FACT CHECK | ಒಂದು ವರ್ಷದ ಉಚಿತ ಮೊಬೈಲ್ ರೀಚಾರ್ಜ್ ಎಂಬ ಆಫರ್‌ಗಳ ಬಗ್ಗೆ ಇರಲಿ ಎಚ್ಚರ!

“ಉಚಿತ ಮೊಬೈಲ್ ರೀಚಾರ್ಜ್ 100 ಪರ್ಸೆಂಟ್ ವರ್ಕಿಂಗ್ ಟ್ರಿಕ್ಸ್” ಎಂಬ ಶೀರ್ಷಿಕೆಯೊಂದಿಗೆ ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ಟೆಕ್ನೋ ಇಂಟೆಕ್ಸ್ ಎಂಬ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬಳಕೆದಾರರು ಒಂದು ವರ್ಷದ ಉಚಿತ ರೀಚಾರ್ಜ್ ಪಡೆಯಬಹುದು ಎಂದು ಹೇಳಲಾಗಿದೆ.

 

View this post on Instagram

 

A post shared by Hitech_Fye (@hitech_fye)

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಒಂದು ವರ್ಷದ ಮೊಬೈಲ್ ರೀಚಾರ್ಜ್‌ಅನ್ನು ಉಚಿತವಾಗಿ ಪಡೆಯಬಹುದೇ? ಈ ಕೊಡುಗೆಯನ್ನು ನಿಜವಾಗಿಯೂ ನೀಡಲಾಗಿದೆಯೇ? ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಒಂದು ವರ್ಷಕ್ಕೆ ಉಚಿತ ಮೊಬೈಲ್ ರೀಚಾರ್ಜ್ ಎಂದರೆ ಯಾರಾದರೂ ಸುಮ್ಮನೆ ಇರಲು ಸಾಧ್ಯವೇ? ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಲಿಂಕ್ ಓಪನ್ ಮಾಡಲು ಪ್ರಯತ್ನಿಸುತ್ತಾರೆ. ಒಂದು ವೇಳೆ ನೀವು ಉಚಿತ ರೀಚಾರ್ಜ್‌ ಆಸೆಗೆ ವೆಬ್‌ಸೈಟ್‌ನಲ್ಲಿರುವ ಲಿಂಕ್ ಓಪನ್ ಮಾಡಿದರೆ ವಂಚನೆ ಜಾಲಕ್ಕೆ ಬೀಳುತ್ತಿದ್ದೀರಿ ಎಂದರ್ಥ.

ಏಕೆಂದರೆ ವಾಸ್ತವವಾಗಿ, ವೈರಲ್ ವಿಡಿಯೋದಲ್ಲಿ ನೀಡಲಾದ ಎಲ್ಲಾ ಮಾಹಿತಿಯು ನಕಲಿಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಮತ್ತು ಯಾವುದೇ ವರದಿಯ ಮೇಲೆ ಕ್ಲಿಕ್ ಮಾಡಿದಾಗ, ಅದು ಬಳಕೆದಾರರನ್ನು ಮತ್ತೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಇದು ಬಳಕೆದಾರರನ್ನು ದಾರಿತಪ್ಪಿಸಲು ಮತ್ತು ವೀವ್ಸ್ ಮತ್ತು ಲೈಕ್‌ಗಳನ್ನು ಪಡೆಯಲು ಮಾಡಿರುವ ಟ್ರಿಕ್ ಆಗಿದೆ.

ವೈರಲ್ ಆಗಿರುವ ವಿಡಿಯೋದ ನಿಜಾಂಶ ತಿಳಿಯಲು, ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ನಾವು ಗೂಗಲ್‌ ಸರ್ಚ್ ಮಾಡಿದಾಗ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳೂ ಉಚಿತ ರೀಚಾರ್ಜ್ ಅನ್ನು ನೀಡುತ್ತಿವೆ ಎಂದು ಉಲ್ಲೇಖಿಸಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ಮಾಹಿತಿಗಾಗಿ ವಿಡಿಯೋದಲ್ಲಿ ಉಲ್ಲೇಖಿಸಿರುವ ವೆಬ್‌ಸೈಟ್ ಕುರಿತು ಸರ್ಚ್ ಮಾಡಿದಾಗ, ವೆಬ್‌ಸೈಟ್‌ನಲ್ಲಿ ಉಚಿತ ರೀಚಾರ್ಜ್ ಅನ್ನು ಹೇಗೆ ಪಡೆಯುವುದು ಎಂದು ನಮೂದಿಸಿಲ್ಲ. ಬದಲಿಗೆ ವೆಬ್‌ಸೈಟ್‌ನಲ್ಲಿನ ಯಾವುದೇ ವರದಿಯನ್ನು ಕ್ಲಿಕ್ ಮಾಡಿದಾಗ ಬಳಕೆದಾರರನ್ನು ಬೇರೆ ವೆಬ್‌ಸೈಟ್‌ಗೆ ಹೋಗುವಂತೆ ಮಾಡುತ್ತದೆ. ವಿಡಿಯೋದಲ್ಲಿ ತೋರಿಸಿರುವ ವಿಧಾನ ಮತ್ತು ಟ್ರಿಕ್ ಅನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿಲ್ಲ.

ಖಾಸಗಿ ವೆಬ್​ಸೈಟ್ ಒಂದು ಈ ಸುದ್ದಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಸೈಬರ್ ತಜ್ಞ ಅನುಜ್ ಅಗರ್ವಾಲ್ ಅವರನ್ನು ಸಂಪರ್ಕಿಸಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ವೀವ್ಸ್ ಮತ್ತು ಲೈಕ್ಸ್​ ಪಡೆಯುವ ಉದ್ದೇಶದಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಬಳಕೆದಾರರನ್ನು ಒಂದು ವೆಬ್‌ಸೈಟ್‌ನಿಂದ ಇನ್ನೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗಲಾಗುತ್ತದೆ ಇದರಿಂದ ಅವರ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಉಚಿತ ರೀಚಾರ್ಜ್ ಹೆಸರಿನಲ್ಲಿ ಬಳಕೆದಾರರನ್ನು ದಾರಿ ತಪ್ಪಿಸಿರುವ ಕುರಿತು ವರದಿ ಆಗಿದೆ. ಹ್ಯಾಕರ್‌ಗಳು ವಿಭಿನ್ನ ಪೋಸ್ಟ್​ಗಳ ಮೂಲಕ ಬಳಕೆದಾರರ ಡೇಟಾವನ್ನು ಕದಿಯಲು ಪ್ರಯತ್ನಿಸುವ ಟ್ರಿಕ್ ಇದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ನೀಡಲಾದ ಎಲ್ಲಾ ಮಾಹಿತಿಯು ನಕಲಿಯಾಗಿದೆ. ಯಾವುದೇ ಟೆಲಿಕಾಂ ಕಂಪನಿಗಳು ಉಚಿತ ರೀಚಾರ್ಜ್ ಸೇವೆಯನ್ನು ನೀಡಿಲ್ಲ. ಇಂತಹ ಉಚಿತ ರೀಚಾರ್ಜ್ ಸೇವೆಗಳ ಕುರಿತಾದ ಅಪ್‌ಡೇಟ್ಸ್‌ಗಳ ಬಗ್ಗೆ ಸದಾ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 5 ಸಾವಿರ ರೂಪಾಯಿಯ ಹೊಸ ನೋಟನ್ನು RBI ಬಿಡುಗಡೆ ಮಾಡಲಿದೆಯೆ ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights