೇ ಭಾರತ್‌ ರೈಲಿಗೆ ಹಾನಿ ಮಾಡಲು ಈ ಗಾಜುಗಳನ್ನು ಒಡೆಯಲಾಗಿಲ್ಲ‌, ಬದಲಿಗೆ ಈಗಾಗಲೇ ಒಡೆದು ಹೋಗಿದ್ದ ಕಿಟಕಿ ಗಾಜನ್ನು ಬದಲಾಯಿಸುವ ಪ್ರಕ್ರಿಯೆಯಾಗಿದೆ ಎಂಬುದು ತಿಳಿದು ಬಂದಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, 10 ಸೆಪ್ಟೆಂಬರ್ 2024  ರಂದು ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಂ ಸ್ಟೋರಿ ಲಭ್ಯವಾಗಿದೆ. ಇದೇ ರೀತಿ ರೈಲಿಗೆ ಸಂಬಂಧ ಪಟ್ಟಂತೆ ಹಲವು ರೀಲ್ಸ್‌ಗಳು ಅವರ ಖಾತೆಯಲ್ಲಿ ಕಂಡು ಬಂದಿದೆ. ಹೀಗಾಗಿ ಹಲವು ಮಾಧ್ಯಮ ಸಂಸ್ಥೆಗಳು ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ಹೆಸರು ಮನೀಶ್ ಕುಮಾರ್ ಮತ್ತು ತಾನು ಬಿಹಾರದ ಅರ್ರಾ ನಿವಾಸಿ ಎಂದು ತಿಳಿಸಿದ್ದಾರೆ. ಪ್ರಸ್ತುತ ಅಹಮದಾಬಾದ್‌ನಲ್ಲಿ ಮತ್ತು ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ವೈರಲ್ ವಿಡಿಯೋಗಳ ಕುರಿತು ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡದಂತೆ ಸೂಚಿಸಿದ್ದರಿಂದ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ‌ ಎಂದು ತಿಳಿದು ಬಂದಿದೆ.

ವಂದೇ ಭಾರತ್ ರೈಲಿನ ಕಿಟಕಿ ಗಾಜನ್ನು ಮುಸ್ಲಿಂ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಒಡೆದಿದ್ದಾನೆ ಎನ್ನಲಾದ ವಿಡಿಯೋವನ್ನು ಮತ್ತಷ್ಟು ಪರಿಶೀಲಿಸಿದಾಗ, 10 ಸೆಪ್ಟೆಂಬರ್‌ 2024 ರಂದು ಟ್ರೈನ್ಸ್‌ ಆಫ್‌ ಇಂಡಿಯಾ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ.

” ವೈರಲ್‌ ವಿಡಿಯೋದಲ್ಲಿರುವ ವ್ಯಕ್ತಿ ಗಾಜನ್ನು ಬದಲಾಯಿಸಲು, ಈಗಿರುವ ಗಾಜನ್ನು ಒಡೆದು ತೆಯುತ್ತಾರೆ. ಇದು ಗಾಜು ಬದಲಾಯಿತು ಪ್ರಕ್ರಿಯೆಯಾಗಿದೆ. ಗಾಜುಗಳು ರೈಲಿಗೆ ಭೀಗಿಯಾಗಿ ಅಳವಡಿಸಿರುವುದರಿಂದ ಅವುಗಳನ್ನು ಹೀಗೆ ಸುತ್ತಿಗೆಯಲ್ಲಿ ಒಡೆದು ತೆಗೆಯಲಾಗುತ್ತದೆ.” ಎಂದು ಮಾಹಿತಿಯನ್ನು ನೀಡಿರುವುದು ಕಂಡು ಬಂದಿದೆ.

ಈಗಾಗಲೇ ಹಾಳಾಗಿದ್ದ ಕಿಟಕಿ ಗಾಜನ್ನು ಬದಲಾಯಿಸಲು ಒಡೆದು ಹಾಕಲಾಗುತ್ತಿದೆ ಎಂಬ ಅಂಶವನ್ನು ರೈಲ್ವೇ ಅಧಿಕಾರಿಯೂ ದೃಢಪಡಿಸಿದ್ದಾರೆ. ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಮನೀಶ್ ಕುಮಾರ್ ಗುಪ್ತಾ ಎಂದು ದೃಢಪಡಿಸಿದ್ದಾರೆ, ಅವರು ಭಾರತೀಯ ರೈಲ್ವೆಯಲ್ಲಿ ಗುತ್ತಿಗೆ ಆಧಾರಿತ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮನೀಶ್ ಕುಮಾರ್ ಗುಪ್ತಾ ಎಂಬುವವರು ಹಾಳಾಗಿದ್ದ ಕಿಟಕಿ ಗಾಜನ್ನು ಬದಲಾಯಿಸಲು ಸುತ್ತಿಗೆಯಿಂದ ಒಡೆಯುತ್ತಿರುವ ವಿಡಿಯೋವನ್ನು, ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗುಜರಾತ್‌ನ 182 ಮೀಟರ್ ಎತ್ತರದ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಯಲ್ಲಿ ಬಿರುಕು ಕಾಣಿಸಿಕೊಂಡಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights