ನಶಿಸುತ್ತಿದೆ ಸಾವಯವ ಪೆನ್ನಿ ಉತ್ಪಾದನೆ; ಅಂತ್ರವಾಗಿದೆ ಗೇರು ಹಣ್ಣನ್ನೇ ಅವಲಂಬಿಸಿದ್ದವರ ಬದುಕು!

ಗೇರು ಹಣ್ಣು ಅಥವಾ ಗೋಡಂಬಿ ಹಣ್ಣಿಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಅಪಾರ ಬೇಡಿಕೆಯಿದೆ. 500 ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ತಂದ ಈ ಗೋಡಂಬಿ ಅಥವಾ ಗೇರು ಹಣ್ಣು ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೂ ಹಬ್ಬಿದೆ. ಗೋವಾದ ಉತ್ತರ ತುದಿಯಿಂದ ಕೇರಳದ ದಕ್ಷಿಣ ತುದಿಯವರೆಗೆ ಕರಾವಳಿಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅಪಾರ ಪ್ರಮಾಣದ ಗೇರು ಹಣ್ಣನ್ನು ಬೆಳೆಯಲಾಗುತ್ತದೆ.

ಯಾವುದೇ ಪೋಷಣೆಯಿಲ್ಲದೇ ಬಿದ್ದಲ್ಲಿ ಬೇರೂರಿ ಕೃಷಿಕರಿಗೆ ಕೈತುಂಬ ವರಮಾನ ನೀಡುವ ಗೇರು ಹಣ್ಣಿನ ಬೆಳೆ ಇತ್ತೀಚೆಗೆ ನಶಿಸಿ ಹೋಗುತ್ತಿದೆ. ಮಂಗಳೂರು, ಕೊಚ್ಚಿ, ಪಣಜಿಂಗಳಲ್ಲೂ ಗೋಡಂಬಿ ಫ್ಯಾಕ್ಟರಿಗಳು ಕಡಿಮೆಯಾಗುತ್ತಿವೆ. ಜೊತೆಗೆ ಗೇರು ಹಣ್ಣಿನ ಇನ್ನೊಂದು ವಿಶೇಷ ಪಾನೀಯವಾದ ಸಾಂಪ್ರದಾಯಿಕ ಕ್ಯಾಶ್ಯೂ ಪೆನ್ನಿ (ಮದ್ಯ) ಉತ್ಪಾದನೆಯೂ ಕುಸಿಯ ತೊಡಗಿದೆ.

ಫನ್ನಿ ಮದ್ಯ

ಮೊದಲೇ ಹೇಳಿದಂತೆ ಗೇರು ಹಣ್ಣು ಬಹು ಉಪಯೋಗದ ವಸ್ತು. ಗೇರು ಹಣ್ಣಿನ ಗೋಡಂಬಿ ಬೀಜವು  ಅಡಿಗೆಗಳಿಗೆ, ಖಾದ್ಯಗಳಿಗೆ ಬಳಕೆಯಾದರೆ, ಗೇರು ಹಣ್ಣು ದನಗಳಿಗೆ, ಪಶು ಪಕ್ಷಿಗಳಿಗೆ ಆಹಾರವಾಗಿ, ತೋಟಕ್ಕೆ ಗೊಬ್ಬರವಾಗಿ ಹಾಗೂ ಮದ್ಯ ತಯಾರಿಕೆಗೂ ಬಳಕೆಯಾಗುತ್ತದೆ. ಈ ಗೇರು ಹಣ್ಣಿನ ಪೆನ್ನಿ ಹೆಚ್ಚಾಗಿ ಕೇರಳದಲ್ಲಿ ಮಾತ್ರ ತಯಾರಾಗುತ್ತದೆ. ಕರ್ನಾಟಕ ಹಾಗೂ ಕೇರಳದ ಕೆಲವು ಕಡೆ ಮನೆಯಲ್ಲಿ ಸ್ವಂತ ಬಳಕೆಗಾಗಿಯೂ ಗೇರು ಹಣ್ಣಿನ ಪಾನೀಯವನ್ನು ತಯಾರಿಸಲಾಗುತ್ತದೆ. ಆದರೆ ಗೇರು ಹಣ್ಣಿನ ಪೆನ್ನಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಸ್ಥಳ ಗೋವಾ. ಇಲ್ಲಿ ಲೆಕ್ಕವಿಲ್ಲದಷ್ಟು ಸ್ವಾದಿಷ್ಟವಾದ ದೇಸಿ ಫೆನಿಗಳು ತಯಾರಾಗುತ್ತವೆ.

ಗೇರು ಹಣ್ಣು ಆರೋಗ್ಯಕ್ಕೆ ಮಹಾ ಮದ್ದು.! > suddione - Kannada News, Kannada news  live

ಇತ್ತೀಚೆಗೆ ಯಂತ್ರ ಆಧಾರಿತ ಮಧ್ಯ ತಯಾರಿಕಾ ಘಟಕಗಳ ಸ್ಥಾಪನೆಯ ಕಾರಣದಿಂದ ಮನೆಯಲ್ಲಿಯೇ ತಯಾರಾಗುತ್ತಿದ್ದ ರಾಸಾಯನಿಕ ಮುಕ್ತ ಸಾವಯವ ಪೆನ್ನಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಗೇರು ಹಣ್ಣನ್ನು ಕಾಡಿನಿಂದ ಸಂಗ್ರಹಿಸಿ, ಅದರಿಂದ ಹಣ್ಣಿನ ರಸವನ್ನು ತಯಾರಿಸಿ, ಅದನ್ನು ಭಟ್ಟಿ ಇಳಿಸಿ ಮದ್ಯ ತಯಾರಿಸುವ ಪದ್ಧತಿ ಈಗ ನಶಿಸುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ ಭವಿಷ್ಯವೂ ಆತಂಕಕ್ಕೆ ಸಿಲುಕಿದೆ.

ಗೋವಾದಲ್ಲಿ ದಶಕಗಳಿಂದ ದೇಸಿ ಮದ್ಯವನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದ ಕುಟುಂಬ ಗಾಂವಕರ್ ಫ್ಯಾಮಿಲಿ. ಕಟ್ಟಿಗೆಯ ಕಡ್ಡಿಯನ್ನು ಬಳಸಿ ಕಾಡಿನಿಂದ ಹಣ್ಣನ್ನು ಆರಿಸಿ ತಂದು ಫೆನಿಯನ್ನು ತಯಾರಿಸುತ್ತಿದ್ದರು. ಆದರೆ ಸರ್ಕಾರ ಗೇರು ಹಣ್ಣುಗಳನ್ನು ಕಟಾವು ಮಾಡಲು ದೊಡ್ಡ ದೊಡ್ಡ ಮಾಲೀಕರಿಗೆ ಟೆಂಡರ್‌ ನೀಡುತ್ತಿದೆ. ಹೀಗಾಗಿ ನಮಗೆ ಏನೂ ಸಿಗುತ್ತಿಲ್ಲ ಎಂದು ಗಾಂವಕರ್ ಕುಟುಂಬದ ದೃಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ: ಜಲ ಸಂಪನ್ಮೂಲ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ ಭ್ರಷ್ಟಾಚಾರ!?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights