FACT CHECK | ಮಹಾಕುಂಭ ಮೇಳದಲ್ಲಿ ಸನ್ನಿ ಲಿಯೋನ್ ಪುಣ್ಯ ಸ್ನಾನ ಮಾಡಿ ಪಾಪ ಕಳೆದುಕೊಂಡ್ರಾ? ವೈರಲ್ ವಿಡಿಯೋದ ಅಸಲೀಯತ್ತೇನು
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭ ಮೇಳವು ಜ.13ರಂದು ಆರಂಭವಾಗಿದ್ದು, ಫೆ. 26ರಂದು ಮುಗಿಯಲಿದೆ. ಈವರೆಗೆ 50 ಕೋಟಿಯಷ್ಟು ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಈ ವೇಳೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಪ್ರಯಾಗರಾಜ್ನಲ್ಲಿ ಸಂಗಮದ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಪಿ) ಹೇಳಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇದರ ಮಧ್ಯೆ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ನಟಿ ಸನ್ನಿ ಲಿಯೋನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಘಾಟ್ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ಸನ್ನಿ ಲಿಯೋನ್ ಮಹಾ ಕುಂಭದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿ ಸನ್ನಿ ಲಿಯೋನ್ ತನ್ನ ಎಲ್ಲಾ ಪಾಪಗಳನ್ನು ತೊಳೆದುಕೊಂಡಳು’’ ಎಂದು ಬರೆದುಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವನ್ನು ಪರಿಶೀಲಿಸಲು, ಗೂಗಲ್ ಲೆನ್ಸ್ ಬಳಸಿ ಅದರ ಸ್ಕ್ರೀನ್ಶಾಟ್ಗಳನ್ನು ತೆಗೆದು ಸರ್ಚ್ ಮಾಡಿದಾಗ, ವಿಡಿಯೋಗೆ ಸಂಬಂಧಿಸಿದ ವರದಿಯನ್ನು ದೈನಿಕ್ ಜಾಗರಣ್ ವೆಬ್ಸೈಟ್ನಲ್ಲಿ ನಾವು ಕಂಡುಕೊಂಡಿದ್ದೇವೆ. 17 ನವೆಂಬರ್ 2023 ರಂದು ಪ್ರಕಟವಾದ ವರದಿಯಲ್ಲಿ, “ಸನ್ನಿ ಲಿಯೋನ್ ಸಂಗೀತ ಆಲ್ಬಮ್ನ ಪ್ರಚಾರಕ್ಕಾಗಿ ವಾರಣಾಸಿಗೆ ತಲುಪಿದ್ದರು. ಈ ಸಮಯದಲ್ಲಿ, ಅವರು ಬಾಬಾ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ಗಂಗಾ ಆರತಿಯಲ್ಲಿಯೂ ಭಾಗವಹಿಸಿದ್ದರು” ಎಂದು ಹೇಳಲಾಗಿದೆ.

ನವೆಂಬರ್ 17, 2023 ರಂದು ಪ್ರಕಟಿಸಿದ ವರದಿಯ ಪ್ರಕಾರ, ‘‘ಸನ್ನಿ ಲಿಯೋನ್ ಸಂಗೀತ ಆಲ್ಬಮ್ನ ಪ್ರಚಾರಕ್ಕಾಗಿ ವಾರಣಾಸಿಗೆ ಬಂದಿದ್ದರು. ಈ ಸಮಯದಲ್ಲಿ ಅವರು ಬಾಬಾ ವಿಶ್ವನಾಥರನ್ನು ಭೇಟಿ ಮಾಡಿದರು ಮತ್ತು ಗಂಗಾ ಆರತಿಯನ್ನು ಸಹ ವೀಕ್ಷಿಸಿದರು’’ ಎಂದು ಬರೆಯಲಾಗಿದೆ. ಜೀ ನ್ಯೂಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊ ಕಂಡುಬಂದಿದೆ. ನವೆಂಬರ್ 17, 2023 ರಂದು ಅಪ್ಲೋಡ್ ಮಾಡಲಾದ ವೀಡಿಯೊದೊಂದಿಗೆ ಒದಗಿಸಲಾದ ವಿವರಗಳ ಪ್ರಕಾರ, ಇದನ್ನು ವಾರಣಾಸಿಯಲ್ಲಿ ಚಿತ್ರೀಕರಿಸಲಾಗಿದೆ.
ಸನ್ನಿ ಲಿಯೋನ್ ಅವರ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿಯೂ ಸಹ ವೈರಲ್ ವೀಡಿಯೊ ನಮಗೆ ಕಂಡುಬಂದಿದೆ. ಆ ವಿಡಿಯೋವನ್ನು ಡಿಸೆಂಬರ್ 3, 2023 ರಂದು ಹಂಚಿಕೊಳ್ಳಲಾಗಿದೆ.
— Sunny Leone (@SunnyLeone) December 3, 2023
ಇನ್ನು ಸನ್ನಿ ಲಿಯೋನ್ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಯೇ ಎಂದು ನಾವು ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ವಿಶ್ವಾಸರ್ಹ ವರದಿ ಎಲ್ಲೂ ಕಂಡುಬಂದಿಲ್ಲ. ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಕೂಡ ಪರಿಶೀಲಿಸಿದ್ದೇವೆ. ಅಲ್ಲೂ ಅವರು ಮಹಾಕುಂಭಕ್ಕೆ ತೆರಳಿದ ಬಗ್ಗೆ ಯಾವುದೇ ಫೋಟೋ-ವಿಡಿಯೋ ಹಂಚಿಕೊಂಡಿಲ್ಲ.
ವೈರಲ್ ವಿಡಿಯೋ 2023 ರಲ್ಲಿ ಸನ್ನಿ ಲಿಯೋನ್ ತನ್ನ ಸಂಗೀತ ಆಲ್ಬಮ್ನ ಪ್ರಚಾರಕ್ಕಾಗಿ ವಾರಣಾಸಿಗೆ ಹೋಗಿದ್ದ ಸಂದರ್ಭದ್ದಾಗಿದೆ. ಈಗ ಕೆಲವರು ಅದೇ ವಿಡಿಯೋವನ್ನು ಮಹಾ ಕುಂಭ ಮೇಳದ ವಿಡಿಯೋ ಎಂದು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸನ್ನಿ ಲಿಯೋನ್ ತನ್ನ ಸಂಗೀತ ಆಲ್ಬಮ್ನ ಪ್ರಚಾರಕ್ಕಾಗಿ 2023 ರಲ್ಲಿ ಪ್ರಚಾರಕ್ಕಾಗಿ ವಾರಣಾಸಿಗೆ ಹೋಗಿದ್ದ ಸಂದರ್ಭದ್ದ ವಿಡಿಯೋವನ್ನು, ಮಹಾಕುಂಭ ಮೇಳದ್ದು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾ ಕುಂಭಮೇಳದಲ್ಲಿ ನಾಗ ಸಾಧುವೊಬ್ಬ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

