ಮೋದಿ ಮಂತ್ರಿಮಂಡಲ ವಿಸ್ತರಣೆ ಸಾಧ್ಯತೆ: ಕರ್ನಾಟಕದ ಸಂಸದರಿಗೆ ಸಿಗುತ್ತಾ ಮಂತ್ರಿ ಪಟ್ಟ!

ಬಿಹಾರ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟದ ವಿಸ್ತರಣೆಗೂ ಕಾಲ ಕೂಡಿ ಬಂದಿದೆ ಎಂಬ ಮಾತು ಚಾಲನೆ ಪಡೆದುಕೊಂಡಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಮೋದಿ ಸಂಪುಟದ ವಿಸ್ತರಣೆ ಆಗಲಿದೆ ಎಂಬ ಮಾತು ಇತ್ತಾದರೂ ಕೋವಿಡ್ ಮತ್ತು ನಂತರ ಬಿಹಾರ ಚುನಾವಣೆಯ ಕಾರಣಕ್ಕೆ ಅದು ಕೈಗೂಡಿರಲಿಲ್ಲ.

ಈಗ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಅಂದರೆ ಮುಂದಿನ ತಿಂಗಳ ವೇಳೆಗೆ ತಮ್ಮ ಸಂಪುಟದಲ್ಲಿ ಕೆಲ ಬದಲಾವಣೆ ಮಾಡಲು ಮೋದಿ ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

25 ಮಂದಿ ಸಂಸದರನ್ನು ಆರಿಸಿ ಕಳುಹಿಸಿದ್ದರೂ ಮೋದಿ ಮಂತ್ರಿಮಂಡಲದಲ್ಲಿ ಕರ್ನಾಟಕಕ್ಕೆ ಬೆರಳೆಣಿಕೆಯ ಸ್ಥಾನಗಳು ಸಿಕ್ಕಿದೆ. ಸಂಪುಟದಲ್ಲಿದ್ದವರ ಪೈಕಿ ಕೋವಿಡ್ ಸಂದರ್ಭದಲ್ಲಿ ರೈಲು ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನರಾಗಿದ್ದರು.

ಈ ಬಾರಿ ಸಂಪುಟ ಸರ್ಕಸ್‌ನಲ್ಲಿ ಮೋದಿ ಅವರು ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿರೀಕ್ಷೆ ಇದೆ. ಸುರೇಶ್ ಅಂಗಡಿ ಅವರ ಸ್ಥಾನವನ್ನು ಶಿವಕುಮಾರ್ ಉದಾಸಿ ತುಂಬುವ ಬಗ್ಗೆ ಖಚಿತವಾದ ಮಾತುಗಳು ಕೇಳಿಬರುತ್ತಿವೆ.ಇದಲ್ಲದೇ ಇನ್ನೂ ಒಂದಿಬ್ಬರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿದೆ. ಯಾರಿಗೆ ಮಂತ್ರಿ ಭಾಗ್ಯ ಒಲಿಯಬಹುದು ಎಂದು ಸ್ಪಷಟವಾಗಿ ಹೇಳಲಾಗದಿದ್ದರೂ ಆ ಕುರಿತು ಲೆಕ್ಕಾಚಾರಗಳಂತೂ ನಡೆದಿದೆ.

ಬಲ್ಲ ಮೂಲಗಳು ಹೇಳುವ ಪ್ರಕಾರ ಈ ಬಾರಿ ಉದಾಸಿ ಅವರಲ್ಲದೇ ಮೋದಿ ಸಂಪುಟ ಸೇರಬಹುದಾದ ರಾಜ್ಯದ ನಾಯಕ ಪಟ್ಟಿಯಲ್ಲಿ ಪಿಸಿ ಮೋಹನ್, ಶೋಭಾ ಕರಾಂದ್ಲಾಜೆ, ಉಮೇಶ್ ಜಾಧವ್, ಪ್ರತಾಪ್ ಸಿಂಹ ಅವರ ಹೆಸರುಗಳಿವೆ ಎನ್ನಲಾಗಿದೆ. ಈ ಮಧ್ಯೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್‍ಯ ಕೇಂದ್ರ ಸಂಪುಟ ಸೇರುವ ಬಗ್ಗೆ ಊಹಾಪೊಹಗಳನ್ನು ಹರಿಬಿಡಲಾಗಿತ್ತು.

ಆದರೆ ಅವರಿಗೆ ಪಕ್ಷದ ಯುವಮೋರ್ಚಾದ ಅಧ್ಯಕ್ಷತೆ ನೀಡಿರುವ ಹಿನ್ನೆಲೆಯಲ್ಲಿ ಈಗಲೇ ಮಂತ್ರಿಗಿರಿ ಅಸಾಧ್ಯದ ಮಾತು ಎನ್ನಲಾಗಿದೆ.ಇನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾದ್ಯತೆ ಇದೆ.

ಅಲ್ಲದೇ ಬಿಹಾರ ಮತ್ತು ಮುಂದಿನ ವರ್ಷ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳಕ್ಕೆ ಇನ್ನಷ್ಟು ಪ್ರಾತಿನಿಧ್ಯ ನೀಡಲು ಪ್ರಧಾನಿ ನರೇಂದ್ರ ಅವರು ಮನಸ್ಸು ಮಾಡಬಹುದು ಎಂದು ಕೆಲವು ವರದಿಗಳು ಹೇಳಿವೆ.


ಇದನ್ನೂ ಓದಿ: 2020ಕ್ಕಿಂತಲೂ 2021ರ ವರ್ಷ ಭೀಕರವಾಗಿರಲಿದೆ: WFP ಮುಖ್ಯಸ್ಥ ಡೇವಿಡ್‌ ಬೀಸ್ಲೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights