ಮೆಕ್ಕೆ ಜೋಳ ಬೆಳೆದ ರೈತರಿಗೆ 5000 ನೆರವು! : ಆಶಾಕಾರ್ಯಕರ್ತೆಯರಿಗೆ ತಲಾ 3000 ಸಹಾಯ ಧನ
ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಇದರ ನಡುವೆ ಕಷ್ಟಪಟ್ಟು ಸಾಲಸೋಲಾ ಮಾಡಿ ಮೆಕ್ಕೆ ಜೋಳ ಬೆಳೆದ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಹೌದು… ದೇಶದ ಆರ್ಥಿಕ ಪುನರ್ ಚೇತನಕ್ಕೆ ಕೇಂದ್ರ ಸರ್ಕಾರದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಇನ್ನೂ ವಿತ್ತ ಸಚಿವೆ ಎರಡು ದಿನಗಳಿಂದ ಈ ಪ್ಯಾಕೇಜ್ ನ ವಿವರಗಳನ್ನು ನೀಡುತ್ತಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ನಲ್ಲಿ 500 ಕೋಟಿ ಘೋಷಣೆ ಮಾಡಿದ್ದಾರೆ. ಮೆಕ್ಕೆ ಜೋಳ ಬೆಳೆದ ಪ್ರತೀಯೊಬ್ಬ ರೈತರಿಗೆ 5000 ನೆರವು ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಲಾಕ್ ಡೌನ್ ನಿಂದಾಗಿ ಮೆಕ್ಕಾಜೋಳ ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದರು. ಬೆಳೆದ ಬೆಂಬಲ ಬೆಲೆ ಸಿಗುವುದಿರಲಿ ಮಾರುಕಟ್ಟೆ ವರೆಗೂ ಸಾಗಿಸಲು ಸಾಧ್ಯವಾಗದೇ ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟವಾಗಿದೆ.
ಇದರ ಬೆನ್ನಲ್ಲೇ ರೈತರ ಸಂಕಷ್ಟಕ್ಕೇ ನೆರವು ಘೋಷಣೆ ಮಾಡಲಾಗಿದೆ. 10 ಲಕ್ಷ ಮೊಕ್ಕೆ ಜೋಳ ಬೆಳೆದ ರೈತರು ನಮ್ಮ ರಾಜ್ಯದಲ್ಲಿದ್ದಾರೆ. ಪ್ರತಿಯೊಬ್ಬ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5000 ನೆರವು ಘೋಷಣೆ ಮಾಡಿದೆ.
ಎಲ್ಲೆರ ಆಪೇಕ್ಷೆಯಂತೆ ಕೋವಿಡ್-19 ವಿಚಾರದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ 12.5 ಕೋಟಿ ಸಹಾಯ ಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 40520 ಜನ ಆಶಾಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ ತಲಾ 3000 ಸಹಾಯ ಧನ ನೀಡಲಾಗಿದೆ.

