ಗಂಡನನ್ನ‌ ಕಿಡ್ನಾಪ್ ಮಾಡಿಸಿದ ಪತ್ನಿ : ಆಮೇಲೇನಾಯ್ತು ಗೊತ್ತಾ ಕಿಲಾಡಿ ಹೆಂಡತಿ ಕಥೆ..?

ಕಿಲಾಡಿ ಪತ್ನಿಯೊಬ್ಬಳು ಗಂಡನನ್ನ‌ ಕಿಡ್ನಾಪ್ ಮಾಡಿಸಿದ ಘಟನೆ  ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ನಡೆದಿದೆ.

ಸಂಗೀತಾ, ಪತಿಯನ್ನ ಕಿಡ್ನಾಫ್ ಮಾಡಿಸಿದ ಸತಿ. ಶ್ರೀನಿವಾಸ್ ಕಿಡ್ನಾಫ್ ಗೆ ಒಳಗಾದ ಪತಿ. ಕಳೆದ ಎರಡು ವರ್ಷದಿಂದ ಪತಿ ಪತ್ನಿ ದೂರ ಇದ್ದರು.

ಪತ್ನಿಯ ನಡುವಳಿಕೆ ಸರಿ ಇಲ್ಲದ ಹಿನ್ನೆಲೆಯಲ್ಲಿ ಪತಿ ಶ್ರೀನಿವಾಸ್ ಪತ್ನಿ ಸಂಗೀತಾಳನ್ನ ತೊರೆದಿದ್ದನು.  ಆದ್ರೆ ಕಳೆದ ಎರಡು ದಿನದ ಹಿಂದೆ ಪತ್ನಿ ಸಂಗೀತಾ ಹಾಗೂ ೬ ಜನ ಸಹಚರರು ಪತಿಯ ಕಿಡ್ನಾಪ್ ಮಾಡಿದ್ದಾರೆ.

  

ಪೆಟ್ರೋಲ್ ಬಂಕ್ ಕೆಲಸ ಮುಗಿಸಿ ಮನೆಗೆ ತೆರಳುವಾಗ ಪ್ಯಾಸೆಂಜರ್ ಆಫೆ ಗಾಡಿಯಲ್ಲಿ ಪತಿಯನ್ನು ಕಿಡ್ನಾಫ್ ಮಾಡಲಾಗಿದೆ. ಪ್ರಕರಣ ಬೇಧಿಸಿದ ಹದಡಿ ಪೊಲೀಸರು, ಪತ್ನಿ ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights