FACT CHECK | ಋಷಿಕೇಶದಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಬೀಳುವ ವಿಡಿಯೋ ಎಂದು AI ವಿಡಿಯೋ ಹಂಚಿಕೆ

ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಇದ್ದಕ್ಕಿದ್ದಂತೆ ಮುರಿದು ಬೀಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದರೊಂದಿಗೆ, ಅದರ ಮೇಲೆ ನಿಂತಿದ್ದ ಜನರು ಕೂಡ ಕೆಳಗೆ ಬೀಳುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಅಪಘಾತ ಋಷಿಕೇಶದಲ್ಲಿ ಸಂಭವಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. Instagram ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಋಷಿಕೇಶದಿಂದ ಭಯಾನಕ ವಿಡಿಯೋವೊಂದು ಬಂದಿದೆ, ಅದರಲ್ಲಿ ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಮುರಿದು ಬಿದ್ದಿದೆ” ಎಂದು ಬರೆದುಕೊಂಡಿದ್ದಾರೆ.

”ಈ ಘಟನೆಯು ಭದ್ರತಾ ವ್ಯವಸ್ಥೆಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ” ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕ್ವೇಕ್ ಸ್ಕೈಫಾಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವಿಡಿಯೋ ಲಭ್ಯವಾಗಿದೆ. ಮೇ 3 ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯು ಇದನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ಹೇಳಿದೆ. ಮತ್ತು ಯಾರಿಗೂ ಹಾನಿಯಾಗಿಲ್ಲ ಎಂದು ಬರೆದುಕೊಂಡಿದೆ.

ಈ ಚಾನೆಲ್ ಅನ್ನು ಸ್ಕ್ಯಾನ್ ಮಾಡಿದಾಗ ಇದು ಸ್ವೀಡನ್‌ನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಅಪಘಾತದ ಬಗ್ಗೆ ಮಾಡಲಾದ ಹಲವಾರು AI- ರಚಿತ ವಿಡಿಯೋಗಳನ್ನು ನಾವು ಚಾನೆಲ್‌ನಲ್ಲಿ ಕಂಡುಕೊಂಡಿದ್ದೇವೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ದಿ ಕ್ಲಿಫ್ ಬರೆದಿರುವುದನ್ನು ನಾವು ನೋಡಿದ್ದೇವೆ. ಇದರ ಆಧಾರದ ಮೇಲೆ, ಗೂಗಲ್ ಓಪನ್ ಸರ್ಚ್ ಮಾಡಲಾಯಿತು. ನೇಪಾಳದಲ್ಲಿ ದಿ ಕ್ಲಿಪ್ ಎಂಬ ರೆಸಾರ್ಟ್ ಇದೆ ಎಂದು ನಮಗೆ ತಿಳಿದು ಬಂತು, ಅದು ಬಂಗೀ ಜಂಪಿಂಗ್ ಮತ್ತು ಸ್ವಿಂಗಿಂಗ್‌ಗೆ ಬಹಳ ಪ್ರಸಿದ್ಧವಾಗಿದೆ.

ನಾವು ಮತ್ತಷ್ಟು ತನಿಖೆ ನಡೆಸಿ ದಿ ಕ್ಲಿಫ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಪರಿಶೀಲಿಸಿದ್ದೇವೆ. ವೈರಲ್ ವಿಡಿಯೋದ ವೇದಿಕೆಯಲ್ಲಿ SWING ಎಂದು ಬರೆದಿರುವ ಅನೇಕ ವಿಡಿಯೋಗಳನ್ನು ನಾವು ಇಲ್ಲಿ ಕಂಡುಕೊಂಡಿದ್ದೇವೆ. ಖಾಸಗಿ ವೆಬ್​ಸೈಟ್ ಒಂದು ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದ್ದು, ಇವರು ನೇಪಾಳದ ದಿ ಕ್ಲಿಫ್ ರೆಸಾರ್ಟ್ ಅನ್ನು ಸಹ ಸಂಪರ್ಕಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣುವ ಸ್ಥಳ ಅವರಿಗೆ ಸೇರಿದ್ದು ಎಂದು ಅವರು ಹೇಳಿದರು. ಆದರೆ, ಆ ವಿಡಿಯೋವನ್ನು AI ರಚಿಸಿಸಲಾಗಿದೆ ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

 

View this post on Instagram

 

A post shared by The Cliff Resort (@thecliffnepal)

ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಡೀಪ್‌ಫೇಕ್ ಅನಾಲಿಸಿಸ್ ಯೂನಿಟ್ (ಡಿಎಯು) ತಜ್ಞರ ತಂಡವು ನೀಡಿದ ಹೇಳಿಕೆ ಕೂಡ ನಮಗೆ ಸಿಕ್ಕಿದೆ. ವಿಡಿಯೋದಲ್ಲಿನ ಮಾನವ ಆಕೃತಿಗಳ ಮೇಲೆ ಕೇಂದ್ರೀಕರಿಸುವ ಕೀಫ್ರೇಮ್‌ಗಳನ್ನು WasitAI ಉಪಕರಣದೊಂದಿಗೆ ಪರಿಶೀಲಿಸಿದ್ದು, ಈ ದೃಶ್ಯಗಳನ್ನು AI ರಚಿಸಿದೆ ಅಥವಾ ಕುಶಲತೆಯಿಂದ ಬಳಸಿದೆ ಎಂದು ಫಲಿತಾಂಶಗಳು ಸೂಚಿಸುತ್ತವೆ. ಡಿಎಯು ತಂಡವು ವೈರಲ್ ವೀಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ವೈರಲ್ ವಿಡಿಯೋವನ್ನು AI ರಚಿಸಲಾಗಿದೆ ಎಂಬುದು ಅವರು ತೀರ್ಮಾನಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ಋಷಿಕೇಶದಲ್ಲಿ ಅಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಬಂಗೀ ಜಂಪಿಂಗ್ ಪ್ಲಾಟ್‌ಫಾರ್ಮ್ ಇದ್ದಕ್ಕಿದ್ದಂತೆ ಮುರಿದು ಬಿದಿದೆ ಎಂದು (ಕೃತಕ ಬುದ್ದಿಮತ್ತೆ) AI ಯಿಂದ ರಚಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗಾಂಧಿ ಪ್ರತಿಮೆಗೆ ಯಾರೋ ಹಾಕಿದ್ದ ದುಡ್ಡನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡ್ರಾ ರಾಹುಲ್ ಗಾಂಧಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights