FACT CHECK | ವಿಜಯ್ ರೂಪಾನಿಯವರ ಮೃತದೇಹದ ಎಂದು ಈಜಿಪ್ಟಿನ ಮಮ್ಮಿಯ ಫೋಟೊ ಹಂಚಿಕೆ

ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ದುರಂತ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದಲ್ಲಿ ನಿಧನರಾದವರ ಸಂಖ್ಯೆ 274ಕ್ಕೂ ಹೆಚ್ಚು. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲ. ಈ ಮಧ್ಯೆ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹದ ಚಿತ್ರ ಎಂದು ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಗುಜರಾತ್‌ನ ಮಾಜಿ ಸಿಎಂ ಫೋಟೊದೊಂದಿಗೆ, ಕಳೆಬರಹದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. “ದೇಹವು ವಿಜಯ್ ರೂಪಾನಿಯವರದ್ದಾಗಿರಬಹುದು ಎಂದು ಡಿಎನ್‌ಎ ಸೂಚಿಸುತ್ತದೆ, ಅಹಮದಾಬಾದ್‌ನಲ್ಲಿ ಅವರ ದುರಂತ ವಿಮಾನ ಅಪಘಾತ ಸಾವು ಅನ್ಯಾಯವಾಗಿದೆ. ದುಃಖವನ್ನು ವ್ಯಕ್ತಪಡಿಸಲು ಪದಗಳು ವಿಫಲವಾಗಿವೆ.” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್‌ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 7, 2025 ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ರೀತಿಯ ವಿಡಿಯೋ ಲಭ್ಯವಾಗಿದೆ.  “ಫಿರೌನ್’ ಎಂಬುದು ಪ್ರಾಚೀನ ಈಜಿಪ್ಟ್‌ನ ರಾಜರ ಬಿರುದಾದ ‘ಫರೋ’ ಎಂಬುದಕ್ಕೆ ಅರೇಬಿಕ್ ಪದವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿನ ಹಿನ್ನಲೆ ಧ್ವನಿಯಲ್ಲಿ ಇದನ್ನು ಮೊದಲ ರಾಜವಂಶದ ಪ್ರಾಚೀನ ಈಜಿಪ್ಟ್‌ನ ರಾಜ ಫರೋನ ಅವಶೇಷಗಳು ಎಂದು ವಿವರಿಸಿದೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಹಲವಾರು ಪುರಾತತ್ತ್ವ ಶಾಸ್ತ್ರ ಮತ್ತು ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿರುವ ಅದೇ ಅವಶೇಷಗಳ ಚಿತ್ರಗಳು ಲಭ್ಯವಾಗಿದೆ. ಈ ವರದಿಗಳ ಪ್ರಕಾರ, ಈ ಅವಶೇಷಗಳನ್ನು ಅಹ್ಮೋಸ್ ಮಮ್ಮಿ ಅಥವಾ ಅಹ್ಮೋಸ್‌ನ ಮಮ್ಮಿ ಎಂದು ಕರೆಯಲಾಗುತ್ತದೆ. ಇದು ಈಜಿಪ್ಟ್‌ನ ಲಕ್ಸರ್ ವಸ್ತುಸಂಗ್ರಹಾಲಯದಲ್ಲಿದೆ.

The voice-over in the video described it as the remains of a Pharaoh, a monarch of ancient Egypt from the First Dynasty.

ಈಜಿಪ್ಟ್ ಟೂರ್ಸ್ ಪೋರ್ಟಲ್ ಪ್ರಕಾರ, ಅಹ್ಮೋಸ್ I ರ ಮಮ್ಮಿಯನ್ನು 1881 ರಲ್ಲಿ ಹದಿನೆಂಟನೇ ಮತ್ತು ಹತ್ತೊಂಬತ್ತನೇ ರಾಜವಂಶಗಳ ಇತರ ನಾಯಕರ ಜೊತೆಗೆ ಡೀರ್ ಎಲ್-ಬಹ್ರಿ ಸಂಗ್ರಹದಲ್ಲಿ ಇರಿಸಲಾಗಿದೆ.

 

View this post on Instagram

 

A post shared by Mahmoud Hamam (@mahmoud_hamam74)

ಫೆಬ್ರವರಿ 18, 2024 ರಂದು ಈಜಿಪ್ಟ್ ಪ್ರವಾಸ ಮಾರ್ಗದರ್ಶಿ ಮಹಮೂದ್ ಹಮಾಮ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಲಭ್ಯವಾಗಿದೆ. ಅವರು ಇದೇ ರೀತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಮಹಾನ್ ಯೋಧ ರಾಜ ಅಹ್ಮೋಸ್ I ರ ರಾಜಮನೆತನದ ಮಮ್ಮಿಯನ್ನು ಲಕ್ಸರ್ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ ಮತ್ತು ಶವಪೆಟ್ಟಿಗೆಯನ್ನು ಕೈರೋದ ತಹ್ರೀರ್ ಚೌಕದಲ್ಲಿರುವ ಈಜಿಪ್ಟ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್‌ನ ಮಾಜಿ ಸಿ.ಎಂ ವಿಜಯ್ ರೂಪಾನಿ ಅವರ ಮೃತದೇಹದ ಚಿತ್ರ ಎಂದು ಈಜಿಪ್ಟ್‌ನ ಮಮ್ಮಿ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights