ಬಿಎಸ್‌ವೈ ವಿರುದ್ಧ ಯತ್ನಾಳ್ ಬಂಡಾಯ: ಸಿಎಂಗೆ ಬಿಸಿತುಪ್ಪವಾಗಿರುವ ಯತ್ನಾಳ್ ಉದ್ದೇಶವೇನು?

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಂಡಾಯ ಎದ್ದಿದ್ದಾರೆ. ಇತ್ತೀಚೆಗೆ ಅವರು ಬಹಿರಂಗವಾಗಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಯಡಿಯೂರಪ್ಪ ಕುಟುಂಬಕ್ಕೆ ತಲೆನೋವಾಗಿದ್ದಾರೆ.

ಈ ಹಿಂದೆ ಇಎಸ್‌ವೈಗೆ ಆಪ್ತರಾಗಿದ್ದ ಯತ್ನಾಳ್ ಇದ್ದಕ್ಕಿದ್ದಂತೆ ತಿರುಗಿ ಬಿದಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರಿಗೆ ಬಯಸಿದ ಸ್ಥಾನ ಸಿಗಲಿಲ್ಲ ಎಂಬುವುದು ಆರಂಭಿಸಿಕ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ.

ಹಾಗಾಗಿಯೇ ಯತ್ನಾಳ್‌ ಅವರು ಶಾಸಕ ಉಮೇಶ್ ಕತ್ತಿ ಹಾಗೂ ಇತರರ ಜೊತೆಗೆ ಸಭೆ ನಡೆಸುವ ಮೂಲಕ ಬಂಡಾಯದ ಸೂಚನೆ ನೀಡಿದರು. ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಿದ್ರೂ ಅದು ಸಾಧ್ಯವಾಗಿಲ್ಲ.

ಇದರ ಬೆನ್ನಲ್ಲೇ ಸಿಎಂ ಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು. ಇದು ಕೂಡಾ ಬಿಎಸ್‌ವೈಗೆ ಇರುಸುಮುರುಸು ತಂದೊಡ್ಡಿತು. ಇದರಿಂದ ಆಕ್ರೋಶಗೊಂಡ ಸಿಎಂ ಆಪ್ತರು ಯತ್ನಾಳ್‌ಗೆ ನೋಟಿಸ್‌ ಜಾರಿಗೊಳಿಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆದರೆ ನೋಟಿಸ್‌ ಕೂಡಾ ಜಾರಿಯಾಗಿಲ್ಲ, ಕ್ರಮವೂ ಜರಗಿಲ್ಲ.

ಇದರಿಂದ ಮತ್ತಷ್ಟು ಉಗ್ಗಿದ ಯತ್ನಾಳ್‌ ಬಿಎಸ್‌ವೈ ವಿರುದ್ಧ ತಮ್ಮ ಅಸಮಾಧಾನವನ್ನು ಮುಂದುವರಿಸಿದರು. ನೇರವಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಶುರುಮಾಡಿದ ಅವರು ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಗುರಿಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದರು.

ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಅಭಿಪ್ರಾಯವನ್ನು ಬಳಿಸಿಕೊಂಡು ಬಿಎಸ್‌ವೈ ಕುಟುಂಬದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಹೀಗೆ ಪದೇ ಪದೇ ಸಿಎಂ ಬಿಎಸ್‌ವೈ ಹಾಗೂ ಅವರ ಕುಟುಂಬದ ವಿರುದ್ಧ ಯತ್ನಾಳ್ ಆಕ್ರೋಶ ಮುಂದುವರಿದಿದೆ. ಯತ್ನಾಳ್ ಈ ನಡೆ ಬಿಎಸ್‌ವೈಗೂ ಮುಜುಗರ ಉಂಟು ಮಾಡಿದೆ.

ಸ್ವಪಕ್ಷದ ಶಾಸಕರೇ ಈ ರೀತಿಯ ಹೇಳಿಕೆ ನೀಡುತ್ತಿದ್ದರೂ ಪಕ್ಷದಿಂದ ಯಾವುದೇ ಕ್ರಮ ಜರಗದಿರುವುದು ಬಿಜೆಪಿಯಲ್ಲಿರುವ ಭಿನ್ನಮತ ವಾತಾವರಣಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಪದೇ ಪದೇ ಇಂತಹ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುರಿ ಏನು ಎಂಬುವುದು ಕುತೂಹಲ ಕೆರಳಿಸಿದೆ.


ಇದನ್ನೂ ಓದಿ: ಯಡಿಯೂರಪ್ಪ ಹೈಕಮಾಂಡ್‌ಗೂ ಸಾಕಾಗಿದ್ದಾರೆ, ಬಿಎಸ್‌ವೈ ಖುರ್ಚಿ ಉಳಿಯುವುದಿಲ್ಲ: ಬಿಜೆಪಿ ಶಾಸಕ ಯತ್ನಾಳ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights