2014ರ ಚನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಸೋನಿಯಾಗಾಂಧಿ ಕಾರಣ; ಆತ್ಮಕತೆಯಲ್ಲಿ ಪ್ರಣಬ್ ಮುಖರ್ಜಿ

ದೇಶಾದ್ಯಂತ ರೈತರ ಪ್ರತಿಭಟನೆ ಮಹತ್ವ ಪಡೆದುಕೊಂಡಿದ್ದು, ಆಡಳಿತಾರೂಢ ಬಿಜೆಪಿ ಹೊಸ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ವಿರೋಧ ಪಕ್ಷಗಳು ಕೃಷಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿಯೂ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಆತ್ಮಕತೆಯ ಕೊನೆಯ ಸಂಪುಟ ಭಾರೀ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಕಾಂಗ್ರೆಸ್‌ನಲ್ಲಿಯೇ ಆಂತರಿಕ ಭಿನ್ನಾಭಿಪ್ರಾಯಗಳು, ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಣಬ್‌ ಮುಖರ್ಜಿ ಅವರು ತಮ್ಮ ಆತ್ಮಕತೆಯ ಕೊನೆಯ ಸಂಪುಟ ಕುತೂಹಲಕ್ಕೆ ಕಾರಣವಾಗಿದ್ದು, 2014ರ ಚುನಾವಣಾ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂದು ಪ್ರಣಬ್‌ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಎಂದಿಗೂ ಪರಿಣಾಮಕಾರಿ ಪರ್ಯಾಯ ಪಕ್ಷವಾಗಿಲ್ಲ: ಕೈ ಮುಖಂಡ ಕಪಿಲ್‌ ಸಿಬಲ್‌

ಆಗಸ್ಟ್‌ ತಿಂಗಳಿನಲ್ಲಿ ನಿಧನರಾದ ಪ್ರಣಬ್‌ ಮುಖರ್ಜಿ, ತಮ್ಮ ಆತ್ಮಕತೆಯಲ್ಲಿ “ನಾನು ಪ್ರಧಾನಿಯಾಗಿದ್ದಿದ್ದರೆ, ಕಾಂಗ್ರೆಸ್ ಪಕ್ಷ ಸೋಲುತ್ತಿರಲಿಲ್ಲ ಎಂಬ ಅಭಿಪ್ರಾಯ ಪಕ್ಷದ ಕೆಲ ಸದಸ್ಯರಲ್ಲಿತ್ತು” ಎಂದೂ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

“ನಾನು 2004ರಲ್ಲೇ ಪ್ರಧಾನಿಯಾಗಬೇಕಿತ್ತು ಎಂಬ ಅಭಿಪ್ರಾಯವನ್ನು ಕೆಲ ಕಾಂಗ್ರೆಸ್ಸಿಗರು ಮುಂದಿಟ್ಟಿದ್ದರು. 2014ರ ಚುನಾವಣಾ ಸೋಲನ್ನು ತಪ್ಪಿಸಬಹುದಿತ್ತು ಎನ್ನುವುದು ಅವರ ಅಭಿಪ್ರಾಯ. ಇದನ್ನು ನಾನು ಒಪ್ಪುವುದಿಲ್ಲವಾದರೂ, ನಾನು ರಾಷ್ಟ್ರಪತಿಯಾದ ಬಳಿಕ ಪಕ್ಷದ ನಾಯಕತ್ವ ರಾಜಕೀಯ ಗಮನವನ್ನು ಕಳೆದುಕೊಂಡಿತು. ಸೋನಿಯಾಗಾಂಧಿ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಅಸಮರ್ಥರಾದರು ಹಾಗೂ ಡಾ.ಮನಮೋಹನ ಸಿಂಗ್ ದೂರ ಉಳಿದು ಸಂಸದರ ಜತೆ ವೈಯಕ್ತಿಕ ಸಂಪರ್ಕಕ್ಕೆ ಇತಿಶ್ರೀ ಹಾಡಿದರು ಎಂಬ ಉಲ್ಲೇಖ ಕೃತಿಯಲ್ಲಿದೆ” ಎಂದು ಪ್ರಕಾಶಕರಾದ ರೂಪಾ ವಿವರಿಸಿದ್ದಾರೆ.

ಈ ಕೃತಿ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪ್ರಣಬ್ ಬಹುತೇಕ ಎಲ್ಲ ಕಾಂಗ್ರೆಸ್ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿದ್ದರು ಹಾಗೂ 2012ರಲ್ಲಿ ರಾಷ್ಟ್ರಪತಿಯಾದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಕಾರಣವಾದ ಅಂಶಗಳ ಬಗ್ಗೆ ಅವರು ಈ ಭಾಗದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ; ಕಾಂಗ್ರೆಸ್‌ಗೆ ನಿರಾಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights