FACT CHECK | ರಾಜ್ಯಸಭಾ ಸದಸ್ಯೆ ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಷೇರು ಮಾರುಕೆಗೆ ಸಂಬಂಧಿಸಿದಂತೆ, ವಿವಿಧ ಅಪ್ಲಿಕೇಶನ್‌ಗಳು ಜಾಹೀರಾತು ಮೂಲಕ ನಮ್ಮ ಮೊಬೈಲ್‌ಗಳಿಗೆ ಲಗ್ಗೆ ಇಡುವುದನ್ನು ದಿನಬೆಳಗಾದರೆ ನೋಡುತ್ತೇವೆ. ಈಗ ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸುಧಾ ಮೂರ್ತಿಯವರು ತಮ್ಮ ಪತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುವಾಗ  ದಿನಕ್ಕೆ ₹ 21,000 ಆರಂಭಿಕ ಹೂಡಿಕೆಯನ್ನು ಮಾಡಿದರೆ ₹35,000 ವರೆಗೆ ಗಳಿಸಬಹುದು ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈ ವೈರಲ್‌ ವಿಡಿಯೋದ ಕೀಫ್ರೇಮ್‌ಗಳನ್ನು ಬಳಸಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು,  ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರ  ಜುಲೈ 7ರಂದು  YouTube ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಮನಿ ಕಂಟ್ರೋಲ್‌ನ ಮೂಲ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಸುಧಾ ಮೂರ್ತಿಯವರು ಉದ್ಯಮಿಗಳ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದಾರೆ.

ಮೂಲ ವಿಡಿಯೋ ಮತ್ತು ವೈರಲ್ ವಿಡಿಯೋಗಳಲ್ಲಿನ ಅನೇಕ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸುಧಾ ಮೂರ್ತಿಯವರು ಯಾವುದೇ ಹೂಡಿಕೆ ಅಪ್ಲಿಕೇಶನ್ ಕುರಿತು ಮಾತನಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

“ಸುಧಾ ಮೂರ್ತಿ ಅವರು ಎಲ್ಲಾ ಉದ್ಯಮಿಗಳ ಪತ್ನಿಯರಿಗೆ ಮತ್ತು ಅವರ ಅಚಲ ಪ್ರೋತ್ಸಾಹಕ್ಕೆ ಬೆಂಬಲವಾಗಿ ವೇದಿಕೆಯನ್ನು ಬಳಸಿಕೊಂಡಿದ್ದಾರ. ಸುಧಾ ಮೂರ್ತಿ ಅವರು ತಮ್ಮ ಪಯಣದಲ್ಲಿ ಬಂಡೆಯಂತೆ ತಮ್ಮ ಪತಿಯೊಂದಿಗೆ ನಿಂತ ಉದ್ಯಮಿಗಳ ಎಲ್ಲಾ ಹೆಂಡತಿಯರಿಗೆ ನಮನ ಸಲ್ಲಿಸಿದರು. ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಅವರ ಮಗ ರೋಹನ್ ಮೂರ್ತಿ ಅವರ ನಡುವಿನ ಸಂವಾದದ ನಂತರ, ಸುಧಾ ಮೂರ್ತಿ ತಮ್ಮ ಜೀವಮಾನದ ಬೆಂಬಲಕ್ಕಾಗಿ ಹೊಗಳಿದರು, ಸುಧಾ ಮೂರ್ತಿ ಅವರು ಎಲ್ಲಾ ಉದ್ಯಮಿಗಳ ಪತ್ನಿಯರಿಗೆ ಮತ್ತು ಅವರ ಅಚಲವಾದ ಬೆಂಬಲವನ್ನು ಅರ್ಪಿಸಲು ವೇದಿಕೆಯನ್ನು ಬಳಸಿಕೊಂಡರು. ” ವಿವರಣೆಯನ್ನು ಓದಿ. ಬೆಂಗಳೂರಿನಲ್ಲಿ ನಡೆದ ಮನಿಕಂಟ್ರೋಲ್‌ನ ಸ್ಟಾರ್ಟ್‌ಅಪ್ ಕಾನ್‌ಕ್ಲೇವ್‌ನಲ್ಲಿ ಮೂರ್ತಿ ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ.

ಈ ಸಮಯದಲ್ಲಿ ಸುಧಾ ಮೂರ್ತಿ ಹೂಡಿಕೆ ಮಾಡುವ ಅಪ್ಲಿಕೇಶನ್ ಬಗ್ಗೆ ಏನನ್ನೂ ಪ್ರಸ್ತಾಪಿಸಲಿಲ್ಲ, ವೈರಲ್ ವೀಡಿಯೊವನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂದು ಸೂಚಿಸುತ್ತದೆ.

 

 

 

 

 

 

 

 

 

ವೈರಲ್‌ ವಿಡಿಯೋ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, ಡೀಪ್‌ಫೇಕ್ ಉಪಕರಣವಾದ ಟ್ರೂ-ಮೀಡಿಯಾದ ಡೀಪ್‌ಫೇಕ್ ಡಿಟೆಕ್ಟರ್ – ಮೂಲಕ ಪರಿಶೀಲಿಸಿದಾಗ, ಈ ವೀಡಿಯೊವನ್ನು ತಿರುಚಿರುವ ಬಗ್ಗೆ  97% ಖಚಿತತೆಯನ್ನು ನೀಡಿದೆ.  ಇದು AI- ನಿಂದ ರಚಿತವಾದ ಧ್ವನಿಯಾಗಿದ್ದು, ಡೀಪ್‌ಫೇಕ್ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ವಿಡಿಯೋದಲ್ಲಿ 76% ವರೆಗಿನ ಮುಖಭಾವಗಳಿಗೆ AI- (Artificial intelligence) ಚಾಲಿತ ಬದಲಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಸುಧಾ ಮೂರ್ತಿಯವರ ವಿಡಿಯೋವನ್ನು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳು ನಿರೂಪಣೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುಧಾಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಮಾತನಾಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗಣೇಶ ಮೂರ್ತಿಗೆ ಪೂಜೆ ಮಾಡುವಾಗ ಅರ್ಚಕರಿಗೆ ಹೃದಯಾಘಾತ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights