ಪಶ್ಚಿಮ ಬಂಗಾಳ-ಒಡಿಶಾದಲ್ಲಿ ಅಂಫಾನ್ ಅಟ್ಟಹಾಸ : 12 ಜನ ಸಾವು!

ಕಳೆದ ವರ್ಷಗಳಿಗೆ ಹೋಲಿಸಿದರೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ಭೀಕರ ಬಿರುಗಾಳಿಗಳಲ್ಲಿ ಒಂದಾದ ಆಂಫಾನ್ ಚಂಡಮಾರುತ ಬುಧವಾರ ಬಂಗಾಳ ಮತ್ತು ಒಡಿಶಾವನ್ನು ಬಡಿದು ಸಾವಿರಾರು ಮನೆಗಳನ್ನು ಧ್ವಂಸಗೊಳಿಸಿದೆ. ಕಟ್ಟಡಗಳನ್ನು ಹಾನಿಗೊಳಿಸಿ, ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಂಗಾಳದಲ್ಲಿ 10 ರಿಂದ 12 ಜನರು ಚಂಡಮಾರುತದಿಂದ ಸಾವನ್ನಪ್ಪಿದ್ದಾರೆ.

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಕೊರೊನ ವೈರಸ್ ಸಾಂಕ್ರಾಮಿಕ ರೋಗಕ್ಕಿಂತ ಆಂಫಾನ್ ಪ್ರಭಾವವು ಕೆಟ್ಟದಾಗಿದೆ. ಚಂಡಮಾರುತದಿಂದ ಉಂಟಾದ ಹಾನಿ 1 ಲಕ್ಷ ಕೋಟಿ ಯಾಗಿದ್ದು, ಸುಮಾರು 30 ಕಿಲೋಮೀಟರ್ ವ್ಯಾಸವನ್ನು ಹೊಂದಿರುವ ಈ ಚಂಡಮಾರುತ 185 ಕಿಲೋಮೀಟರ್ ವೇಗದ ಗಾಳಿ ಮತ್ತು 15 ಅಡಿ ಎತ್ತರದ ಅಲೆಗಳಿಂದ ಭೂಕುಸಿತವನ್ನು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರನ್ನು ಮತ್ತು ಒಡಿಶಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಅಂಪೆನ್‌ನಿಂದ ಹಾನಿಯ ಬಗ್ಗೆ ಲೆಕ್ಕ ಹಾಕು ಕನಿಷ್ಠ ಒಂದು ವಾರ ಬೇಕು” ಎಂದರು.

ಬುಧವಾರ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಅಂಫಾನ್ ಚಂಡಮಾರುತವು ಬಂದು ಅಪ್ಪಳಿಸಿದ ಪರಿಣಾಮ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಗೊಳಲಾಗಿದೆ. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿರುಗಾಳಿ ಸಹಿತ ಮಳೆಗೆ ಶೆಡ್‍ಗಳು ನೆಲಸಮವಾಗುತ್ತಿರುವ ದೃಶ್ಯ, ಮಳೆಗೆ ರಸ್ತೆಗಳಲ್ಲಿ ನೀರು ತುಂಬಿ ವಾಹನಗಳು ಮುಳುಗಿರುವ ದೃಶ್ಯಗಳು, ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬೀಳುತ್ತಿರುವಾಗ ಬೆಂಕಿ ಕಾಣಿಸಿಕೊಂಡ ದೃಶ್ಯ, ಭಾರೀ ಬಿರುಗಾಳಿ ಬಸ್ಸೊಂದನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವನ್ನು ನೋಡಿದಾಗ ಅಂಫಾನ್ ಚಂಡಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಷ್ಟು ಅವಾಂತರ ಸೃಷ್ಟಿಸಿದೆ ಎಂಬುದು ತಿಳಿಯುತ್ತದೆ.

 

https://twitter.com/ANI/status/1263149544499372034

 

https://twitter.com/Prakharforever/status/1263181032137920513

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights