FACT CHECK | ಪಾಕಿಸ್ತಾನದಲ್ಲಿ ಮುಸ್ಲಿಮರಿಂದಲೇ ಮಸೀದಿ ಮೇಲೆ ದಾಳಿ ನಡೆದಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮುಸುಕುದಾರಿಗಳು ಮಸೀದಿಯೊಂದರ ಮೇಲೆ ದಾಳಿ ನಡೆಸುತ್ತಿರುವುದನ್ನು ಕಾಣಬಹುದು. ” ಇಸ್ಲಾಂ ಪಂಗಡಗಳಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲ ಕೇವಲ ಮುಸ್ಲಿಂ ಒಂದೇ ಅಂತಾರ ಅಲ್ವಾ. ಆದರೆ ಪಾಕಿಸ್ತಾನದ ಕರಾಚಿಯಲ್ಲಿ ಮುಸ್ಲಮರ ಗುಂಪೊಂದು ಸುತ್ತಿಗೆಯಿಂದ ಮಸೀದಿಯನ್ನು ಒಡೆದಿದೆ. ಆಶ್ಚರ್ಯ ಪಡೆಬೇಡಿ ಈ ಮಸೀದಿಯು ಅಹಮದ್ದೀಯ ಮಸೀದಿಯಾಗಿತ್ತು.” ಎಂಬ ಬರಹದೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.

ಹಿಂದೂ ರಾಷ್ಟ್ರ ಎಂಬ ಬಲಪಂಥೀಯ ಇನ್‌ಸ್ಟಾಗ್ರಾಮ್  ಖಾತೆಯಿಂದ ಈ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಅನ್ನು ದ್ವೇಷ ಭಾವನೆ ಭಿತ್ತಲು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಘಟನೆ ಯಾವಾಗ ಎಲ್ಲ ನಡೆದಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಫೆಬ್ರವರಿ 2023ರಂದು ಒನ್ ಇಂಡಿಯಾ.ಕಾಂ ಮಾಡಿರುವ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ ಪಾಕಿಸ್ತಾನಿ ಗುಂಪಿನ ತೆಹ್ರೀಕ್-ಎ-ಲಬ್ಬೈಕ್‌ನ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಇದೇ ರೀತಿಯ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ವಿಡಿಯೋ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಎಕ್ಸ್‌ನಲ್ಲಿ ಸರ್ಚ್ ಮಾಡಿದಾಗ, ಖಾಸಿಫ್ ಚೌದ್ರಿ ಎಂಬ ಎಕ್ಸ್‌ ಬಳಕೆದಾರರು, ದಿನಾಂಕ 2 ಫೆಬ್ರವರಿ 2023ರಂದು ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ.

ಮೂಲಭೂತವಾದಿಗಳು ಅಹ್ಮದಿಯಾ ಮಸೀದಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಕರಾಚಿಯಲ್ಲಿ ಕಳೆದ ಶುಕ್ರವಾರ ಮತಾಂಧರ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರ ಆಗಮನದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದು ದಾಳಿಕೋರರಿಗಾಗಿ ಶೋಧ ನಡೆಯುತ್ತಿದೆ. ಹಶು ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೆಲ್ಮೆಟ್ ಧರಿಸಿರುವ ಕೆಲವು ಅಪರಿಚಿತ ವ್ಯಕ್ತಿಗಳು ಮಸೀದಿಯ ಮಿನಾರ್‌ಗಳನ್ನು ಒಡೆಯುತ್ತಿರುವುದನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ‘ತಹರಿಕ-ಎ-ಲಬ್ಬೈಕ ಪಾಕಿಸ್ತಾನ’ ಎಂಬ ಸಂಘಟನೆಯ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಅಹ್ಮದಿಯ ಮಸೀದಿಯ ಮೇಲೆ ದಾಳಿ ನಡೆಸಿ ಮಿನಾರ್‌ಗಳನ್ನು ಒಡೆದು ಹಾಕುತ್ತಿರುವ 2023ರ ಹಳೆಯ ದೃಶ್ಯಗಳನ್ನು ಇತ್ತೀಚೆಗೆ ನಡೆದ ಘಟನೆ ಎಂದು ಬಿಂಬಿಸಿ ಹಿಂದೂ ಧರ್ಮದಲ್ಲಿ ಇರುವಂತೆ ಮುಸಲ್ಮಾನರಲ್ಲಿ ಜಾತಿ, ಪಂಗಡ ತಾರತಮ್ಯಗಳು ಇವೆ ಎಂಬ ಭಾವನೆ ಮೂಡಿಸಲು ತಪ್ಪಾಗಿ ಹಂಚಿಕೊಳ್ಳಲಾಗತ್ತಿದೆ. ಹಾಗಾಗಿ ಈ ವೈರಲ್ ವಿಡಿಯೋ ಇತ್ತೀಚಿನದಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಹೆಸರಿನಲ್ಲಿ ನಕಲಿ ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights