FACT CHECK | ಅಣ್ಣನನ್ನೆ ಮದುವೆಯಾದ ತಂಗಿ ಎಂದು ಸ್ಕ್ರಿಪ್ಟೆಡ್‌ ವಿಡಿಯೋ ಹಂಚಿಕೆ

ಹುಡುಗಿಯೊಬ್ಬಳು ತನ್ನ ಸಹೋದರನನ್ನು ಮದುವೆಯಾಗಿ ಒಂದೂವರೆ ತಿಂಗಳಿನ ಗರ್ಭಿಣಿಯಾಗಿದ್ದಾಳೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

 

View this post on Instagram

 

A post shared by M D Emran (@em_ran746)

ಹುಡುಗಿಯೊಬ್ಬಳು ತನ್ನ ಸಹೋದರನನ್ನು ಮದುವೆಯಾಗುವುದಾಗಿ ಒಪ್ಪಿಕೊಂಡು ಮಗುವನ್ನು ಪಡೆಯುತ್ತಿದ್ದೇನೆ ಎಂದು ಹೇಳುವ ವಿಡಿಯೋ ತುಣುಕನ್ನು ಇಲ್ಲಿ ನೋಡಬಹುದು.

ಇನ್​ಸ್ಟಾ, ಎಕ್ಸ್​ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮನೆಯವರ ವಿರೋಧದ ನಡುವೆಯೂ ತನ್ನ ಸಹೋದರಿಯನ್ನು ಮದುವೆಯಾದನೆಂದು ಹೇಳಿಕೊಳ್ಳುವ ಒಬ್ಬ ಹುಡುಗ ಹುಡುಗಿ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಸಹೋದರ-ಸಹೋದರಿಯರ ಮದುವೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಅದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಫೇಸ್‌ಬುಕ್‌ನಲ್ಲಿ ಕಂಟೆಂಟ್ ಕ್ರಿಯೆಟರ್​ನ ಪ್ರೊಫೈಲ್ ಲಭ್ಯವಾಗಿದೆ. ಕನ್ಹಯ್ಯಾ ಸಿಂಗ್ ಎಂಬವರು 1 ಜನವರಿ 2025 ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ವೈರಲ್ ವಿಡಿಯೋ ದೀರ್ಘ ಆವೃತ್ತಿಯನ್ನು ಅಪ್‌ಲೋಡ್ ಮಾಡಿದ್ದಾರೆ.

ವಿಡಿಯೋದ ದೀರ್ಘ ಆವೃತ್ತಿಯಲ್ಲಿ, ಹುಡುಗ ತನ್ನ ಸ್ವಂತ ಸಹೋದರನಲ್ಲ, ಆದರೆ ತನ್ನ ತಾಯಿಯ ಚಿಕ್ಕಪ್ಪನ ಮಗ ಎಂದು ಹುಡುಗಿ ಹೇಳುತ್ತಿರುವುದು ನೋಡಬಹುದು. ವಿಡಿಯೋಯೊವನ್ನು ನಿರ್ಮಿಸಿದ ರಚನೆಕಾರ ತನ್ನ ಫೇಸ್‌ಬುಕ್ ಬಯೋದಲ್ಲಿ “ತಮಾಷೆ ವಿಡಿಯೋ” ಮಾಡುವ ” ವಿಡಿಯೋ ಕ್ರಿಯೆಟರ್” ಎಂದು ತನ್ನನ್ನು ಉಲ್ಲೇಖಿಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಸಿಂಗ್ ಅವರ ಫೇಸ್​ಬುಕ್ ಪುಟದಲ್ಲಿ ಇಂತಹ ಇನ್ನಷ್ಟು ಸ್ಕ್ರಿಪ್ಟ್ ವಿಡಿಯೋಗಳು ಇವೆ.

ವಿಡಿಯೋ ಸೃಷ್ಟಿಕರ್ತ ಕನ್ಹಯ್ಯ ಕಶ್ಯಪ್ ಈ ವೀಡಿಯೊವನ್ನು ರಚಿಸಿದ್ದಾರೆ, ಇದು ನಿಜವಾದ ಘಟನೆಯನ್ನು ತೋರಿಸುವುದಿಲ್ಲ.

“ಹಾಗಾದರೆ ಅವನು ನನ್ನ ಸಹೋದರನಾಗಿದ್ದರೆ, ನಾನು ಅವನನ್ನು ಪ್ರೀತಿಸುತ್ತೇನೆ” ಎಂದು ಶೀರ್ಷಿಕೆ ನೀಡಲಾಗಿದೆ. ನಾವು ಬಳಕೆದಾರರ ಪ್ರೊಫೈಲ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಅಂತಹ ಹಲವಾರು ನಕಲಿ ವಿಡಿಯೋಗಳನ್ನು ಕಂಡುಕೊಂಡಿದ್ದೇವೆ. ಅವುಗಳಲ್ಲಿ ಕೆಲವನ್ನು ನೀವು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಈ ಮಾಹಿತಿಯ ಆಧಾರದ ಮೇಲೆ ಹುಡುಗಿಯೊಬ್ಬಳು ತನ್ನ ಸಹೋದರನನ್ನು ಮದುವೆಯಾಗಿ ಒಂದೂವರೆ ತಿಂಗಳಿನ ಗರ್ಭಿಣಿಯಾಗಿದ್ದಾಳೆ ಎಂದು ಹೇಳುತ್ತಿರುವ ಈ ವಿಡಿಯೋ ಸ್ಕ್ರಿಪ್ಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ರೀತಿಯ ಸ್ಕ್ರಿಪ್ಟ್ ಮಾಡಿದ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ಅಮಾಯಕರು ಇದನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕ್ಷೌರಿಕರು ತಲೆ ಮತ್ತು ಕುತ್ತಿಗೆಗೆ ಹೊಡೆಯುವ ಮೂಲಕ ಮಸಾಜ್ ಮಾಡುತ್ತಾರೆ. ಮಸಾಜ್ ಸಮಯದಲ್ಲಿ ಯುವಕನು ಅಸ್ವಸ್ಥಗೊಂಡಿರುವುದು ಕಂಡುಬರುತ್ತದೆ.

ವಿಡಿಯೋವನ್ನು ನೋಡಿದ ನಂತರ, ಒಂದು ಸೆಕೆಂಡಿಗೆ ಪರದೆಯ ಮೇಲೆ ಕಾಣಿಸಿಕೊಂಡ ಹಕ್ಕು ನಿರಾಕರಣೆಯನ್ನು(Disclaimer) ನಾವು ಕಂಡುಕೊಂಡಿದ್ದೇವೆ. “ಈ ವಿಡಿಯೋವನ್ನು ಸಂಪೂರ್ಣವಾಗಿ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ” ಎಂದು ಅದು ಹೇಳಿದೆ. ಈ ವಿಡಿಯೋ ಯಾವುದೇ ವ್ಯಕ್ತಿ ಅಥವಾ ಗುಂಪನ್ನು ನೋಯಿಸುವ ಗುರಿಯನ್ನು ಹೊಂದಿಲ್ಲ ಎಂದು ಅದು ಉಲ್ಲೇಖಿಸಿದೆ.

ವಿಡಿಯೋ ಸೃಷ್ಟಿಕರ್ತ ಕನ್ಹಯ್ಯ ಕಶ್ಯಪ್ ಈ ವೀಡಿಯೊವನ್ನು ರಚಿಸಿದ್ದಾರೆ, ಇದು ನಿಜವಾದ ಘಟನೆಯನ್ನು ತೋರಿಸುವುದಿಲ್ಲ.

ನಾವು ಕಶ್ಯಪ್ ಅವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ ಅದನ್ನು “ವಿಡಿಯೋ ಸೃಷ್ಟಿಕರ್ತ” ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಬಯೋದಲ್ಲಿ “ಕನ್ಹಯ್ಯ ಸಿಂಗ್” ಎಂದು ಬರೆಯಲಾಗಿದೆ. ಹಾಗೆಯೇ “ಎಕ್ಸ್‌ಪೋಸ್‌ ಮತ್ತು ತಮಾಷೆ ವಿಡಿಯೋ” ಬರೆದುಕೊಂಡಿದ್ದಾರೆ.

ವಿಡಿಯೋ ಸೃಷ್ಟಿಕರ್ತ ಕನ್ಹಯ್ಯ ಕಶ್ಯಪ್ ಈ ವೀಡಿಯೊವನ್ನು ರಚಿಸಿದ್ದಾರೆ, ಇದು ನಿಜವಾದ ಘಟನೆಯನ್ನು ತೋರಿಸುವುದಿಲ್ಲ.

ಆದ್ದರಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಸಹೋದರ-ಸಹೋದರಿ ಪರಸ್ಪರ ಮದುವೆಯಾಗುವ ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಮಗಳು  ತಂದೆಯನ್ನು ಮದುವೆ ಆಗಿದ್ದಾಳೆ ಮತ್ತು ತಾಯಿಯೇ ಮಗನನ್ನು ಮದುವೆ ಆಗಿದ್ದಾಳೆ ಎಂದು ನಾಟಕೀಯದ ವಿಡಿಯೋಗಳು ಇದೇ ರೀತಿ ವೈರಲ್‌ ಆಗಿದ್ದವು. ಅವುಗಳನ್ನು ಫ್ಯಾಕ್ಟ್‌ಚೆಕ್ ಮೂಲಕ ಸ್ಕ್ರಿಪ್ಟ್‌ ಮಾಡಲಾದ ವಿಡಿಯೋ ಎಂದು ಪತ್ತೆ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಅಣ್ಣನೇ ತನ್ನ ತಂಗಿಯನ್ನು ಮದುವೆಯಾಗಿದ್ದು ಆಕೆ ಗರ್ಭಿಣಿಯಾಗಿದ್ದಾಳೆ ಎಂಬುದು ಸುಳ್ಳು. ಜನರಲ್ಲಿ ಜಾಗೃತಿ ಮೂಡಿಸಲು ಈ ವಿಡಿಯೋ ಮಾಡಲಾಗಿದೆ ಎಂಬ ಡಿಸ್‌ಕ್ಲೈಮ್ ವಿವರಣೆಯನ್ನು ನೀಡಲಾಗಿದೆ. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾಡಿರುವ ವಿಡಿಯೋವನ್ನು ಅಸಲಿ ಎಂದು ನಂಬಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ವಿಡಿಯೋ ತುಣುಕು ನೈಜ ಘಟನೆಯಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :FACT CHECK | ನಟ ಶಾರುಖ್ ದಂಪತಿ ಮೆಕ್ಕಾದಲ್ಲಿ ಎಂದು AI ನಿಂದ ರಚಿಸಲಾದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights