ವಿವಾದಾತ್ಮಕ ಹೇಳಿಕೆ – ರಜನಿಕಾಂತ್ ವಿರುದ್ಧ ಪ್ರತಿಭಟನೆ : ಹೋರಾಟಗಾರರು ಖಾಕಿ ವಶಕ್ಕೆ

ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಸಮಾಜ ಸುಧಾರಕ ಪೆರಿಯಾರ್ ರಾಮಸ್ವಾಮಿ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಚೆನ್ನೈ ನಲ್ಲಿ ಭಾರೀ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡಲಾಗುತ್ತಿದೆ.

ಪೆರಿಯಾರ್ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ರಜನಿಕಾಂತ್ ವಿರುದ್ಧ ದ್ರಾವಿಡರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಾರೆ. ಪ್ರತಿಭಟನೆ ವೇಳೆ 50 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

ವಿವಾದ ಏನು..?

ಕಳೆದ ಜನವರಿ 14ರಂದು ತಮಿಳುನಾಡಿನ ನಿಯತಕಾಲಿಕವೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್‌ ಮಾಡಿದ ಭಾಷಣ ಬಾರಿ ವಿವಾದಕ್ಕೆ ಕಾರಣವಾಗಿತ್ತು.

1971ದಲ್ಲಿ ಪೆರಿಯಾರ್‌ ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ರಾಮ ಸೀತೆಯ ಬೆತ್ತಲೆ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ಚಪ್ಪಲಿ ಹಾರ ಹಾಕಿದ್ದರು ಎಂದು ರಜನಿಕಾಂತ್‌ ಭಾಷಣ ಮಾಡಿದ್ದರು.

ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಡಿಎಂಕೆ ಈ ಕುರಿತು ತೀವ್ರ ಪ್ರತಿಭಟನೆ ಕೂಡ ನಡೆಸಿದೆ. ರಜನಿಕಾಂತ್‌ ಕೂಡಲೇ ಕ್ಷಮೆಯಾಚಿಸಬೇಕು ಎಂದು ದ್ರಾವಿಡ ಸಂಘಟನೆಗಳು ಒತ್ತಾಯಿಸಿವೆ.

ಆದರೆ ಮಂಗಳವಾರ ಬೆಳಗ್ಗೆ ತಮ್ಮ ಪೋಯಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್‌, ನಾನು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ಕೊಟ್ಟಿಲ್ಲ. ನಿಯತಕಾಲಿಕದಲ್ಲಿ ಏನು ಬರೆದಿತ್ತು ಅದನ್ನು ಓದಿ ತಿಳಿಸಿದ್ದೇನೆ ಅಷ್ಟೇ. ಈ ವಿಚಾರದಲ್ಲಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ, ಸಾರಿ, ಐ ವೋಂಟ್‌ ಅಪಾಲಜೈಸ್‌ ಎಂದು ತಮ್ಮ ಎಂದಿನ ಸ್ಟೈಲ್‌ನಲ್ಲಿಯೇ ಪ್ರತಿಕ್ರಿಯಿಸಿದರು.

ಪೆರಿಯಾರ್‌ ವಿರುದ್ಧ ಹೇಳಿಕೆ ನೀಡಿರುವ ನಟ ರಜನಿಕಾಂತ್‌ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟನೆಗಿಳಿದಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights