ಲಾಕ್ ಡೌನ್ ಎಫೆಕ್ಟ್ : ಗುಡ್ ಫ್ರೈಡೆಗೆ ಚರ್ಚ್ ಗಳು ತೆರೆಯದಂತೆ ಪೊಲೀಸ್ ಕಮಿಷನರ್ ಸೂಚನೆ…

ಏ.10 ರಂದು ಗುಡ್ ಫ್ರೈಡೆ ಇರುವ ಹಿನ್ನೆಲೆಯಲ್ಲಿ ಚರ್ಚ್ ಗಳನ್ನು ತೆರೆಯದಂತೆ ಬೆಂಗಳೂರು ಕಮಿಷನರ್ ಭೇಟಿಯಾದ ಆರ್ಚ್ ಬಿಷಪ್ ಅವರಿಗೆ ಸೂಚಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇದನ್ನ ತಡೆಗಟ್ಟಲು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದು ಕಾರ್ಯ ನಿರ್ವಹಿಸುತ್ತಿದೆ. ಲಾಕ್ ಡೌನ್ ನಡುವೆಯೂ ಕೊರೊನಾ ಅಟ್ಟಹಾಸ ಮುಂದುವರೆದಿದ್ದು  ನಿಜಾಮುದ್ದೀನ ಗೆ ಹೋದರವಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ.

ಹೀಗಾಗಿ ಜನ ಒಂದೆಡೆ ಸೇರುವ ಸ್ಥಳಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿ, ಮಾಲ್, ಥಿಯೇಟರ್, ಮಾರುಕಟ್ಟೆ, ಪಾರ್ಕ್ ಹೀಗೆ ಸಾರ್ವಜನಿಕರು ಸೇರುವ ಸ್ಥಳಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಾಜ್ಯದ್ಯಂತ ಮಾರಕ ಕೊರೊನಾ ವೈರಸ್ ಆತಂಕ ತಂದೊಡ್ಡಿದ್ದು, ಇವತ್ತು ಒಂದೇ ದಿನ 12 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 175 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಲಾಗಿದೆ.

ಇನ್ನು ಏ.10 ರಂದು ಗುಡ್ ಫ್ರೈಡ್ ಇರುವ ಹಿನ್ನೆಲೆಯಲ್ಲಿ ಅಂದು ಚರ್ಚ್ ಬಾಗಿಲು ತೆರೆಯದಂತೆ ಹಾಗೂ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಏ.10ರಂದು ಗುಡ್ ಫ್ರೈಡೆ ಇರುವ ಹಿನ್ನೆಲೆಯಲ್ಲಿ ಇಂದು ಅರ್ಚ್ ಬಿಷಪ್ ಅವರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಡಿಸಿಪಿ ಶರಣಪ್ಪ ಅವರನ್ನು ಭೇಟಿ ಮಾಡಿದಿರು. ಈ ವೇಳೆ, ಚರ್ಚ್ ನಲ್ಲಿ ಜನತೆ ಸೇರದಂತೆ ನೋಡಿಕೊಳ್ಳಿ ಎಂದು ಕಮಿಷನರ್ ಭಾಸ್ಕರ್ ರಾವ್ ಹಾಗೂ ಡಿಸಿಪಿ ಶರಣಪ್ಪ ಮನವಿ ಮಾಡಿದರು. ಅಲ್ಲದೇ, ಗುಡ್ ಫ್ರೈ ದಿನದಂತೆ ಚರ್ಚ್ ಬಾಗಿಲು ತೆರೆಯದಂತೆ ಸಲಹೆ ನೀಡಿದರು. ಆಯುಕ್ತರ ಸಲಹೆಗೆ ಆರ್ಚ್ ಬಿಷಪ್ ಸಂಪೂರ್ಣ ಒಪ್ಪಿಗೆ ನೀಡಿದ್ದು, ಅಂದು ಚರ್ಚ್ ಬಾಗಿಲು ತೆರೆಯುವುದಿಲ್ಲ ಎಂದು ತಿಳಿಸಿದರು…

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights