FACT CHECK | ಬಾಂಗ್ಲಾ ಮುಸ್ಲಿಮರು ದೋಣಿ ಮೂಲಕ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತಿದ್ದಾರೆ ಎಂಬುದು ನಿಜವೇ?

ಹೊಸ ವಕ್ಫ್ ಕಾನೂನನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದ್ದು, ಅನೇಕ ಅಂಗಡಿಗಳು ಸಹ ನಾಶವಾಗಿವೆ. ಈ ಘಟನೆಯ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೆಲವು ಮುಸ್ಲಿಮರು ದೋಣಿಯಲ್ಲಿ ಬರುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ಮುಸ್ಲಿಂ ಸಮುದಾಯದ ಜನರು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ತಲುಪುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಏಪ್ರಿಲ್ 19, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು  ಈ ವಿಡಿಯೋವನ್ನು ಹಂಚಿಕೊಂಡು, ‘‘ಮುಲ್ಲಾಗಳು ಬಾಂಗ್ಲಾದೇಶದಿಂದ ಬಂಗಾಳವನ್ನು ತಲುಪುತ್ತಿದ್ದಾರೆ. ಮೋದಿ ಸರ್ಕಾರ ಈಗ ರಾಷ್ಟ್ರಪತಿ ಆಳ್ವಿಕೆ ಹೇರದಿದ್ದರೆ ಮುಂದಿನ ಭವಿಷ್ಯ ತುಂಬಾ ಕಠಿಣ…’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮುಸ್ಲಿಂ ಸಮುದಾಯದ ಜನರು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ತಲುಪುತ್ತಿದ್ದಾರೆ ಎಂದು ಪ್ತತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 30 ಜನರಿ 2025ರಂದು ಎಬಿಪಿ ನ್ಯೂಸ್‌ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ಅದರಲ್ಲಿ ಈ ಇಜ್ತೆಮಾ ಬಾಂಗ್ಲಾದೇಶದ ತುರಗ್ ನದಿಯ ದಡದಲ್ಲಿ ಜನವರಿ 31, 2025 ರಂದು ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಮಾರ್ಚ್ 26, 2024 ರಂದು ಇದೇ ವೈರಲ್ ವೀಡಿಯೊ ಮತ್ತೊಂದು ಆ್ಯಂಗಲ್​ನಿಂದ ಚಿತ್ರೀಕರಿಸಿರುವುದು ಸಿಕ್ಕಿದೆ. ಇದನ್ನು ‘ಚಾರ್ ಮೊನೈ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವರದಿಗಳ ಪ್ರಕಾರ, ಚಾರ್ ಮೊನೈ ಬಾಂಗ್ಲಾದೇಶದ ಬಾರಿಸಲ್ ಜಿಲ್ಲೆಯ ಒಂದು ಪ್ರದೇಶವಾಗಿದ್ದು, ಅಲ್ಲಿ ಪ್ರತಿ ವರ್ಷ ಚಾರ್ ಮೊನೈ ಇಜ್ತೆಮಾ ನಡೆಯುತ್ತದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ನದಿಯಲ್ಲಿ ದೋಣಿಯ ಮೂಲಕ ಬರುತ್ತಾರೆ. 2024 ರಲ್ಲಿ, ಈ ಇಜ್ತೆಮಾ ಫೆಬ್ರವರಿ 26 ರಿಂದ 28 ರವರೆಗೆ ನಡೆಯಿತು.

ಬಾಂಗ್ಲಾ ಕೀವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಫೆಬ್ರವರಿ 28, 2024 ರಂದು ಹಂಚಿಕೊಂಡ ಕೆಲವು ಪೋಸ್ಟ್‌ಗಳಲ್ಲಿ ವೈರಲ್ ವೀಡಿಯೊಕ್ಕೆ ಹೋಲುವ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಎಲ್ಲಾ ಪೋಸ್ಟ್‌ಗಳಲ್ಲಿ, ಈ ದೋಣಿಗಳು ಬಾಂಗ್ಲಾದೇಶದ ಚಾರ್ ಮೊನೈನದ್ದು ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ದೋಣಿಯ ಮೇಲೆ ಬರುತ್ತಿರುವ ವೈರಲ್ ವೀಡಿಯೊ ಹಳೆಯದು. ಪಶ್ಚಿಮ ಬಂಗಾಳಕ್ಕು ಇದಕ್ಕು ಯಾವುದೇ ಸಂಬಂಧವಿಲ್ಲ. ಬಾಂಗ್ಲಾದೇಶದ ಇಜ್ತೆಮಾಗೆ ಹೋಗುವ ಹಳೆಯ ವಿಡಿಯೋವನ್ನು ಸುಳ್ಳು ಪ್ರಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ಧರ್ಮ ನಮ್ಮ ಧರ್ಮವಲ್ಲ ಎಂದು ಹೇಳಿದ್ರಾ ರಾಹುಲ್ ಗಾಂಧಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights