ಬಿಹಾರ ಚುನಾವಣೆ: JDUಗೆ ಶರದ್ ಯಾದವ್ ವಾಪಸ್? ಮುಂದುರೆಯುತ್ತಾ JDU-BJP ಮೈತ್ರಿ?
ಬಿಹಾರ ವಿಧಾನ ಚುನಾವಣೆ ಸಮೀಸುತ್ತಿದ್ದಂತೆಯೇ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೆಡಿಯು-ಬಿಜೆಪಿ ಮೈತ್ರಿಯನ್ನು ವಿರೋಧಿಸಿ ಜೆಡಿಯು ತೊರೆದಿದ್ದ ಹಿರಿಯ ನಾಯಕ ಶರದ್ ಯಾದವ್ ಮತ್ತೆ ಪಕ್ಷಕ್ಕೆ ಮರಳುವುದಾಗಿ ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬಾರದ ಕಾರಣ ಜೆಡಿಯು ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದರಿರಿಂದಾಗಿ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ಶರದ್ ಯಾದವ್ 2018ರಲ್ಲಿ ಜೆಡಿಯು ತೊರೆದು ಎಲ್‌ಜೆಡಿ ಪಕ್ಷ ಸ್ಥಾಪಿಸಿದ್ದರು. ಆದರೆ, ಈಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜೆಡಿಯುಗು ವಾಪಸ್ ಆಗುವ ಮಾತುಕತೆಗಳು ಗರಿಗೆದರಿವೆ.
ಅದಕ್ಕಾಗಿ ಜೆಡಿಯುನ ಹಲವು ನಾಯಕರೊಂಗಿಗೆ ಶರದ್ ಯಾದವ್ ಚರ್ಚಿಸಿದ್ದು, ಸಿಎಂ ನಿತೀಶ್ ಕುಮಾರ್ ಅವರ ಜೊತೆಗೆ ಮಾತುಕತೆ ನಡೆದ ನಂತರ ಪಕ್ಷಕ್ಕೆ ಮರಳುವುದಾಗಿ ಜೆಡಿಯು ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಈ ಮಧ್ಯೆ, ಶರದ್ ಯಾದವ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಶರದ್ ಅವರಿಗೆ ಕರೆ ಮಾಡಿರುವ ನಿತೀಶ್ ಕುಮಾರ್ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.
ಬಿಹಾರದ ಸ್ಥಳೀಯ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಬಹುಮತದ ಗೆಲುವು ಸಾಧಿಸಲು ಕಸರತ್ತು ನಡೆಸುತ್ತಿವೆ. ಅಲ್ಲದೆ, ಬಿಜೆಪಿಯು ರಾಜ್ಯದಲ್ಲಿ ತನ್ನ ಪ್ರಾಭಲ್ಯ ವಿಸ್ತರಣೆಗೆ ಯತ್ನಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.
ಆರ್‌ಜೆಡಿಯಲ್ಲಿ ಸಹೋದರರ ನಡುವೆ ಕಲಹೆ ಶುರುವಾಗಿದ್ದು, ತೇಜಸ್ವಿ ಯಾದವ್ ತಮ್ಮ ಸಹೋದರ ತೇಜ್ ಪ್ರತಾಪ್ ಯಾದವ್ ಜೊತೆ ಜಿದ್ದಿಗೆ ಬಿದ್ದಿದ್ದಾರೆ. ಅಲ್ಲದೆ, ಶರದ್ ಯಾದವ್ ಜೆಡಿಯುಗೆ ಮರಳಿದ ನಂತರವೂ ಜೆಡಿಯು ಮತ್ತು ಬಿಜೆಪಿ ಮೈತ್ರಿ ಚುನಾವಣೆಯಲ್ಲಿ ಮುಂದುವರೆಯುತ್ತಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಸದ್ಯ ಉಭಯ ಪಕ್ಷಗಳು ಈ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಹೊರ ಹಾಕಿಲ್ಲ.
ಹೀಗಾಗಿ ಈ ಬಾರಿಯ ಬಿಹಾರ ಚುನಾವಣೆ ಯಾರ ತೆಕ್ಕೆಗೆ ಸಿಗಲಿದೆ ಎಂಬುದು ಕುತೂಹಲ ಮೂಢಿಸಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ದೃಶ್ಯಗಳನ್ನು ಇಸ್ರೇಲ್‌ನಲ್ಲಿ ಪ್ರದರ್ಶಿಸಲಾಗಿತ್ತೆ??

