FACT CHECK | ಪ್ರಧಾನಿ ಮೋದಿಯ ಎಕ್ಸ್ ಖಾತೆಯನ್ನು ಶ್ವೇತಭವನ ಅನ್ಫಾಲೋ ಮಾಡಿದೆಯೇ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗೆಳೆಯ ಡೊನಾಲ್ಡ್ ಟ್ರಂಪ್ ಇದೇ ಜನವರಿ 20ರಂದು ಅಲ್ಲಿನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಶ್ವೇತಭವನವು ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆಯನ್ನು ಅನ್ ಫಾಲೋ ಮಾಡಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
White House has unfollowed Vishwaguru Narendra Modi pic.twitter.com/v10guAAjGT
— Dhruv Rathee (Parody) (@dhruvrahtee) January 3, 2025
ಧ್ರುವ್ ರಾಠಿ ಪರೋಡಿ ಖಾತೆ ಸೇರಿ ಹಲವು ಖಾತೆಗಳಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ‘ಶ್ವೇತಭವನವು ವಿಶ್ವಗುರು ನರೇಂದ್ರ ಮೋದಿಯನ್ನು ಅನ್ಫಾಲೋ ಮಾಡಿದೆ’ ಎಂದು ಬರೆಯಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಚಿತ್ರದ ಜೊತೆಗೆ ಆಜ್ ತಕ್ನ ಟ್ವೀಟ್ನ ಚಿತ್ರವನ್ನೂ ಇದರಲ್ಲಿ ಪೋಸ್ಟ್ ಮಾಡಲಾಗಿದೆ.

ಏಪ್ರಿಲ್ 10ರಂದು, ಶ್ವೇತಭವನದ ಎಕ್ಸ್ ಹ್ಯಾಂಡಲ್ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಭಾರತೀಯ ಟ್ವಿಟರ್ ಹ್ಯಾಂಡಲ್ಗಳನ್ನು ಫಾಲೋ ಮಾಡಿತು. ಆದರೆ ಈಗ ಈ ಎಲ್ಲಾ ಹ್ಯಾಂಡಲ್ಗಳನ್ನು ಫಾಲೋ ಮಾಡುತ್ತಿಲ್ಲ ಎಂದು ಹಲವು ಸಾಮಾಜಿಕ ಮಾದ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ. ಶ್ವೇತ ಭವನ ನಿಜವಾಗಿಯೂ ಮೋದಿ ‘ಎಕ್ಸ್’ ಖಾತೆಯನ್ನು ಅನ್ಫಾಲೋ ಮಾಡಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ, ಶ್ವೇತ ಭವನ ನಿಜವಾಗಿಯೂ ಮೋದಿ ‘ಎಕ್ಸ್’ ಖಾತೆಯನ್ನು ಅನ್ಫಾಲೋ ಮಾಡಿದೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,‘ಲೈವ್ ಹಿಂದೂಸ್ತಾನ್’ನ ವರದಿ ಲಭ್ಯವಾಗಿದೆ.
ಇದರಲ್ಲಿ ಶ್ವೇತಭವನದ ಹೇಳಿಕೆ ಉಲ್ಲೇಖವಾಗಿತ್ತು. ಇದರ ಪ್ರಕಾರ ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಭೇಟಿಯ ಸಮಯದಲ್ಲಿ ಆತಿಥೇಯ ದೇಶದ ಪ್ರಧಾನಿ, ಅಧ್ಯಕ್ಷರು ಹಾಗೂ ಅಧಿಕಾರಿಗಳ ‘ಎಕ್ಸ್’ ಹ್ಯಾಂಡಲ್ಗಳನ್ನು ಫಾಲೋ ಮಾಡಲಾಗುತ್ತದೆ. ಇದರಿಂದಾಗಿ ಮರು ಟ್ವೀಟ್ ಮಾಡಲು ಅನುಕೂಲವಾಗುತ್ತದೆ. ನಂತರ ಅನ್ಫಾಲೋ ಮಾಡುವುದು ರೂಢಿ ಎಂದು ಇದರಲ್ಲಿ ಬರೆಯಲಾಗಿತ್ತು.
2020ರ ಏಪ್ರಿಲ್ 30ರಂದು ಪ್ರಕಟವಾದ ‘ದಿ ಹಿಂದೂ’ ವರದಿಯ ಪ್ರಕಾರ , ” ಅಧ್ಯಕ್ಷರ ಭೇಟಿಯ ಸಮಯದಲ್ಲಿ ಅವರ ಭೇಟಿಯನ್ನು ಬೆಂಬಲಿಸುವ ಸಂದೇಶಗಳನ್ನು ರಿಟ್ವೀಟ್ ಮಾಡಲು ಸರಳಗೊಳಿಸುವ ಉದ್ದೇಶದಿಂದ ಟ್ವಿಟರ್ ಹ್ಯಾಂಡಲ್ನಲ್ಲಿ ಸಾಮಾನ್ಯವಾಗಿ ಆತಿಥೇಯ ದೇಶಗಳ ಖಾತೆಗಳನ್ನು ಸ್ವಲ್ಪ ಸಮಯದವರೆಗೆ ಫಾಲೋ ಮಾಡುತ್ತದೆ ಎಂದು ಹೇಳಿದೆ.”
ಶ್ವೇತಭವನವು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಎಕ್ಸ್’ನಲ್ಲಿ ಅನ್ಫಾಲೋ ಮಾಡಿದೆ ಎಂಬ ಸುದ್ದಿಯು ಈಗಿನದಲ್ಲ; 2020ರದ್ದು ಎಂದು ತಿಳಿದು ಬಂದಿದೆ. ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮುನ್ನ ಹಳೆಯ ವರದಿಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಜನರನ್ನು ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಕಂಡುಕೊಳ್ಳಲಾಗಿದೆ. ಇತ್ತೀಚೆಗೆ ಶ್ವೇತಭವನವು ಪ್ರಧಾನಿ ಮೋದಿಯನ್ನು ಅನ್ಫಾಲೋ ಮಾಡಿಲ್ಲ ಎಂದು ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿಶ್ವೇತಭವನವು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಎಕ್ಸ್’ನಲ್ಲಿ ಅನ್ಫಾಲೋ ಮಾಡಿದ್ದ ಹಳೆಯ ಸುದ್ದಿಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅರವಿಂದ್ ಕೇಜ್ರಿವಾಲ್ ಮೂಲ RSS ಎಂಬುದು ನಿಜವೇ?

