FACT CHECK | ಮಹಾಕುಂಭ ಮೇಳಕ್ಕೆ ತೆರಳಲು ರೈಲಿನಲ್ಲಿ ಜಾಗ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ರೈಲಿನ ಟಾಪ್‌ನಲ್ಲಿ ಮಲಗಿಕೊಂಡು ಪ್ರಯಾಣಿಸಿದ್ರಾ?
ಪ್ರಯಾಗ್‌ರಾಜ್ ತಲುಪಲು ಜನರು ವಿಧ ವಿಧದ ಮಾರ್ಗಗಳನ್ನು ಅನುಸರಿಸುತ್ತಿದ್ದು, ಜನಸಂದಣಿಯಿಂದಾಗಿ ಇತ್ತೀಚೆಗೆ ಕೆಲವು ಬಿಹಾರದಿಂದ ದೋಣಿಯ ಮೂಲಕ ಕುಂಭ ಮೇಳವನ್ನು ತಲುಪಿದ್ದರು. ಇದೀಗ ವ್ಯಕ್ತಿಯೊಬ್ಬರು ಸೀಟು ಸಿಗದೆ ರೈಲಿನ ಎಂಜಿನ್ ಮೇಲೆ ಕುಳಿತು ಪ್ರಯಾಣಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ‘ayurvedicburnol‘ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೈಲ್ವೇ ಎಂಜಿನ್ ಮೇಲೆ ಮಲಗಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದ ಮೇಲೆ ‘ಮಹಾಕುಂಭಕ್ಕೆ ತಲುಪಲು ಕೊನೆಯ ಆಯ್ಕೆ’ ಎಂದು ಬರೆಯಲಾಗಿದೆ.
‘Mr. Kapoor official‘ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಕೂಡ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲೂ ಇದು ಮಹಾ ಕುಂಭ ಮೇಳಕ್ಕೆ ಪ್ರಯಾಣಿಸಿದ್ದರ ವಿಡಿಯೋ ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲ, ಪ್ರಮುಖ ಭಾಗವೊಂದರ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 7 ಡಿಸೆಂಬರ್ 2024ರಂದು ಹಂಚಿಕೊಂಡ ಇದೇ ರೀತಿಯ ವಿಡಿಯೋ ‘rahul_baba_ki_masti_’ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಲಭ್ಯವಾಗಿದೆ.
ನೋಡಿದಾಗ ಈ ವಿಡಿಯೋವನ್ನು ಕುಂಭ ಮೇಳಕ್ಕೂ ಮುನ್ನ ಅಂದರೆ ಡಿಸೆಂಬರ್ 7ರಂದೇ ಪೋಸ್ಟ್ ಮಾಡಲಾಗಿತ್ತು. ಅಸಲಿಗೆ ಕುಂಭ ಮೇಳ ಪ್ರಾರಂಭವಾಗಿದ್ದು ಜನವರಿಯಲ್ಲಿ; ಹೀಗಾಗಿ ರೈಲು ಎಂಜಿನ್‌ನ ಮೇಲೆ ಪ್ರಯಾಣಿಸಿ ಕುಂಭ ಮೇಳಕ್ಕೆ ತಲುಪಲಾಗಿದೆ ಎಂಬುದು ತಪ್ಪು ಹೇಳಿಕೆ ಎಂದು ತಿಳಿದು ಬಂತು.
![]()
ನಂತರ ಮತ್ತಷ್ಟು ಪರಿಶೀಲನೆ ನಡೆಸಿದಾಗ ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾಗಿರುವ ವರದಿಯು ಸಿಕ್ಕಿತು. ಇದರ ಪ್ರಕಾರ ರಾಹುಲ್ ಗುಪ್ತಾ ಎಂಬ ಭಾರತೀಯ ಇನ್ಫ್ಲುಯೆನ್ಸರ್ ಈ ರೀತಿ ಪ್ರಯಾಣಿಸಿದ ವ್ಯಕ್ತಿಯಾಗಿದ್ದಾರೆ. ಬಾಂಗ್ಲಾದೇಶದ ರೈಲು ಎಂಜಿನ್‌ನ ಮೇಲೆ ಪ್ರಯಾಣಿಸುತ್ತಿರುವುದಾಗಿ ಇವರು ಹೇಳಿದ್ದರು.
‘ನ್ಯೂಜ್ 18’ನಲ್ಲೂ ಈ ಬಗ್ಗೆ ವರದಿ ಇದ್ದು, ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುವ ರಾಹುಲ್ ಗುಪ್ತಾ ಬಾಂಗ್ಲಾದೇಶದ ರೈಲು ಎಂಜಿನ್‌ನ ಮೇಲೆ ಪ್ರಯಾಣಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.ರೈಲು ಎಂಜಿನ್‌ನ ಮೇಲೆ ಮಲಗಿಕೊಂಡು ಕುಂಭ ಮೇಳಕ್ಕೆ ಪ್ರಯಾಣ ಎಂಬುದು ಸುಳ್ಳು ಸುದ್ದಿ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಇದು ಬಾಂಗ್ಲಾದೇಶದ ರೈಲು ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಹಳೆಯ ವಿಡಿಯೋವನ್ನು, ಮಹಾಕುಂಭ ಮೇಳಕ್ಕೆ ತೆರಳಲು ವ್ಯಕ್ತಿಯೊಬ್ಬ ರೈಲಿನಲ್ಲಿ ಪ್ರಯಾಣಿಸಲು ಜಾಗ ಸಿಗದಿದ್ದಕ್ಕೆ ರೈಲು ಇಂಜಿನ್ ಮೇಲೆ ಮಲಗಿಕೊಂಡು ಪ್ರಯಾಣಿಸಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಗೋವುಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ

