ಹತ್ರಾಸ್‌: ಸಾಕ್ಷಿಯನ್ನು ಸಮಾಧಿ ಮಾಡಿದ್ದಾರೆ; ತನಿಖೆಗೆ ಇನ್ನೇನು ಉಳಿದಿದೆ: ದಿನೇಶ್‌ ಗುಂಡೂರಾವ್

ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯೇ ಇಲ್ಲದಂದೆ ಮಾಡಲು ಸಂತ್ರಸ್ತೆಯ ಶವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿಯೇ ಸಮಾಧಿಯಾಗಿರುವಾಗ ಸಿಬಿಐ ತನಿಖೆ ನಡೆಸಲು ಇನ್ನೇನು ಉಳಿದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಎಫ್‌ಎಸ್‌ಎಲ್‌ ವರದಿ ತಿರುಚಲಾಗಿದೆ. ಅತ್ಯಾಚಾರವೇ ನಡೆದಿಲ್ಲ ಎಂದು ಘೋಷಣೆ‌ಯಾಗಿದೆ. ಸಂತ್ರಸ್ತೆಯ ಪೋಷಕರಿಂದ ತಮಗಿಷ್ಟದ ಹೇಳಿಕೆ ಪಡೆಯಲಾಗಿದೆ,ಅಷ್ಟೇ ಏಕೆ‌,ಮರು ಮರಣೋತ್ತರ ಪರೀಕ್ಷೆಗೆ ಅವಕಾಶವೇ ಇಲ್ಲದಂತೆ ಸಂತ್ರಸ್ತೆಯ ಶವವನ್ನು ಸುಟ್ಟು ಹಾಕಲಾಗಿದೆ. ಸಾಕ್ಷಿಯೇ ಸಮಾಧಿಯಾಗಿರುವಾಗ ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ನಡೆಸಲು ಇನ್ನೇನು ಉಳಿದಿದೆ ಎಂದು ದಿನೇಶ್‌ ಗುಂಡೂರಾವ್ ಟ್ವೀಟ್‌ ಮಾಡಿ ಕಿಡಿ ಕಾರಿದ್ದಾರೆ.

ಅತ್ಯಾಚಾರ ಮತ್ತು ಕ್ರೂರ ಹಲ್ಲೆಗೆ ಒಳಗಾಗಿದ್ದ ಹತ್ರಾಸ್‌ನ 19 ವರ್ಷದ ಯುವತಿ, ಸೆ.28 ರಂದು ಸಾವನ್ನಪ್ಪಿದ್ದರು. ಆಕೆಯ ಸಾವಿನ ನಂತರ, ಸ್ವತಃ ಸಿಎಂ ಯೋಗಿ ಆಧಿತ್ಯಾನಾಥ್‌ ಸಂತ್ರಸ್ತೆಯ ಪೊಷಕರೊಂದಿಗೆ ಮಾತನಾಡಿ ಪತ್ರಿಭಟನೆ ನಡೆಸವುದಿಲ್ಲ ಎಂದು ಪತ್ರ ಬರೆದುಕೊಡುವಂತೆ ಒತ್ತಾಯಸಿ ಪತ್ರ ಬರೆಸಿಕೊಂಡಿದ್ದರು.  ಅಲ್ಲದೆ, ಜಿಲ್ಲಾಧಿಕಾರಿ ಪೊಷಕರನ್ನು ಭೇಟಿ ಮಾಡಿ ತಮ್ಮ ಹೇಳಿಕೆಗಳನ್ನು ಬದಲಿಸುವಂತೆ ಧಮಕಿ ಹಾಕಿದ್ದರು.

ಇದೆಲ್ಲವೂ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರಂತರ ಪತ್ರಿಭಟನೆಗಳು ನಡೆಯುತ್ತಲೇ ಇವೆ. ಅಲ್ಲದೆ, ನಿನ್ನೆ, ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ಗಾಂಧಿ ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಿ ಸಾತ್ವಾಂತ ಹೇಳಿದ್ದಾರೆ. ಅಲ್ಲದೆ,

ಸಂತ್ರಸ್ತೆಯ ಕುಟುಂಬದವರು ಮುಂದಿಟ್ಟ ಐದು ಪ್ರಶ್ನೆಗಳನ್ನು ಪ್ರಿಯಾಂಕಾ ಗಾಂಧಿ ದೇಶದ ಮುಂದಿಟ್ಟಿದ್ದಾರೆ. 

  • ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು.
  • ಹತ್ರಾಸ್ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ಅವರಿಗೆ ದೊಡ್ಡ ಹುದ್ದೆ ನೀಡಬಾರದು.
  • ನಮ್ಮ ಅನುಮತಿಯಿಲ್ಲದೆ ನಮ್ಮ ಮಗಳ ದೇಹವನ್ನು ಪೆಟ್ರೋಲ್ ಬಳಸಿ ಏಕೆ ಸುಡಲಾಯಿತು?
  • ಇಷ್ಟು ದಿನ ನಮ್ಮನ್ನು ಏಕೆ ಪದೇ ಪದೇ ದಾರಿತಪ್ಪಿಸಿ, ಬೆದರಿಕೆ ಹಾಕಲಾಯಿತು?
  • ನಾವು ನಮ್ಮ ಮಗಳ ಅಂತ್ಯಕ್ರಿಯೆ ನೇರವೇರಿಸಲು ‘ಹೂವುಗಳನ್ನು’ ತಂದಿದ್ದೇವೆ. ಆದರೆ ಅಂದು ಸುಟ್ಟ ಮೃತ ದೇಹವು ನಮ್ಮ ಮಗಳದು ಎಂದು ನಾವು ಹೇಗೆ ನಂಬಬೇಕು?

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್


ಇದನ್ನೂ ಓದಿ: ಹತ್ರಾಸ್‌ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights