ಜನವರಿಯಿಂದ ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಚಿಂತನೆ : ಬೇಸಿಗೆ ರಜೆಗೆ ಬೀಳುತ್ತಾ ಹೊಡೆತ..?

ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಮಕ್ಕಳ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ. ಸುಮಾರು ಎಂಟು ತಿಂಗಳಿನಿಂದ ಮಕ್ಕಳು ಶಾಲೆಗೆ ಹೋಗದೇ ಕೆಲತಿಂಗಳು ಸಂಪೂರ್ಣವಾಗಿ ಮನೆಯಲ್ಲೇ ಕಳೆದರೆ. ಇನ್ನೂ ಕೆಲ ತಿಂಗಳು ಆನ್ ಲೈನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊರೊನಾ ಪ್ರಕರಣಗಳು ಕ್ಷಿಣಿಸುತ್ತಿರುವ ವೇಳೆ ಶಾಲೆಗಳು ಪುರಾರಂಭಗೊಳ್ಳುತ್ತವೆ ಎನ್ನುವ ಊಹಾಪೋಹಗಳು ಕೂಡ ಸಾಕಷ್ಟು ಹರಿದಾಡುತ್ತಿವೆ. ಆದರೆ ಬಹುತೇಕ ಪೋಷಕರು ಶಾಲೆ ಆರಂಭಿಸಲು ನಿರಾಕರಿಸುತ್ತಿದ್ದಾರೆ.

ಇದರ ಮಧ್ಯೆ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಕೋವಿಡ್ ಕಾರಣದಿಂದ ರಜೆಯಲ್ಲಿರುವ ವಿದ್ಯಾರ್ಥಿಗಳು ಮುಂದಿನ ವರ್ಷ ಬೇಸಿಗೆ ರಜೆಯಲ್ಲಿಯೂ ಶಾಲೆಗೆ ಹೋಗಬೇಕಾಗಿ ಬರಬಹುದು. ಬಹುತೇಕ ಜನವರಿಯಿಂದ ಶಾಲಾ ತರಗತಿಗಳನ್ನು ಹಂತಹಂತವಾಗಿ ಆರಂಭವಾಗುವ ಸಾಧ್ಯತೆ ಇದ್ದು ಬೇಸಿಗೆ ರಜೆ ಕಡಿತ ಮಾಡಿ ಪಾಠ ಪ್ರವಚನ ಮುಂದುವರಿಸುವುದು ಸರಕಾರದ ಐಡಿಯಾ ಆಗಿದೆ.

ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳು ಪಾಠ ಕಲಿಕೆಯಿಂದ ವಂಚಿತರಾಗುವುದನ್ನು ತಪ್ಪಿಸಬಹುದು ಎಂಬುದು ಶಿಕ್ಷಣ ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಶೈಕ್ಷಣಿಕ ವರ್ಷವನ್ನು ಹಿಗ್ಗಿಸುವ ಮೂಲಕ ಕಳೆದುಹೋದ ಸಮಯವನ್ನು ಆದಷ್ಟೂ ಸರಿದೂಗಿಸಬಹುದು ಎಂಬ ಚಿಂತನೆ ಸರಕಾರದ ಮಟ್ಟದಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಕೋವಿಡ್‌ನಿಂದಾಗಿ ಮುಚ್ಚಿರುವ ಶಾಲೆಗಳ ಪುನಾರಾಂಭದ ಬಗ್ಗೆ ಮಾಸಾಂತ್ಯಕ್ಕೆ ಸರಕಾರದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಮೊದಲು 10 ಮತ್ತು 12ನೇ ತರಗತಿಯಿಂದ ಆರಂಭಿಸಿ ಕ್ರಮೇಣ ಆರನೇ ತರಗತಿವರೆಗೆ ಶಾಲೆಗಳಲ್ಲಿ ಪಾಠ ಪ್ರವಚನಕ್ಕೆ ಸರಕಾರ ಅನುಮತಿ ನೀಡಬಹುದು ಎಂಬ ಸೂಚನೆಗಳು ಲಭಿಸಿವೆ.

ಕಳೆದ 2 ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮ ಕಲಿಕಾ ಅಭಿಯಾನವನ್ನು ಮತ್ತೆ ಆರಂಭಿಸಲು ಸರಕಾರ ಈಗಾಗಲೇ ನಿರ್ಧರಿಸಿದೆ.ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ನಡೆsಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ಈಗಿರುವ ಆನ್ಲೈನ್, ಚಂದನಾ ವಾಹಿನಿಯ ಪಾಠಗಳೂ ಮುಂದುವರೆಯಲಿವೆ.

ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬಂದು ಸಾಮಾಜಿಕ ಅಂತರ ಕಾಪಾಡಿಕೊಂಡೇ ಪಾಠ ಕಲಿಯಬೇಕಾಗಿದೆ.ಶಾಲೆಗೆ ಬರಲು ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights