ಪತ್ರಕರ್ತರ ವಿರುದ್ಧ FIR: ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದ ಸುದ್ಧಿಸಂಸ್ಥೆಗಳು

ಕೊರೊನಾ ವಿರುದ್ಧದ ಹೋರಾಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿನ ವಿಫಲತೆಗಳ ಬಗ್ಗೆ ವಿಮರ್ಶಾತ್ಮಕ ವರದಿ ಮಾಡಿದ್ದ ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಎರಡು ಪತ್ರಿಕಾ ಸಂಸ್ಥೆಗಳ ವಿರೋಧಿಸಿವೆ.

ಉತ್ತರ ಪ್ರದೇಶದ ಮೂಲಕ ವರದಿಗಾರ ರವೀಂದ್ರ ಸಕ್ಸೇನಾ ಮತ್ತು ಗುಜರಾತ್ ಮೂಲಕ ಸಂಪಾದಕ ಧವಲ್‌ ಪಟೇಲ್ ಮೇಲೆ ಅಲ್ಲಿನ ರಾಜ್ಯ ಸರ್ಕಾರಗಳು ಎಫ್‌ಐಆರ್‌ ದಾಖಲಿಸಿದೆ.

ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ಭಾರತದ ರಾಜ್ಯ ಸರ್ಕಾರಗಳು “ನಿರ್ಣಾಯಕ ಧ್ವನಿಗಳನ್ನು ಮೌನಗೊಳಿಸಲು” ಪ್ರಯತ್ನಸುತ್ತಿರುವುದನ್ನು ‘ಪ್ರಸ್ತುತ ಪ್ರವೈತ್ತಿ’ ಸೂಚಿಸುತ್ತದೆ ಎಂದು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್‌(ಐಎಫ್‌ಜೆ) ಹೇಳಿದೆ.

ಇಂತಹ ಕೃತ್ಯಗಳು “ಸಾರ್ವಜನಿಕರ ಮಾಹಿತಿ ಹಕ್ಕಿನ ಉಲ್ಲಂಘನೆ”ಯಾಗಿದೆ. ರವೀಂದ್ರ ಸಕ್ಸೇನಾ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕು. ಸಾಂಕ್ರಮಿಕ ರೋಗದ ನಿಯಂತ್ರಣದ ವಿಫತೆಗಳನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಐಎಫ್‌ಜೆ ಕರೆ ನೀಡಿದರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾಷನಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಇಂಡಿಯಾ (ಎನ್‌ಯುಜಿಐ) ಸಕ್ಸೇನಾ ವಿರುದ್ಧದ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದೆ ಮತ್ತು ಸಸ್ಕೇನಾ ಮೇಲಿನ ಎಲ್ಲಾ ಆರೋಪಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಂತಹ ವೃತ್ತಿಪರ ಸಂಸ್ಥೆಗಳು ಪತ್ರಕರ್ತರ ವಿರುದ್ಧದ ಕ್ರಮವನ್ನು ಖಂಡಿಸಿವೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಿಕೆಯಿಂದಾದ ಆಡಳಿತದ ನ್ಯೂನತೆಗಳ ಬಗ್ಗೆ ವರದಿಮಾಡಿದ್ದಕ್ಕಾಗಿ ಹಿಮಾಚಲ ಪ್ರದೇಶ, ಗುಜರಾತ್, ತಮಿಳುನಾಡು,  ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಪತ್ರಕರ್ತರು ಮಾಡಿದ್ದಾದರೂ ಏನು? 

ಸೀತಾಪುರ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾದ ಸಂಕಷ್ಟಗಳು ಮತ್ತು ಕ್ವಾರಂಟೈನ್ ಸ್ಥಳಗಳನ್ನು ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ವರದಿ ಮಾಡಿ ಸಮಾಜಕ್ಕೆ ತೋರಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ Today 24 ಸಂಸ್ಥೆಯ ಪತ್ರಕರ್ತ ರವೀಂದ್ರ ಸಕ್ಸೇನಾ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ಹೇರಿ ಎಫ್‌ಐಆರ್ ದಾಖಲಿಸಿದೆ.

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಮಹೋಲಿ ತಹಸಿಲ್‌ನಲ್ಲಿರುವ ಕ್ಯಾರೆಂಟೈನ್ ಕೇಂದ್ರದಲ್ಲಿ ಹಳಸಿದ ಆಹಾರವನ್ನು ನೀಡುತ್ತಿದ್ದಾರೆ ಎಂದು ಕ್ಷಾರಂಟೈನ್‌ನಲ್ಲಿದ್ದ ಜನರು ದೂರು ನೀಡಿದ್ದರು. ಇದರ ಕುರಿತು ವಿಡಿಯೋ ವರದಿ ಮಾಡಿದ್ದ ಪತ್ರಕರ್ತ ಸಕ್ಸೇನಾ ವಿರುದ್ಧ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದಂತೆ ಮೇ 18 ರಂದು ದೌರ್ಜನ್ಯ ತಡೆ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.

ಪತ್ರಕರ್ತರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವಂತೆ ಐಎಫ್‌ಜೆ ಮತ್ತು ಎನ್‌ಯುಜಿಐ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿವೆ.

ಕೊರೊನಾ ವೈರಸ್‌ ಸಂದರ್ಭವನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ವಿಮರ್ಶಾ ವರದಿಗಾಗಿ ಪತ್ರಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸಕ್ಸೇನಾ ಅವರದ್ದೂ ಒಂದು. ಈ  ಹಿಂದೆ, ಗುಜರಾತಿ ಫೇಸ್ ಆಫ್ ನೇಷನ್ ಸುದ್ದಿ ವೆಬ್‌ಸೈಟ್‌ನ ಸಂಪಾದಕ ಧವಲ್ ಪಟೇಲ್ ಅವರನ್ನು ಮೇ 11 ರಂದು ಬಂಧಿಸಲಾಗಿತ್ತು. ಗುಜರಾತ್‌ನಲ್ಲಿ ಉಂಟಾಗಿದ್ದ ಕೊರೊನಾ ಸಂಕಷ್ಟದ ವಿರುದ್ಧ ಸುದ್ದಿ ಮಾಡಿದ್ದಕ್ಕಾಗಿ ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಧವಲ್ ಪಟೇಲ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ಮೇ 10 ರಂದು ದೆಹಲಿ ಮೂಲದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಮಹೇಂದರ್ ಸಿಂಗ್ ಮನ್ರಾಲ್ ಹಾಗೂ ಹಿಮಾಚಲ ಪ್ರದೇಶದ ಪತ್ರಕರ್ತರು ಕೊರೊನಾ ನಿಯಂತ್ರಣದ ವೈಫಲ್ಯಗಳ ಬಗ್ಗೆ ಸುದ್ದಿ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್ ಮತ್ತು ಕಿರುಕುಳವನ್ನು ಎದುರಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights