‘ನಾನು ಯಾವ ತಪ್ಪು ಮಾಡಿಲ್ಲ, ಮಾಡುವುದು ಇಲ್ಲ’- ಕಣ್ಣೀರಿಟ್ಟ ಆ್ಯಂಕರ್ ಅನುಶ್ರೀ..!
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ. ಮಂಗಳೂರು ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ (ಸೆ.25) ಶುಕ್ರವಾರ ಸಿಸಿಬಿ ವಿಚಾರಣೆಗೆ ಗೈರಾಗಿದ್ದ ಸ್ಯಾಂಡಲ್ ವುಡ್ ನಟಿ ನಿರೂಪಕಿ ಅನುಶ್ರೀ ಸೆ.26ಕ್ಕೆ ಹಾಜರಾಗಿದ್ದರು. ಇದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಅನುಶ್ರೀ ಬಗ್ಗೆ ಅಂತ ಕಂತೆಗಳು ಹೆಚ್ಚಾಗಿವೆ. ನಟಿ ಕಮ್ ಆ್ಯಂಕರ್ ಅನುಶ್ರೀ ಡ್ರಗ್ಸ್ ಸೇವಿಸ್ತಿದ್ರಾ..? ಪಾರ್ಟಿಗಳಿಗೆ ಹೋಗ್ತಿದ್ರಾ..? ಅಥವಾ ಡ್ರಗ್ಸ್ ಹಂಚಿಕೆ ಮಾಡ್ತಾಯಿದ್ರಾ..? ಅನ್ನೋ ಊಹಾಪೋಹಗಳು ಹೆಚ್ಚಾಗಿ ಕೇಳಿಬರುತ್ತಿವೆ.
ಹೀಗಾಗಿ ಅನುಶ್ರೀ ಸಿಸಿಬಿ ಕಚೇರಿಗೆ ಭೇಟಿ ಮಾಡಿದ ದಿನವೇ ಮಾದ್ಯಮದ ಮುಂದೆ ತಾನು ನಿರಪರಾಧಿ ಎಂದಿದ್ದರು. ‘ಸಿಸಿಬಿ ವಿಚಾರಣೆ ನಾನು ಹಾಜರಾಗಿದ್ದೆ ಅಷ್ಟೇ. ನಾನು ಯಾವ ತಪ್ಪೂ ಮಾಡಿಲ್ಲ’ ಎನ್ನುವ ಮಾತುಗಳನ್ನು ಗಟ್ಟಿಯಾಗಿ ಹೇಳಿಕೊಂಡಿದ್ದರು. ಆದ್ರೀಗ ಕೆಲ ಡ್ರಗ್ಸ್ ವ್ಯಸನಿಗಳ ಸಂಪರ್ಕದಲ್ಲಿ ಅನುಶ್ರೀ ಇದ್ದಳು ಎನ್ನುವ ಮಾತಿದೆ. ಹೀಗಾಗಿ ಅನುಶ್ರೀಗೆ ಸಂಕಷ್ಟ ತಪ್ಪಿದ್ದಲ್ಲಾ ಎನ್ನಲಾಗುತ್ತಿದೆ.
ಇಂತಹ ಅಂತೆ-ಕಂತೆಗಳ ನಡುವೆ ಅನುಶ್ರೀ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಸಿಸಿಬಿಯಿಂದ ನೋಟೀಸ್ ಬಂದಿದ್ದು ಬೇಸರವಾಗಿಲ್ಲ. ಬದಲಿಗೆ ನನ್ನನ್ನು ನೋಡುವ ರೀತಿಯಿಂದ ಬೇಸರವಾಗಿದೆ. ಈ ದಿನವನ್ನು ನಾನು ಮತ್ತೆ ಎಂದಿಗೂ ನೆನೆಯಲು ಬಯಸುವುದಿಲ್ಲ. ನನಗೆ ತುಂಬಾ ನೋವಾಗಿದೆ ಎಂದು ಅನುಶ್ರೀ ವೀಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

