FACT CHECK | ಪ್ರಾಯೋಗಿಕ ಪರೀಕ್ಷೆಯಲ್ಲಿ ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆ ಕಲ್ಲನ್ನು ಬೀಳಿಸಲಾಗುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಬಂಡೆ ಕಲ್ಲೊಂದನ್ನು ರೋಲ್ಸ್ ರಾಯ್ಸ್ ಕಾರಿನ ಮೇಲೆ ಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬೃಹತ್ ಬಂಡೆ ಕಾರಿನ ಮೇಲೆ ಬಿದ್ದರೂ ಕಾರಿಗೆ ಸ್ವಲ್ಪವೂ ಹಾನಿಯಾಗುವುದಿಲ್ಲ. ಬದಲಿಗೆ ಬಂಡೆ ಕಲ್ಲು ಓಳಾಗುವುದನ್ನು ಕಾಣಬಹುದು.

“ಪ್ರಾಯೋಗಿಕ ಪರೀಕ್ಷೆಯಲ್ಲಿ ದೊಡ್ಡ ಬಂಡೆಗಿಂತ ಗಟ್ಟಿ ಈ ರೋಲ್ಸ್ ರಾಯ್ ಕಾರು” ಎಂಬ ಹೇಳಿಕೆಯೊಂದಿಗೆ ನ್ಯೂಸ್‌ 84 ಕನ್ನಡ ಎಂಬ ಸುದ್ದಿ ವಾಹಿನಯ ಇನ್ಸ್ಟಾಗ್ರಾಮ್‌ನಲ್ಲಿ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by News_84_kannada (@news_84_kannada)

ಇದು ರೋಲ್ಸ್‌ ರಾಯ್ಸ್‌  ಕಾರಿನ ಶಕ್ತಿ ಎಂದು ಬರೆದುಕೊಂಡು ಹಲವರು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ರೋಲ್ಸ್‌ ರಾಯ್ಸ್‌ ಕಾರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಕೂಡ ಶೇರ್‌ ಮಾಡುತ್ತಿದ್ದಾರೆ. ರೋಲ್ಸ್‌ ರಾಯ್ಸ್‌ ಕಾರು ಕೇವಲ ಶ್ರೀಮಂತರಿಂದ ಮಾತ್ರ ಕೊಂಡುಕೊಳ್ಳಲು ಸಾಧ್ಯ, ಮಧ್ಯಮ ವರ್ಗದವರು ಕೊಂಡುಕೊಳ್ಳುವ ಕಾರುಗಳಿಗೆ ಈ ಸೌಲಭ್ಯ ಸಿಗುವುದೇ ಇಲ್ಲ ಎಂದು ಹತಾಶರಾಗಿ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ‘ರಿಯಲಿಸ್ಟಿಕ್‌ಕೈವಿಡ್’ ಎಂಬ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ಪತ್ತೆಯಾಗಿದೆ. ಇದನ್ನು ಗ್ರಾಫಿಕ್ ಡಿಸೈನರ್ ಎನ್ನಾಚಾಟ್ ಅಯೌಬ್ ನಡೆಸುತ್ತಿದ್ದು, ಅವರು ವಾಸ್ತವಿಕ AI-ರಚಿತ ವಿಷಯವನ್ನು ರಚಿಸುವಲ್ಲಿ ಪರಿಣತಿ ಪಡೆದಿದ್ದಾರೆ ಎಂಬುದು ಕೂಡ ತಿಳಿದು ಬಂದಿದೆ.

28 ಫೆಬ್ರವರಿ 2025 ರಂದು ಪೋಸ್ಟ್ ಮಾಡಲಾದ ಮೂಲ ವೀಡಿಯೊವು ವೈರಲ್‌ ವಿಡಿಯೋವನ್ನು ಡಿಜಿಟಲ್‌ ಆಗಿ ರಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಈ ಬೆಗೆಗಿನ ಇನ್ನಷ್ಟು ನಿಖರತೆಗಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಮತ್ತು ವಿಡಿಯೋವನ್ನು ಬಳಸಿಕೊಂಡು AI ಫೋಟೋಗಳನ್ನು ಪತ್ತೆ ಹಚ್ಚುವ Hive AI Moderation ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆವು. ಈ ವೇಳೆ ನಮಗೆ ವೈರಲ್‌ ವಿಡಿಯೋ ಶೇ.99 ಪ್ರತಿಶತಃ AI ನಿಂದ ನಿರ್ಮಿಸಲಾಗಿದೆ ಎಂಬುದು ತಿಳಿದು ಬಂದಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ AI ನಿಂದ ನಿರ್ಮಿಸಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಂಡೆಯೊಂದನ್ನು ರೋಲ್ಸ್‌ ರಾಯ್ಸ್‌ ಕಾರಿನ ಮೇಲೆ ಹಾಕಿದರೂ ಕಾರಿಗೆ ಯಾವುದೇ ರೀತಿಯಾದ ಹಾನಿಯಾಗುವುದಿಲ್ಲ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ AI ನಿಂದ ರಚಿಸಿರುವುದು ಸ್ಪಷ್ಟವಾಗಿದೆ. ಇದು ನೈಜ ವಿಡಿಯೋ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಂಜಾನ್ ಹಬ್ಬವನ್ನು ಗುರಿಯಾಗಿಸಿಕೊಂಡು ಹಿಂದೂ ಯುವಕ ಕಲ್ಲಂಗಡಿಗೆ ರಾಸಾಯನಿಕ ಚುಚ್ಚಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights