FACT CHECK | ರೂ.200 ಮುಖಬೆಲೆಯ ನೋಟಿನ ಮೇಲೆ ಶಿವಾಜಿ ಚಿತ್ರ ಹಾಕಲಾಗಿದೆಯೇ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಟಿನ ಚಿತ್ರವೊಂದು ವೈರಲ್ ಆಗಿದೆ. 200 ರೂ. ಮುಖಬೆಲೆಯ ಈ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತ್ರದ ಜಾಗದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರ ಇದೆ. ಇದರ ಜೊತೆಗೆ 200 ರೂ. ನೋಟಿನ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಹಾಕಲಾಗುತ್ತದೆ ಎಂದು ಹೇಳಲಾಗಿದೆ.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ‘fan_bhagat_singh_da_1931‘ ಹೆಸರಿನ ಪೇಜ್‌ನಲ್ಲಿ 200 ರೂ. ಮುಖಬೆಲೆಯ ನೋಟಿನ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದ ಜೊತೆ, ‘ಭಾರತ ಸರ್ಕಾರದ ದೊಡ್ಡ ನಿರ್ಧಾರ. 200 ರೂಪಾಯಿ ನೋಟಿನಲ್ಲಿ ಇನ್ನು ಮುಂದೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಇರಲಿದೆ. ಈ ನಿರ್ಧಾರ ನಿಮಗೆ ಹೇಗೆ ಅನಿಸಿತು?’ ಎಂದು ಕೇಳಲಾಗಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ನಿಜವಾಗಿಯೂ 200 ರೂಪಾಯಿ ನೋಟಿನಲ್ಲಿ ಗಾಂಧಿ ಚಿತ್ರದ ಬದಲಿಗೆ ಛತ್ರಪತಿ ಶಿವಾಜಿ ಫೋಟೊವನ್ನು ಹಾಕಲಾಗಿದೆಯೇ? ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಂಡಿದೆಯೇ ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಮೂಲ ಸರ್ಚ್ ಮಾಡಿದಾಗ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
Ye perfect hai ! pic.twitter.com/GH6EMkYeSN
— Nitesh Rane (@NiteshNRane) October 26, 2022
ಅಲ್ಲದೆ ಈ ಹಿಂದೆಯೂ ಇಂತಹದ್ದೆ ಫೋಟೊವನ್ನು ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೆಯಾಗಿರುವುದು ಕಂಡುಬಂದಿದೆ.
This is my recommendation, What’s yours ? pic.twitter.com/9wvXjX0s1U
— Hinduism_and_Science (@Hinduism_sci) October 13, 2023
ಇನ್ನು ಈ ಬಗ್ಗೆ ಭಾರತ ಸರ್ಕಾರವೇನಾದರೂ ಆದೇಶ ಹೊರಡಿಸಿದೆಯೇ ಚೆಕ್ ಮಾಡಲು ಗೂಗಲ್‌ನಲ್ಲಿ ಕೆಲವು ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ, ಅಲ್ಲಿ ಆರ್‌ಬಿಐನ ಕೆಲವು ಅಧಿಸೂಚನೆಗಳು ಲಭ್ಯವಾಗಿದ್ದು, ಅಲ್ಲಿ ನೋಟಿನ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋವನ್ನು ಹಾಕುವ ಬಗೆಗಿನ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಇದೊಂದು ಸುಳ್ಳು ಸುದ್ದಿ ಎಣಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಇರುವ 200 ರೂ. ಮುಖಬೆಲೆಯ ನೋಟು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ನೋಟು ನಕಲಿಯಾಗಿದೆ. ಈ ಬಗ್ಗೆ ಭಾರತ ಸರ್ಕಾರವಾಗಲೀ, RBI ಆಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 200 ರೂ. ನೋಟಿನ ಮೇಲೆ ಮಹತ್ಮಾ ಗಾಂಧಿ ಚಿತ್ರವೇ ಇದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರೂ.350 ಮುಖಬೆಲೆಯ ನೋಟುಗಳನ್ನು RBI ಪರಿಚಯಿಸಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ

