FACT CHECK | ಗಣೇಶ ಮೂರ್ತಿಗೆ ಪೂಜೆ ಮಾಡುವಾಗ ಅರ್ಚಕರಿಗೆ ಹೃದಯಾಘಾತ ಎಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಹಂಚಿಕೆ
ಪೂಜಾರಿಯೊಬ್ಬರು ಗಣೇಶ ಮೂರ್ತಿಗೆ ಪೂಜೆ ಮಾಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಗಣೇಶ ಮೂರ್ತಿಗೆ ಪೂಜೆ ಮಾಡುವಾಗ ಅರ್ಚಕರೊಬ್ಬರು ಹೃದಯಾಘಾತವಾಗಿ ನೆಲಕ್ಕೆ ಕುಸಿಯುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು ಹಂಚಿಕೊಂಡಿರುವ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಈ ವೀಡಿಯೊದಲ್ಲಿ, ಗಣೇಶನಿಗೆ ಪೂಜೆ ಮಾಡುವಾಗ ಅರ್ಚಕನೊಬ್ಬನು ಹೃದಯಘಾತದಿಂದ ನೆಲಕ್ಕೆ ಕುಸಿದು ಬೀಳುತ್ತಾನೆ. ಆಗ ಗಣೇಶನ ವಿಗ್ರಹದಿಂದ ಧಾರ್ಮಿಕ ಧ್ವಜವು ಅರ್ಚಕನ ಮೇಲೆ ಬೀಳುತ್ತದೆ, ಆಗ ಅರ್ಚಕನಿಗೆ ಎಚ್ಚರವಾಗುತ್ತದೆ. ” ದೇವರ ಪವಾಡದಿಂದ ಅರ್ಚಕ ಬದುಕಿ ಉಳಿದಿದ್ದಾನೆ, ದೇವರಿದ್ದಾನೆ ಅನ್ನುವುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಶ್ರೀ ಗಣೇಶ ದೇವಾ ಜೈ ಶ್ರೀ ರಾಮ್ ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿಎದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಫೇಸ್‌ಬುಕ್‌ನಲ್ಲಿ ಸರ್ಚ್ ಮಾಡಿದಾಗ, ನಟಿ ಸಂಜನಾ ಗಲ್ರಾನಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡ ವಿಡಿಯೋ ಪೋಸ್ಟ್‌ವೊಂದು ಲಭ್ಯವಾಗಿದೆ.
ಇದೇ ನಿಜವಾದ ಅದೃಷ್ಟ ಎಂಬ ಹೇಳಿಕೆಯೊಂದಿಗೆ 19 ಸೆಪ್ಟಂಬರ್ 2024ರಂದು ಹಂಚಿಕೊಂಡ ಪೋಸ್ಟ್‌ನಲ್ಲಿ, ಈ ವಿಡಿಯೋವನ್ನು ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಫೇಸ್‌ಬುಕ್ ಪೇಜ್ ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ! ಈ ವೀಡಿಯೊದಲ್ಲಿನ ಪಾತ್ರಗಳು ಮನರಂಜನೆ, ಶೈಕ್ಷಣಿಕ ಉದ್ದೇಶ ಮತ್ತ ಜಾಗೃತಿ ಮೂಡಿಸುವ ಸಲುವಾಗಿ ಚಿತ್ರೀಕರಿಸಲಾಗಿದೆ ಅಲ್ಲದೆ ಇದಾವುದು ನೈಜ ಘಟನೆಯಲ್ಲ ಎಂಬ ಡಿಸ್‌ಕ್ಲೈಮರ್‌ನಲ್ಲಿ ಹೇಳಿಕೊಂಡಿದ್ದಾರೆ.
ವೈರಲ್ ವಿಡಿಯೋ ನಿಜವಾದ ಸಿಸಿಟಿವಿ ದೃಶ್ಯಗಳನ್ನು ತೋರಿಸುವುದಿಲ್ಲ , ವಾಸ್ತವವಾಗಿ ಇದು ಸ್ಕ್ರಿಪ್ಟ್ ಮಾಡಲಾದ ವಿಡಿಯೋ ಆಗಿದೆ. ವೈರಲ್ ವಿಡಿಯೋದ ಕೊನೆಯ 3:07 ಸೆಕೆಂಡ್‌ಗಳ ಅವದಿಯಲ್ಲಿ ಇದನ್ನು ತಿಳಿಸಲಾಗಿದೆ. ನಟಿ ಸಂಜನಾ ಗಲ್ರಾನಿ ತಮ್ಮ ಫೇಸ್‌ಬುಕ್ ಪುಟದಲ್ಲಿ ನಿಯಮಿತವಾಗಿ ಸ್ಕ್ರಿಪ್ಟ್ ನಾಟಕಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಗಣೇಶ ಮೂರ್ತಿಯನ್ನು ಪೂಜೆ ಮಾಡುವಾಗ ಅರ್ಚಕನೊಬ್ಬನು ಹೃದಯಘಾತದಿಂದ ನೆಲಕ್ಕೆ ಕುಸಿದು ಬಿದ್ದಾಗ, ಗಣೇಶನ ಬಳಿ ಇರಿಸಿದ್ದ ಧಾರ್ಮಿಕ ಧ್ವಜವು ಅರ್ಚಕನ ಮೇಲೆ ಬಿದ್ದಾಕ್ಷಣ, ಅರ್ಚಕ ಬದುಕಿ ಉಳಿದಿದ್ದಾನೆ ಇದು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂದು ಮನೆರಂಜನೆಯ ಉದ್ದೇಶಗಳಿಗೆ ಮತ್ತು ಜಾಗೃತಿ ಮೂಡಿಸಲು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ನೈಜ ಘಟನೆಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನದ ಒತ್ತೆಯಾಳಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ನಿಜವೇ?