ದೇವರನ್ನು ಮೆಚ್ಚಿಸಲು ತನ್ನ ಮಗುವಿನ ಕತ್ತು ಸೀಳಿ ಕೊಲೆಗೈದ ಮಹಿಳೆ!
‘ಅಲ್ಲಾಹನನ್ನು ಮೆಚ್ಚಿಸಲು’ ಗರ್ಭಿಣಿ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನ ಕತ್ತು ಸೀಳಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
30 ವರ್ಷದ ಮದರಸಾ ಶಿಕ್ಷಕಿಯೊಬ್ಬರು ದೇವರನ್ನು ಮೆಚ್ಚಿಸುವ ಉದ್ದೇಶದಿಂದ ತನ್ನ ಮಗನನ್ನು ಅರ್ಪಣೆ ಮಾಡಿರುವುದಾಗಿ ತಿಳಿದು ಬಂದಿದೆ. ತನ್ನ ಆರು ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಮಗನನ್ನು ಹತ್ಯೆಗೈದ ಬಳಿಕ ಮಹಿಳೆಯೇ ತಾನು ಎಸಗಿದ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆಯ ಮೂವರು ಗಂಡು ಮಕ್ಕಳಲ್ಲಿ ಮೃತ ಮಗು ಕಿರಿಯ ಮಗುವಾಗಿದ್ದು, ಬೆಳಗಿನ ಜಾವ ಮಗುವನ್ನು ಎಬ್ಬಿಸಿದ ಮಹಿಳೆ ಸ್ನಾನದ ಮನೆಗೆ ಕರೆದೊಯ್ದು ಹೋಗಿ ಕೈಕಾಲುಗಳನ್ನು ಕಟ್ಟಿ ನಂತರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಈ ಘಟನೆ ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಊರಿನ ರಸ್ತೆಗಳಲ್ಲಿ ಹರಿದ ರಕ್ತದ ಬಣ್ಣದ ನೀರು; ವಿಡಿಯೋ ನೋಡಿ ದಂಗಾದ ನೆಟ್ಟಿಗರು!

