24 ಗಂಟೆಗಳಲ್ಲಿ ದೇಶಾದ್ಯಂತ 3,604 ಹೊಸ ಕೊರೊನಾ ಕೇಸ್ : 74,281ಕ್ಕೇರಿದ ಸೋಂಕಿತರ ಸಂಖ್ಯೆ!
ಎಗ್ಗಿಲ್ಲದೇ ಮನುಷ್ಯನ ದೇಹ ಸೇರುತ್ತಿರುವ ಕೊರೊನಾ ದೇಶದ ಜನತೆ ನಿದ್ದೆಗೆಡಿಸಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ ದೇಶವ್ಯಾಪಿ 3,604 ಹೊಸ ಕೊರೊನಾ ಸೋಂಕಿತರ ಪತ್ತೆಯಾಗಿದೆ. ಆ ಮೂಲಕ ದೇಶದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 74,281ಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹೌದು… ದೇಶದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟಾರೆ 3,604 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ. ಅಂತೆಯೇ ಕಳೆದ 24 ಗಂಟೆಗಳಲ್ಲಿ 122 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 2,415ಕ್ಕೆ ಏರಿಕೆಯಾಗಿದೆ.
ಜೊತೆಗೆ ಈ ವರೆಗೂ ದೇಶದಲ್ಲಿ 24,453 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ 47480 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಜರಾತ್‍ನಲ್ಲಿ 8,904 ಮಂದಿಗೆ ಸೋಂಕು ತಗುಲಿದ್ದು, 537 ಮಂದಿ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 8,718 ಮಂದಿ ಸೋಂಕಿಗೆ ತುತ್ತಾಗಿದ್ದು, 61 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 7,639ಕ್ಕೆ ಏರಿದೆ. 86 ಮಂದಿ ಸಾವನ್ನಪ್ಪಿದ್ದು, 2,512 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ 925 ಮಂದಿಗೆ ಸೋಂಕು ತಗುಲಿದ್ದು, 433 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 31 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಅಂತರರಾಜ್ಯ ವಲಸಿಗರಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆಗಳಲ್ಲಿ ಈಗ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 525 ಮಂದಿ ಈವರೆಗೆ ಕೊರೊನಾಗೆ ತುತ್ತಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. 489 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 32 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ……………….. ಸೋಂಕಿತ …. ಗುಣಮುಖ …. ಸಾವು
ಅಂಡಮಾನ್-ನಿಕೋಬಾರ್ …… 33 ……… 33 ……….. 0
ಆಂಧ್ರಪ್ರದೇಶ ………….. 2,090 …… 925 ……… 46
ಅರುಣಾಚಲ ಪ್ರದೇಶ …….. 1 …….. 1 …………… 0
ಅಸ್ಸಾಂ ……………….. 65 …… 34 …………. 2
ಬಿಹಾರ ……………….. 831 ….. 365 ………… 6
ಚಂಡೀಗರ್……………… 187 ……. 24 …………. 3
ಛತ್ತೀಸ್‌ಗಢ…………… 59 ……. 49 …………. 0
ದಾದರ್ ನಗರ ಹವೇಲಿ ….. 01 ……… 0 ……………. 0
ದೆಹಲಿ ……………… 7639 …. 2069 ……… 86
ಗೋವಾ ……………….. 7 ………… 7 ………….. 0
ಗುಜರಾತ್ …………… 8903 …… 2545 ……… 537
ಹರಿಯಾಣ …………. 780 …….. 300 ……….. 11
ಹಿಮಾಚಲ ಪ್ರದೇಶ …. 65 ……….. 39 …………. 2
ಜಮ್ಮು ಮತ್ತು ಕಾಶ್ಮೀರ …….. 934 …….. 383 ………… 10
ಜಾರ್ಖಂಡ್ …………… 172 ……… 78 ………… 3
ಕರ್ನಾಟಕ ………….. 951 …….. 442 ………. 32
ಕೇರಳ …………….. 524 …….. 489 ……….. 4
ಲದಾಕ್ …………….. 42 ………… 21 ….…
ಮಹಾರಾಷ್ಟ್ರ …………….. 24,427 …….. 5,125 ……….. 921
ತಮಿಳುನಾಡು …………….. 8,718 …….. – ……….. 61

