FACT CHECK | ರಂಜಾನ್ ಹಬ್ಬವನ್ನು ಗುರಿಯಾಗಿಸಿಕೊಂಡು ಹಿಂದೂ ಯುವಕ ಕಲ್ಲಂಗಡಿಗೆ ರಾಸಾಯನಿಕ ಚುಚ್ಚಿದ್ದು ನಿಜವೇ?

ಚಳಿಗಾಲ ಮುಗಿದು ಬೇಸಿಗೆ ಬಂದಿದೆ, ಸುಡು ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಈ ಬಿಸಿಲ ತಾಪವನ್ನು ನೀಗಿಸಲು ಕೆಲವರು ಫ್ರೂಟ್‌ ಜ್ಯೂಸ್‌ಗೆ ಮೊರೆ ಹೋದರೆ ಮತ್ತೆ ಕೆಲವರು ಹಣ್ಣುಗಳನ್ನು ತಿನ್ನುವ ಮೂಲಕ ದಾಹ ನೀಗಿಸಿಕೊಳ್ಳುತ್ತಾರೆ. ಅದರಲ್ಲೂ ಈ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚು ಬಳಕೆಯಾಗುತ್ತದೆ. ಬೇಸಿಗೆಯ ಶಾಖದಿಂದ ರಕ್ಷಿಸುವ ಹಣ್ಣುಗಳಲ್ಲಿ ಕಲ್ಲಂಗಡಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇದು ತಂಪಾಗಿಸುವುದರ ಜೊತೆಗೆ, ತಾಜಾ ಆಗಿ ತಿನ್ನಬಹುದಾದ ಹಣ್ಣಾಗಿದೆ. ಈಗ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರೂ ಕಲ್ಲಂಗಡಿಗಳು ಹೇರಳವಾಗಿ ಕಾಣುತ್ತೇವೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಕಲ್ಲಂಗಡಿ ಹಣ್ಣಿಗೆ ಸೂಜಿಯ ಮೂಲಕ ರಾಸಾಯನಿಕಗಳನ್ನು ಸೇರಿಸುತ್ತಿರುವ ಯುವಕನೊಬ್ಬನ ವಿಡಿಯೋ ಪ್ರಸಾರವಾಗುತ್ತಿದೆ.

ಘಟನೆಯ ಸಂಬಂಧ ಆಯುಷ್ ವರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಪೋಸ್ಟ್ ಹಂಚಿಕೊಳ್ಳುತ್ತಿರುವ ಕೆಲವರು, ಹಿಂದೂ ಯುವಕನೊಬ್ಬ ರಂಜಾನ್ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿಗೆ ರಾಸಾಯನಿಕ ಸೇರಿಸುತ್ತಿದ್ದು, ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ರಂಜಾನ್ ಸಮಯದಲ್ಲಿ ಹಿಂದೂ ವ್ಯಕ್ತಿಯೊಬ್ಬ ಕಲ್ಲಂಗಡಿಗಳನ್ನು ತಾಜವಾಗಿ ಇರುವಂತೆ ಕಾಣಲು ಕೃತಕ ರಾಸಾಯನಿಕಗಳೊಂದಿಗೆ ಕೆಂಪು ಬಣ್ಣವನ್ನು ತುಂಬುವ ಮೂಲಕ  ಕಲಬೆರಕೆ ಮಾಡುವುದನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 29 ಏಪ್ರಿಲ್ 2024 ರಂದು ‘ಸೋಶಿಯಲ್ ಮೆಸೇಜ್‘ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಲಭ್ಯವಾಗಿದೆ.

ಕಲ್ಲಂಗಡಿ ತಿನ್ನುವವರು ಇದು ನಿಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ನೋಡಲೇಬೇಕು ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. 0.28 ಸೆಕೆಂಡುಗಳ ಸಂದರ್ಭದಲ್ಲಿ ವಿಡಿಯೋದಲ್ಲಿ ಬರುವ ಡಿಸ್ಕ್ಲೈರ್ ಪ್ರಕಾರ ಇದನ್ನು ಜಾಗೃತಿಗಾಗಿ ಮತ್ತು ಕಾಲ್ಪನಿಕ ದೃಶ್ಯ ಎಂದು ಹೇಳಿಕೊಂಡಿರುವುದನ್ನು ನೋಡಬಹುದು.

ಏಪ್ರಿಲ್ 29, 2024 ರಂದು ಸೋಶಿಯಲ್ ಮೆಸೇಜ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೊವಾಗಿದ್ದು, ಇದರಲ್ಲಿ ವೀಡಿಯೊ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ, ಎಲ್ಲಾ ಘಟನೆಗಳನ್ನು ಜಾಗೃತಿಗಾಗಿ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಕಲ್ಲಂಗಡಿ ಹಣ್ಣಿಗೆ ರಾಸಾಯನಿಕಗಳನ್ನು ಸೇರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ದಿ ಸೋಷಿಯಲ್ ಜಂಕ್ಷನ್’ ಎನ್ನುವ ಯು ಟ್ಯೂಬ್ ವಾಹಿನಿಯು ಈ ವಿಡಿಯೊ ಅನ್ನು ಸೃಷ್ಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತಷ್ಟು ಹುಡುಕಿದಾಗ, ಯು ಟ್ಯೂಬ್ ವಾಹಿನಿಯಲ್ಲಿ ಈ ವಿಡಿಯೊ 2024ರ ಏ.29ರಂದು ಅಪ್‌ಲೋಡ್ ಆಗಿರುವುದು ಕಂಡುಬಂತು. ‘ಈ ವಿಡಿಯೊ ಅನ್ನು ಜನಜಾಗೃತಿಯ ಸಲುವಾಗಿ ರೂಪಿಸಲಾಗಿದ್ದು, ಇದರಲ್ಲಿ ಬರುವ ಘಟನೆಗಳು ಕಾಲ್ಪನಿಕ’ ಎಂದು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಕಾರ ಆಹಾರ ಸಾಮಗ್ರಿಗಳ ಕಲಬೆರಕೆಯನ್ನು ಪತ್ತೆಹಚ್ಚಲು ವಿವರವಾದ ಮಾರ್ಗಸೂಚಿಗಳನ್ನು ಪೋಸ್ಟ್ ಮಾಡಿದೆ. ಕಲ್ಲಂಗಡಿ ಎರಿಥ್ರೋಸಿನ್‌ನೊಂದಿಗೆ ಕಲಬೆರಕೆಯಾಗಿದೆಯೇ ಎಂದು ಪತ್ತೆಹಚ್ಚಲು, FSSAI ಕಲ್ಲಂಗಡಿಯ ಒಳಗಿನ ರಸವತ್ತಾದ ಭಾಗದಲ್ಲಿ ಹತ್ತಿ ಉಂಡೆಯನ್ನು ಉಜ್ಜಲು ಸೂಚಿಸುತ್ತದೆ. ಹತ್ತಿ ಉಂಡೆ ಕೆಂಪು ಬಣ್ಣಕ್ಕೆ ತಿರುಗಿದರೆ, ಕಲ್ಲಂಗಡಿ ಕಲಬೆರಕೆಯಾಗಿದೆ. ಯಾವುದೇ ಬಣ್ಣ ಬದಲಾವಣೆ ಇಲ್ಲದಿದ್ದರೆ, ಕಲ್ಲಂಗಡಿ ಕಲಬೆರಕೆಯಿಲ್ಲ ಮತ್ತು ಸೇವಿಸಲು ಸುರಕ್ಷಿತವಾಗಿದೆ ಎಂದು ಹೇಳುತ್ತದೆ.

ವಾಸ್ತವವಾಗಿ, ಮೇ 2024 ರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಕಲ್ಲಂಗಡಿಗಳನ್ನು ಕಲಬೆರಕೆ ಮಾಡುತ್ತಿರುವುದು ಕಂಡುಬಂದಿದೆ ಎಂದು ತಪ್ಪಾಗಿ ಹೇಳಿಕೊಂಡು ಅದೇ ವೀಡಿಯೊ ವೈರಲ್ ಆದಾಗ ಅದನ್ನು ಹಿಂದೆಯೇ ನಿರಾಕರಿಸಲಾಗಿತ್ತು. ಜಾಗೃತಿ ಮತ್ತು ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾದ “ಸೋಷಿಯಲ್ ಮೆಸೇಜ್” ವೀಡಿಯೊವನ್ನು ಒಳಗೊಂಡ ಇದೇ ರೀತಿಯ ಪ್ರತಿಪಾದನೆಯನ್ನು ನಿರಾಕರಿಸಲಾಗಿತ್ತು. ಅದು ನಿಜವಾದ ಘಟನೆಗಳೆಂದು ವೈರಲ್ ಆಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಏಪ್ರಿಲ್ 29, 2024 ರಂದು ಸೋಷಿಯಲ್ ಮೆಸೇಜ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಜನಜಾಗೃತಿ ಮೂಡಿಸಲು ರಚಿಸಲಾದ ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | EVM ನಿಂದಾಗಿ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಹೇಳಿದ್ರಾ ಡೊನಾಲ್ಡ್ ಟ್ರಂಪ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights