Lockdown ಸಡಿಲಿಕೆ: ಸೋಂಕಿತರ ಜೊತೆಗೇ ಏರುತ್ತಿವೆ ಕಂಟೈನ್ಮೆಟ್‌ ವಲಯಗಳು!

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕರ್ನಾಟಕದಲ್ಲಿಯೂ ತನ್ನ ಹಾವಳಿಯನ್ನು ಕೊರೊನಾ ವೈರಸ್‌ ಮುಂದುವರಿಸಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರನಲ್ಲಿ ಕೊರೊನಾ ಸೋಂಕು ಸಮರೋಪಾದಿಯಲ್ಲಿ ಹರಡುತ್ತಿದೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಂಟೈನ್ ಮೆಂಟ್ ವಲಯಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇಂದಿಗೆ 31 ವಲಯಗಳನ್ನು ಕಂಟೈನ್‌ಮೆಂಟ್‌ ಪ್ರದೇಶಗಳೆಂದು ಘೋಷಿಸಲಾಗಿದೆ.

ಭಾನುವಾರ ಒಂದೇ ದಿನದಲ್ಲಿ 7 ವಾರ್ಡ್ ಗಳು ಕಂಟೈನ್ಮೆಂಟ್ ವಲಯಕ್ಕೆ ಸೇರ್ಪಡೆಯಾಗಿವೆ.

ದಾಸರಹಳ್ಳಿ, ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಬಡಾವಣೆ ಮತ್ತು ಬೊಮ್ಮನಹಳ್ಳಿ ವಾರ್ಡ್‌, ಮಹದೇವಪುರ ವಲಯದ ಕಾಡುಗೋಡಿ, ಪೂರ್ವ ವಲಯದ ಅಗರ, ದಕ್ಷಿಣ ವಲಯದ ಸಿದ್ದಾಪುರ, ಹೊಸಹಳ್ಳಿ ಹಾಗೂ ದಾಸರಹಳ್ಳಿ ವಲಯದ ಚೊಕ್ಕಸಂದ್ರ ವಾರ್ಡ್ ಗಳಲ್ಲಿ ಕೊರೋನಾ ಸೋಂಕಿತರು ಕಾಣಿಸಿಕೊಂಡಿದ್ದರಿಂದ ಕಂಟೈನ್‌ಮೆಂಟ್‌ ಪ್ರದೇಶಗಳಾಗಿ ಗುರುತಿಸಿಕೊಂಡಿವೆ.

ಕಳೆದ ಕೆಲ ದಿನಗಳಿಂದ ಯಾವುದೇ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕೆ.ಆರ್‌.ಮಾರುಕಟ್ಟೆ ವಾರ್ಡ್‌, ಬೇಗೂರು ವಾರ್ಡ್‌ ಹಾಗೂ ಬಿಟಿಎಂ ಬಡಾವಣೆ ಕಂಟೈನ್ಮೆಂಟ್ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights