2024ರ ಚುನಾವಣೆಗೆ ಬಿಜೆಪಿ ಸಿದ್ದತೆ; ವಿಭಾಗಗಳ ಸಂಖ್ಯೆ 18ರಿಂದ 28ಕ್ಕೆ ಏರಿಕೆ!

ಕೇಂದ್ರದಲ್ಲಿ ಎರಡನೇ ಬಾರಿಯೂ ಅಧಿಕಾರ ಹಿಡಿದಿರುವ ಬಿಜೆಪಿ, 2024ರ ಲೋಕಸಭಾ ಚುನಾವಣೆಯಲ್ಲಿ ಆಧಿಕಾರಕ್ಕೆರಲು ಈಗಲೇ ಕಸರತ್ತು ನಡೆಸಲು ಮುಂದಾಗಿದೆ. ಇನ್ನೂ ಗೆಲುವಿನ ಖಾತೆ ತೆರೆಯದೇ ಇರುವ ಕ್ಷೇತ್ರಗಳಲ್ಲಿಯೂ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ತಳಮಟ್ಟದ ಸಂಘಟನೆಗೆ ಮತ್ತಷ್ಟು ಒತ್ತು ನೀಡಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದೊಳಗಿನ ಘಟಕಗಳು, ವಿಭಾಗಗಳನ್ನು 18 ರಿಂದ 28ಕ್ಕೆ ಏರಿಸಿದೆ.

ಬಿಜೆಪಿಯು ಸಾಮಾಜಿಕ ಜಾಲತಾಣ ವಿಭಾಗವನ್ನು ಐಟಿ ವಿಭಾಗದಿಂದ ಬೇರ್ಪಡಿಸಿದ್ದು, ಪ್ರತ್ಯೇಕವಾಗಿ ವಿಭಾಗವನ್ನಾಗಿ ರಚಿಸಿದೆ. ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಂಡು ಮತ್ತಷ್ಟು ಹೆಚ್ಚು ಕೆಲಸ ಮಾಡಲು ಉದ್ದೇಶಿಸಿದೆ ಎಂದು ಹೇಳಿದೆ.

ಅಲ್ಲದೆ, ಇದೂವರೆಗೂ ಬಿಜೆಪಿಯಲ್ಲಿ ಇರದಿದ್ದ ಹೊಸ ವಿಭಾಗಗನ್ನು ರಚಿಸಿದೆ. ಅವುಗಳಲ್ಲಿ ಸ್ವಚ್ ಭಾರತ್ ಅಭಿಯಾನ್, ಬೇಟಿ ಬಚಾವೊ – ಬೇಟಿ ಪದಾವೊ ಮತ್ತು ನಮಾಮಿ ಗಂಗೆ ಎಂಬ ಮೂರು ಹೊಸ ವಿಭಾಗಗಳು ರಚನೆಯಾಗಿವೆ.

ಸ್ವಚ್ಛ ಭಾರತ ಅಭಿಯಾನವನ್ನು ಕೈಗೊಳ್ಳಲು ಪ್ರತಿಯೊಂದು ಶಕ್ತಿ ಕೇಂದ್ರಗಳಲ್ಲಿಯೂ ಸ್ವಯಂ ಸೇವಕರ ತಂಡವನ್ನು ರಚಿಸಲಾಗುತ್ತದೆ. ಅವುಗಳು ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವಂತೆ ಸಮಾಜದಲ್ಲಿ ಜಾಗೃತಿ ಮೂಢಿಸಲು ಹಾಗೂ ಸಮಾನ ಮನಸ್ಕ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆಯನ್ನು ಸೃಷ್ಟಿಸುತ್ತದೆ ಎಂದು ಬಿಜೆಪಿ ತಿಳಿಸಿದೆ.


ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣೆ; ರಾಜ್ಯಾದ್ಯಂತ ಚುನಾವಣಾ ಬಹಿಷ್ಕಾರದ ಪರ್ವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights