FACT CHECK | ಜಿಯೋ ಕಂಪನಿಯಿಂದ ಹೋಳಿ ಹಬ್ಬದ ಪ್ರಯುಕ್ತ 700 ರೂ ಕೊಡುಗೆ ! ವಾಸ್ತವವೇನು?
ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ಜಿಯೋ ಹೋಳಿ ಹಬ್ಬಕ್ಕೆ 700 ರೂ. ಬಹುಮಾನ ನೀಡುತ್ತಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸಂಬಂಧ ಪೋಸ್ಟರ್ಗಳು ಫೇಸ್ಬುಕ್, ಎಕ್ಸ್ ನಲ್ಲಿ ಪ್ರಸರವಾಗುತ್ತಿದೆ.
ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಿದ್ದಾರೆ. ಬಣ್ಣಗಳ ಹಬ್ಬದ ರೋಮಾಂಚಕ ಆಚರಣೆಗಳು ಕೇವಲ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಕಂಪನಿಗಳು ರಿಯಾಯಿತಿಗಳು ಮತ್ತು ಬಹುಮಾನಗಳನ್ನು ನೀಡುವ ಮೂಲಕ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತವೆ. ಅಂತಹ ಒಂದು ಪ್ರಚಾರದ ಕೊಡುಗೆಯ ಜಾಹೀರಾತೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಜಿಯೋ 700 ರೂ. ಬಹುಮಾನ ನೀಡುತ್ತಿದೆ ಎಂದು ಹೇಳುವ ಸಂದೇಶ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ‘Holi Inaam’ ಎಂಬ ಫೇಸ್ಬುಕ್ ಪೇಜ್ನಲ್ಲಿ ಮುಕೇಶ್ ಅಂಬಾನಿ ಫೋಟೋದ ಜೊತೆ ಈ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ. ‘ಹೋಳಿ ಹಬ್ಬಕ್ಕೆ ಎಲ್ಲಾ ಜಿಯೋ ಗ್ರಾಹಕರಿಗೆ 700 ರೂ. ಬಹುಮಾನ’ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ಜೊತೆ ಒಂದು ಲಿಂಕ್ ಕೂಡ ಇದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಅನಧಿಕೃತ ವೆಬ್ಸೈಟ್ವೊಂದು ತೆರೆದುಕೊಳ್ಳುತ್ತದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಜಿಯೋ ನೀಡುತ್ತಿದೆ ಎನ್ನಲಾದ 700 ರೂ. ಬಹುಮಾನದ ಸುದ್ದಿಯನ್ನು ಪರಿಶೀಲಿಸಲು, ಮೊದಲಿಗೆ ಜಿಯೋದ ಅಧಿಕೃತ ವೆಬ್ಸೈಟ್ನಲ್ಲಿ ಈ ಬಗ್ಗೆ ಯಾವುದಾದರೂ ಮಾಹಿತಿ ಇದೆಯೇ ಎಂದು ಸರ್ಚ್ ಮಾಡಿದಾಗ, ಈ ಬಗ್ಗೆ ಯಾಆವುದೇ ಮಾಹಿತಿ ಲಭ್ಯವಾಗಿಲ್ಲ.
ಮತ್ತಷ್ಟು ಮಾಹಿತಿಗಾಗಿ ಜಿಯೋ ಎಕ್ಸ್ ಹ್ಯಾಂಡಲ್ಅನ್ನು ಪರಿಶೀಲಿಸಿದಾಗ, 700 ರೂ. ಬಹುಮಾನದ ಯಾವ ಮಾಹಿತಿಯೂ ಲಭ್ಯವಾಗಲ್ಲ. ಇನ್ನು ವೈರಲ್ ಆಗಿರುವ ಪೋಸ್ಟ್ನ ಲಿಂಕ್ ಅನ್ನು ಪರಿಶೀಲಿಸಿದಾಗ ಇದು ‘m.day-tday.com’ ಎಂಬ ವೆಬ್ಸೈಟ್ಗೆ ಕರೆದೊಯ್ಯುತ್ತದೆ. ಇದು ಜಿಯೋದ ಅಧಿಕೃತ ವೆಬ್ಸೈಟ್ ಅಲ್ಲ. ಜಿಯೋದ ಅಧಿಕೃತ ವೆಬ್ಸೈಟ್ ವಿಳಾಸ https://www.jio.com/ ಆಗಿದೆ. ಹಾಗಾಗಿ ಹೋಳಿ ಹಬ್ಬಕ್ಕೆ ಜಿಯೋ 700 ರೂ. ಬಹುಮಾನ ನೀಡುತ್ತಿದೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟವಾಗಿದೆ.
![]()
ಲಿಂಕ್ನಲ್ಲಿರುವ ಜಿಯೋದ ನಕಲಿ ವೆಬ್ಸೈಟ್
ಕೆಲವು ದಿನಗಳ ಹಿಂದೆ ಫೋನ್ಪೇ ಹೆಸರಿನಲ್ಲೂ ಇದೇ ರೀತಿಯ ಸುಳ್ಳು ಸುದ್ದಿಯೊಂದು ಪ್ರಸಾರವಾಗಿತ್ತು. ಹೋಳಿ ಹಬ್ಬದಂದು ಫೋನ್ ಪೇನಲ್ಲಿ 3,890 ರೂ. ಕ್ಯಾಶ್ಬ್ಯಾಕ್ ಸಿಗುತ್ತದೆ ಎಂದು ಇದರಲ್ಲಿ ಹೇಳಲಾಗಿತ್ತು. ಈಗ ಜಿಯೋ ಹೆಸರಲ್ಲೂ ಇದೇ ರೀತಿಯ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಜಿಯೋ ಕಂಪನಿಯು ಗ್ರಾಹಕರಿಗೆ 700 ರೂ.ಗಳ ಕೊಡುಗೆ ನೀಡುತ್ತಿದೆ ಎನ್ನುವ ಸುದ್ದಿ ಸುಳ್ಳು. ಹೋಳಿ ಹಬ್ಬಕ್ಕೆ ಜಿಯೋ ಕಂಪನಿ ಯಾವುದೇ ಬಹುಮಾನ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACTCHECK | 2025 ICC ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾದ್ರಾ ಪ್ರಧಾನಿ ಮೋದಿ

