FACT CHECK | ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ವಕೀಲರು ಪ್ರತಿಭಟಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಅನುಮೋದಿಸಿದ್ದಾರೆ. ಈ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ದೀರ್ಘ ಚರ್ಚೆ ನಡೆಯಿತು. ಏತನ್ಮಧ್ಯೆ, ವಕೀಲರ ಗುಂಪೊಂದು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ವಕೀಲರು ಸಹ ಪ್ರತಿಭಟನೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
वक्फ बोर्ड बिल के खिलाफ़ वकीलों ने सड़क जाम कर भारी तादाद में प्रोटेस्ट कर रहे हैं!!
वकीलों का नारा,सांसद के दम पर तानाशाही नहीं चलेगी अपना काला कानून वापस लो☝️ pic.twitter.com/lj4b0y70L4
— NATION MUSLIM (@AmjadAsR) April 5, 2025
ನೇಷನ್ ಮುಸ್ಲಿಂ ಎಂಬ ಎಕ್ಸ್ (ಟ್ವಿಟರ್) ನಲ್ಲಿ ಅಕೌಂಟ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ‘ವಕ್ಫ್ ಮಂಡಳಿ ಮಸೂದೆಯ ವಿರುದ್ಧ ವಕೀಲರು ರಸ್ತೆ ತಡೆದು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಿದ್ದಾರೆ’ . ವಕೀಲರ ಘೋಷಣೆ: ಸರ್ವಾಧಿಕಾರವು ಸಂಸತ್ತಿನ ಬಲದ ಮೇಲೆ ನಡೆಯುವುದಿಲ್ಲ, ನಿಮ್ಮ ಕರಾಳ ಕಾನೂನನ್ನು ಹಿಂದಕ್ಕೆ ಪಡೆಯಿರಿ. ಎಂದು ಬರೆದಿದ್ದಾರೆ.
वक्फ बोर्ड बिल के खिलाफ वकीलों ने रोड जाम कर दिया है भारी तादाद में प्रोटेस्ट कर रहें।
2014 से लेकर मोदी जी ने देश के किसी भी लोग चैन से नहीं रहने दिया है।
किसानों को ऐसे रोड पर ल दिया पहलवानों को भी रोड पर ला दिया है।
भला करे देश का।#waqfbillprotest pic.twitter.com/QJsE1RPlgt
— vinesh phogat (@phogat_ven1) April 5, 2025
‘ವಕ್ಫ್ ಮಂಡಳಿ ಮಸೂದೆಯ ವಿರುದ್ಧ ವಕೀಲರು ರಸ್ತೆ ತಡೆದು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಿದ್ದಾರೆ’ ಎಂದು ವಿನೇಶ್ ಫೋಗಟ್ ಎಂಬ ಹೆಸರಿನ ಎಕ್ಸ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2014 ರಿಂದ ಮೋದಿ ಜಿ ದೇಶದ ಜನರು ಶಾಂತಿಯಿಂದ ಬದುಕಲು ಬಿಡಲಿಲ್ಲ. ರೈತರನ್ನು ರಸ್ತೆಗೆ ಇಳಿಸಲಾಗಿದೆ, ಕುಸ್ತಿಪಟುಗಳನ್ನು ಸಹ ರಸ್ತೆಗೆ ಇಳಿಸಲಾಗಿದೆ. ದೇಶಕ್ಕೆ ಒಳ್ಳೆಯದನ್ನು ಮಾಡಿ. ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವಕ್ಫ್ ಮಸೂದೆ ತಿದ್ದುಪಡಿ 2025 ಸಂಸತ್ನಲ್ಲಿ ಅಂಗೀಕಾರ ಆಗಿರುವುದನ್ನು ವಿರೋದಿಸಿ ವಕೀಲರು ಸಹ ಬೀದಿಗಿಳಿದು ಮಸೂದೆಯನ್ನು ವಿರೋದಿಸಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಲು ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ, ಫೆಬ್ರವರಿ 22, 2025 ರಂದು Advocatus Ordinarius ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಅದೇ ವೀಡಿಯೊವನ್ನು ಲಭ್ಯವಾಗಿದೆ. ವೀಡಿಯೊದ ವಿವರಣೆಯಲ್ಲಿ, ‘ಅಡ್ವೊಕೇಟ್ ತಿದ್ದುಪಡಿ ಕಾಯ್ದೆ 2025 ರ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿದೆ’ ಎಂದು ಬರೆಯಲಾಗಿದೆ.
![]()
ಫೆಬ್ರವರಿ 22, 2025 ರಂದು ಅಪ್ಲೋಡ್ ಮಾಡಲಾದ ಈ ವೀಡಿಯೊ ವಕೀಲರ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನೆಯಾಗಿದೆ. ನಂತರ ಮತ್ತಷ್ಟು ಮಾಹಿತಿಗಾಗಿ ಸಂಬಂಧಿತ ಕೀವರ್ಡ್ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಕೆಲವು ಸುದ್ದಿಗಳ ಲಿಂಕ್ಗಳು ಲಭ್ಯವಾಗಿದೆ. ಈ ವರದಿಗಳ ತನಿಖೆಯಿಂದ, ವಕ್ಫ್ ಮಸೂದೆ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ವೈರಲ್ ಆಗುತ್ತಿರುವ ವಿಡಿಯೋ ವಾಸ್ತವವಾಗಿ ವಕೀಲರ ತಿದ್ದುಪಡಿ ಕಾಯ್ದೆಯ ವಿರುದ್ಧದ ವಕೀಲರ ಪ್ರತಿಭಟನೆಯದ್ದಾಗಿದೆ ಎಂದು ತಿಳಿದುಬಂದಿದೆ.
17 ಫೆಬ್ರವರಿ 2025 ರ ‘ಲಾ ಚಕ್ರ’ ಸುದ್ದಿಯ ಪ್ರಕಾರ, ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ವಕೀಲರ ತಿದ್ದುಪಡಿ ಮಸೂದೆ 2025 ಅನ್ನು ದೆಹಲಿಯ ವಕೀಲರು ವಿರೋಧಿಸಿದ್ದಾರೆ. ದೆಹಲಿಯ ಎಲ್ಲಾ ವಕೀಲರ ಸಂಘಗಳ ಸಮನ್ವಯ ಸಮಿತಿಯು ಈ ಮಸೂದೆಯ ವಿರುದ್ಧ ಫೆಬ್ರವರಿ 17, 2025 ರಂದು ಮುಷ್ಕರಕ್ಕೆ ಕರೆ ನೀಡಿದೆ. ಈ ಮಸೂದೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ ಎಂದು ವಕೀಲರು ಪ್ರತಿಭಟಿಸಿದ್ದಾದೆ. ವೈರಲ್ ವಿಡಿಯೋಗೆ ಸಂಬಂಧಿಸಿದ ಅದೇ ಮಾಹಿತಿಯನ್ನು ಫೆಬ್ರವರಿ 17, 2025 ರ ANI ಸುದ್ದಿಯಲ್ಲಿ ಲಿಂಕ್ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಕೀಲರ ತಿದ್ದುಪಡಿ ಮಸೂದೆ 2025 ರ ವಿರುದ್ಧದ ವಕೀಲರು ನಡೆಸಿದ ಪ್ರತಿಭಟನೆಯ ಒಂದು ತಿಂಗಳ ಹಳೆಯ ವಿಡಿಯೋವನ್ನು ವಕ್ಫ್ ಮಸೂದೆಯ ವಿರುದ್ಧದ ನಡೆದ ಪ್ರತಿಟನೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಜಕೀಯ ನಿವೃತ್ತಿ ಘೋಷಿಸಿದ್ರಾ ಪ್ರಧಾನಿ ಮೋದಿ ?

