ಬೆಂಗಳೂರಿನಲ್ಲಿ ಜಲಪ್ರಳಯ : 100 ಮಿ.ಮೀ ಮಹಾಮಳೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ…

ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರಿದ ಮಹಾಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ರಸ್ತೆಗಳು, ಅಪಾರ್ಟ್ ಮೆಂಟ್ ಗಳಲ್ಲಿ, ಮನೆಗಳಲ್ಲಿ ಸೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಮನೆಯಲ್ಲಿರುವ ವಸ್ತುಗಳೆಲ್ಲ ನೀರಿನಲ್ಲಿ ಹರಿದು ಹೋಗಿವೆ. ಪ್ರಾಣ ಉಳಿಸಿಕೊಳ್ಳಲು ಮನೆ ಛಾವಣಿ ಏರಿ ಕುಳಿತಿದ್ದಾರೆ. ಮನೆ ಮುಂದೆ ನಿಲ್ಲಿಸಿದ ವಾಹನಗಳು, ವಸ್ತುಗಳು ಸಂಪೂರ್ಣ ಜಲಾವೃತವಾಗಿವೆ.

ಕೊರಮಂಗಲದಲ್ಲಿ ರಸ್ತೆಗಳಂತೂ ನೀರು ತುಂಬಿ ಹೋಗಿವೆ. ವಾಹನ ಸವಾರರು ತಗ್ಗು ಕಾಣದೇ ಹೈರಾಣಾಗಿ ಹೋಗಿದ್ದಾರೆ. ಹಾಳಾದ ರಸ್ತೆಗಳಿಂದ ಜನ  ಬಿಬಿಎಂಪಿಗೆ ಶಾವಾರರ ಹಿಡಿಶಾಪ ಹಾಕುತ್ತಿದ್ದಾರೆ.

ಮಹಾಮಳೆಗೆ ಬೆಚ್ಚಿಬಿದ್ದ ಬೆಂಗಳೂರು ಮಂದಿ. ನಿನ್ನೆ ರಾತ್ರಿಯಿಂದ ಬೆಂಗಳೂರಿನಲ್ಲಿ ದಾಖಲೆಯ ನೂರು ಮಿಮೀಟರ್ ಮಳೆಯಾಗಿದೆ. ಮುಂದಿನ ಮೂರು ನಾಲ್ಕು ಗಂಟೆಗಳ ಕಾಲ ಭಾರೀ ಮಳೆಯಾಗುವುದಾಗಿ ಹವಮಾನ ಇಲಾಖೆ ಮಾಹಿತಿ ನೀಡಿದೆ.

ಹೊಸಕೇರೆಹಳ್ಳಿಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಾತ್ರಿಯಿಡಿ ಸುರಿದ ದಾರಾಕಾರ ಸುಳಿದ ಮಳೆ ಅವಾಂತರವೇ ಸೃಷ್ಟಿ ಮಾಡಿದೆ. ಜಲಪ್ರಳವಾದಂತೆ ಎಲ್ಲೆಡೆ ಗೋಚರಿಸುತ್ತಿದೆ.

ಕೆ ಆರ್ ಮಾರುಕಟ್ಟೆಯ ರಸ್ತೆಗಳು ಕೆರೆಯಂತಾಗಿವೆ. ಜನ ತಮಗೆ ಬೇಕಾದ ವಸ್ತುಗಳನ್ನು ಕೈಗೆತ್ತಿಕೊಂಡು ಹೋಗುತ್ತಿದ್ದಾರೆ. ಇನ್ನೂ ರಾಜರಾಜೇಶ್ವರಿ ನಗರದಲ್ಲಿ ಮದುವೆ ಮಂಟಪಕ್ಕೆ ನೀರು ನುಗ್ಗಿ ರಿಸೆಪ್ಸನ್ಗೆ ಬಂದ ಜನ ಊಟ ಮಾಡದೇ ತೆರಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights