ಇಟಲಿ ಕರಾಳ ರಹಸ್ಯ : ರೋಮನ್ ರಾಷ್ಟ್ರಕ್ಕೆ ಕೊರೊನಾ ಹರಡಿದ್ದು ಹೇಗೆ..?

ಕೊರೊನಾಗೆ ವಿಶ್ವವೇ ಮಂಡಿಯೂರಿದೆ. ಎಂಥೆಂಥ ರಾಷ್ಟ್ರಗಳು ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಕೊರೊನಾವನ್ನು ತಡೆಯುವಲ್ಲಿ ಇಟಲಿಗೂ ಕೂಡ ಸಾಧ್ಯವಾಗಲಿಲ್ಲ. ಕೊರೊನಾಕ್ಕೆ ಹೆದರುವುದಿಲ್ಲ ಎಂದು ಬೀಗುತ್ತಿದ್ದ ಇಟಲಿ ಮಕಾಡೆ ಮಲಗಿದೆ. ಇದರ ಪರಿಣಾಮ ಕೊರೊನಾ ಸೋಂಕಿಗೆ ಇಟಲಿ ಚೀನಾಕ್ಕಿಂತ ಅತೀ ಹೆಚ್ಚು ಜನರನ್ನ ಬಲಿ ಪಡೆದುಕೊಂಡಿದೆ.

 ಹೌದು…  ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಚೀನಾದಲ್ಲಿ ಆಗಷ್ಟೇ ಕೊರೊನಾ ಸದ್ದು ಮಾಡಿತ್ತು. ಆರಂಭದಲ್ಲಿ ಕೊರೊನಾ ನೆಸ್ಟ್ ಟಾರ್ಗೇಟ್ ಇಟಲಿಯೇ ಎನ್ನುವ ಆತಂಕ ಇದ್ದರೂ ಇಟಲಿ ಎಚ್ಚೆತ್ತುಕೊಳ್ಳಲಿಲ್ಲ.

ಇಟಲಿ ಆಚರಿಸಿದ 15 ದಿನ ಒಂದು ಅಪ್ಪುಗೆ ಅಭಿಯಾನ ಇಂದು ಇಟಲಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ  ಎಂದರೂ ಇಟಲಿ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಇದರಿಂದ ಇಟಲಿಯಲ್ಲಿ ಕೊರೊನಾ ಸಾವಿನ ಸಂಖ್ಯೆ ಸಾವಿರದಿಂದ ಸಾವಿರಕ್ಕೆ ಏರುತ್ತಲೇ ಹೋಯ್ತು. ಅಷ್ಟಕ್ಕೂ ಇಟಲಿಗೆ ಕೊರೊನಾಕಾಲಿಟ್ಟಿದ್ದು ಹೇಗೆ ಗೊತ್ತಾ..?

ಇಟಲಿ ಮತ್ತು ಚೀನಾ ಜವಳಿ ಉದ್ಯಮಗಳು. ಇಟಲಿಯ ಲಕ್ಷಾಂತರ ಕಾರ್ಮಿಕರು ಚೀನಾದಲ್ಲಿ ಚೀನಾದ ಲಕ್ಷಾಂತರ ಮಂದಿ ಇಟಲಿಯಫ್ಯಾಷನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ, ಲಕ್ಷಾಂತರ ಮಂದಿ ವಿಮಾನಯಾನ ಮೂಲಕ ಪ್ರಯಾಣ ಬೆಳೆಸುತ್ತಾರೆ. ಅಷ್ಟೇ ಯಾಖೆ ಕೊರೊನಾ ಹುಟ್ಟಿಕೊಂಡ ಚೀನಾದ ವುಹಾನ್ ಪ್ರಾಂತ್ಯದಿಂದ ಲಕ್ಷಾಂತರ ಕಾರ್ಮಿಕರು ಇಟಲಿಗೆ ಆಗಮಿಸುತ್ತಾರೆ. ಹೀಗಾಗಿ ಇಟಲಿಯಿಂದ್ ವುಹಾನ್ ಗೆ ನೇರವಾಗಿ ವಿಮಾನಗಳಿವೆ.

ಅದು ಕೊರೊನಾ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಕಾಲ. ಚೀನಾದಲ್ಲಿ ಇದೇ ವೇಳೆ ಜ 25 ರಂದು ವರ್ಷಾಚರಣೆ ಕೂಡ ಮಾಡಲಾಗಿತ್ತು. ಈ ವರ್ಷಾಚರಣೆಗೆ ಚೀನಾಕ್ಕೆ ದೇಶದೆಲ್ಲೆಡೆಯಿಂದ ಜನ ಆಗಮಿಸುತ್ತಾರೆ. ಚೀನಾ ವರ್ಷಾಚರಣೆಗೆ ಇಟಲಿಯ ಫ್ಯಾಕ್ಟರಿಯೊಂದರ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಚೀನಾಕ್ಕೆ ಬಂದಿದ್ದರು. ಸಾಲದಕ್ಕೆ ವುಹಾನ್ ಗೂ ಹಾಗೂ ಇಟಲಿಯಲ್ಲಿರೋ ಫ್ಯಾಕ್ಟರಿ ಲಿಂಕ್ ಇತ್ತು. ಇಲ್ಲೇ ನೋಡಿ ಆಗಿದ್ದು ಎಡವಟ್ಟು. ಹೀಗೆ ಚೀನಾಕ್ಕೆ ಬಂದ ಕಾರ್ಮಿಕರನ್ನ ಯಾವುದೇ ಪರೀಕ್ಷೆ ಇಲ್ಲದೇ ಇಟಲಿ ನಿರ್ಭಯವಾಗಿ ವಾಪಸ್ಸು ಬರಮಾಡಿಕೊಂಡಿತ್ತು. ಸಾಲದಕ್ಕೆ ಕಾರ್ಮಿಕರು ಫ್ಯಾಕ್ಟರಿಗೆ ಕೆಲಸಕ್ಕೂ ತೆರಳಿದ್ರು. ಇದು ಇಟಲಿ ಮಾಡಿದ ಮತ್ತೊಂದು ತಪ್ಪು. ಚೀನಾದಿಂದ ಬಂದ ಕಾರ್ಮಿಕರು ತೆರಳಿದ ಫ್ಯಾಕಟರಿಯಿಂದಲೇ ಇಡೀ ಇಟಲಿ ಇಂದು ಹೆಜ್ಜೆ ಹೆಜ್ಜೆಯೊಂದು ಕಥೆಯನ್ನು ನೋಡುವಂತಾಗಿದೆ. ಚೀನಾಕಿಂತ ಇಟಲಿಯಲ್ಲೇ ಅತೀ ಹೆಚ್ಚು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆ ಲಕ್ಷ ಕಾರ್ಮಿಕರಿಂದಲೇ ಇಟಲಿ ಇವತ್ತು ನರಕ ಕಾಣುತ್ತಿದೆ.

ಇಟಲಿಯಲ್ಲಿ ಜಗತ್ತಿನ ಶ್ರೇಷ್ಠ ವೈದ್ಯಕೀಯ ಸೌಲಭ್ಯ ಇದ್ದರೂ ಕೊರೊನಾಗೆ ಹೆದರಿ ಹೋಗಿದೆ. ಅಷ್ಟಕ್ಕೂ ಇಟಲಿಯಲ್ಲಿ ಅತೀ ಹೆಚ್ಚು ಸಾವು ಯಾಕೆ..? ಹೆಜ್ಜೆಗೊಂದು ಕಣ್ಣೀರಿನ ಕಥೆ ಸಿಗುವುದ ಯಾಕೆ..?

ಇಟಲಿ ಕೊರೊನಾ ಆರಂಭದಲ್ಲಿದ್ದಾಗ ನಾನು ವೈರಸ್ ಅಲ್ಲ ಮನುಷ್ಯ ಎಂದೇಳಿಕೊಂಡಿತ್ತು. ಚೀನಾ ಉತ್ಪಾದನೆ ವಸ್ತುಗಳು ಅಗ್ಗವಾಗಿ ಸಿಕ್ಕುತ್ತವೆ. ಹೀಗಾಗಿ ಚೀನಾದೊಂದಿಗೆ ಎಲ್ಲಾ ದೇಶಗಳು ವ್ಯಾಪರ ಸಂಬಂಧ ಹೊಂದಿವೆ. ಇದೇ ರೀತಿ ಇಟಲಿ ಕೂಡ ವ್ಯಾಪರ ಸಂಬಂಧವನ್ನು ಹೊಂದಿದೆ.ಇಟಲಿಯಿಂದ ಚೀನಾಕ್ಕೆ ಚೀನಾದಿಂದ ಇಟಲಿಗೆ ಲಕ್ಷಾಂತರ ಜನ ಕಾರ್ಮಿಕರು ಪ್ರಯಾಣ ಬೆಳಸುತ್ತಾರೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ರೂ ಇಟಲಿ ನಿರ್ಲಕ್ಷ್ಯ ತೋರಿತ್ತು. ಈ ಅಸಡ್ಡೆಯಿಂದಾಗಿ ಇಟಲಿ ಇಂದು ಪಶ್ಚಾತಾಪ ಪಡುವಂತಾಗಿದೆ. ಅತೀ ಹೆಚ್ಚು ವೃದ್ಧರಿರುವ ಇಟಲಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಟಲಿಯ ವೃದ್ಧರನ್ನ ಹಿಂಡಿ ಹಿಪ್ಪೆಯಾಗಿಸಿ ಪ್ರಾಣ ಬಲಿ ಪಡೆಯುತ್ತಿದೆ. 80 ವರ್ಷ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದೆ.

ಬಳಿಕ ಎಚ್ಚತ್ತುಕೊಂಡ ಇಟಲಿ ಲಾಕ್ ಡೌನ್ ಘೋಷಿಸಿದೆ. ಇದರಿಂದ ಿಟಲಿಗೆ ಆದ ಾರ್ಥಿಕ ಸಂಕಷ್ಟ ಕೇಳಿದ್ರೆ ಬೆಚ್ಚಿ ಬೀಳ್ತೀರಾ. ಯುರೋಪನಲ್ಲಿ ಆರ್ಥಿಕತೆಯಲ್ಲಿ 3 ಸ್ಥಾನ ಇಟಲಿ ಪಡೆದಿದೆ. ವಿಶ್ವದ ಲೆಕ್ಕಾಚಾರಕ್ಕೆ ಬಂದರೆ 8 ನೇ ಸ್ಥಾನದಲ್ಲಿದೆ. ಕೊರೊನಾದಿಂದಾಗಿ ಸದ್ಯ ಇಟಲಿಯಲ್ಲಿ 20 ವರ್ಷದ ಆರ್ಥಿಕ ಸಂಕಷ್ಟ ಎದುರಾಗಿದೆ.

ಇನ್ನೋ ಕೆಲವರ ಪ್ರಕಾರ, ಚೀನಾದಿಂದ ಬಟ್ಟೆಗಳು ಇಟಲಿಗೆ ಬರುತ್ತವೆ. ಇದರಿಂದಲೂ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಕೊರೊನಾದಿಂದಾಗಿ 100 ಬಿಲಿಯನ್ ಡಾಲರ್ ನಷ್ಟು ನಷ್ಟ ಇಟಲಿ ಅನುಭವಿಸಿದೆ. ವಿಮಾನಯಾನಕ್ಕೆ 113 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಮುಂಜಾಗೃತಿ ತೆಗೆದುಕೊಳ್ಳದೇ ಇದ್ದರಿಂದ ಇಷ್ಟೆಲ್ಲಾ ಕಷ್ಟ ಎದುರಿಸಬೇಕಾಗಿದೆ.

ಈ ಹಿಂದೆ 9/11  ದಾಳಿ, ಸಾರ್ಸ್ ರೋಗಕ್ಕೆ ತತ್ತರಿಸಿರುವದಕ್ಕಿಂತ ಕೊರೊನಾಕ್ಕೆ ಹೆಚ್ಚು ಆರಱಥಿಕ ಸಂಕಷ್ಟ ಎದುರಿಸುತ್ತಿದೆ.6 ರಿಂದ 7 ಕೋಟಿ ಜನರನ್ನು ಕಣ್ಣೀರಿಡುವಂತೆ ಮಾಡಿದೆ.

ಇಟಲಿ ರಾಷ್ಟ್ರದ ಸ್ಥಿತಿ ಮುಂದೇನು..? ಜಗತ್ತು ನಾನಾ ವೈರಸ್ ಗನ್ನು ಕಂಡಿತ್ತು. ಆದರೆ ಕೊರೊನಾ ಭಾರೀ ಭಯಾನಕವಾಗಿ ಕಾಡುತ್ತಿದೆ. ಮುಂದೇನು ಅನ್ನೋ ಭಯ ಕೂಡ ತಂದಿದೆ. ಕರಾಳದಿನಗಳನ್ನು ಹೊತ್ತು ತಂದ ಕೊರೊನಾ ಬಗ್ಗೆ ಎಚ್ಚೆತ್ತುಕೊಂಡಿರದಿದ್ದರೆ ಇಂಥಹ ಸಂಕಷ್ಟ ಇಟಲಿಗೆ ಬರುತ್ತಿರಲಿಲ್ಲ. ಒಂದೇ ಒಂದು ನಿರ್ಲಕ್ಷ್ಯ ದಿಂದ ಕೊರೊನಾ ಇಟಲಿ, ಚೀನಾ, ಅಮೆರಿಕಾ ಹತ್ತು ಹಲವು ರಾಷ್ಟ್ರಗಳನ್ನು ಹಿಂಡಿ ಹಿಪ್ಪೆಯಾಗಿಸಿದೆ. ಮುಂದಾದರೂ ಇಟಲಿ ಎಚ್ಚೆತ್ತುಕೊಳ್ಳಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights